Advertisement
ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಭಾಗದಲ್ಲಿ ಮಾವು ಬೆಳೆ ಕುಸಿತ ಬಗ್ಗೆ ಪ್ರಸ್ತಾವಿಸಿದರು.ಇದಕ್ಕೆ ದನಿಗೂಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಡೀ ರಾಜ್ಯದಲ್ಲಿ ಮಾವು ಬೆಳೆ ಕುಸಿತದ ವರದಿ ಇದೆ. ಹೀಗಾಗಿ, ಅಧಿಕಾರಿಗಳ ಜತೆ ಚರ್ಚಿಸಿ ಇದೇ ಮೊದಲ ಬಾರಿಗೆ ಬೆಂಬಲ ಬೆಲೆಯಡಿ ಖರೀದಿಗೆ ತೀರ್ಮಾನಿಸಿದ್ದೇವೆ. ಇದರಿಂದ 15ರಿಂದ 18 ಕೋಟಿ ರೂ. ಹೊರೆಯಾಗುತ್ತದೆ. ಆದರೆ, ರೈತರನ್ನು ಉಳಿಸಲು ನಮ್ಮ ಸರಕಾರ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದರು. ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ, ಬೆಂಬಲ ಬೆಲೆಯಡಿ ಖರೀದಿ ತೀರ್ಮಾನಕ್ಕೆ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿ, ಸರಕಾರದ ತೀರ್ಮಾನವನ್ನು ರೈತರಿಗೆ ತಿಳಿಸಿ ಎಂದು ಕೃಷಿ ಸಚಿವರಿಗೆ ಸೂಚನೆ ನೀಡಿದರು.