Advertisement

ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್‌ ಬೆಂಬಲಿಸಿ

03:56 PM May 01, 2018 | |

ಕಕ್ಕೇರಾ: ರಾಜ್ಯದಲ್ಲಿ ಐದು ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸಿ ಕಾಂಗ್ರೆಸ್‌ ಸರ್ಕಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಈ ಹಿಂದೇ ಐದು ವರ್ಷದಲ್ಲಿ ರಾಜ್ಯ ಕಂಡರಿಯದ ಮೂರು ಜನ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ಪಕ್ಷಕ್ಕೆ ಜನ ಬೆಂಬಲಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪರ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ಅಧಿಕಾರಲ್ಲಿದ್ದವರು ವಿವಿಧ ಹಗರಣಗಳಲ್ಲಿ ಸಿಕ್ಕು ಜೈಲು ಅನುಭವಿಸಿದ್ದು ಬಿಟ್ಟರೆ ಏನೂ ಮಾಡಿಲ್ಲ. ಅಭಿವೃದ್ಧಿ ಮಾತ್ರ ಶೂನ್ಯ. ಹೀಗಾಗಿ ನಾನು ಮುಖ್ಯಮಂತ್ರಿಯಾಗಿ ಸುದೀರ್ಘ‌ ಐದು ವರ್ಷ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅಧಿಕಾರ ಚಲಾಯಿಸಿದ್ದು ನನಗೆ ಸಲ್ಲುತ್ತದೆ. ಹೀಗಾಗಿ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದರು.

ಪ್ರಣಾಳಿಕೆಗಳಲ್ಲಿ ಜನರಿಗೆ ನೀಡಿದ್ದ 165 ಭರವಸೆಯಗಳನ್ನು ಈಡೇರಿಸಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರಕಾರವಾಗಿದೆ. ಬಿಜೆಪಿಯವರು ಪದೇ ಪದೇ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಂಥವರ ಕೈಯಲ್ಲಿ ಅಧಿಕಾರ ನೀಡಿದರೆ ರಾಜ್ಯವನ್ನೇ ಲೂಟಿ ಮಾಡುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗ ಎಸ್‌ಸಿಪಿ, ಟಿಎಸ್‌ಪಿ ಯೋಜನೆಡಿಯಲ್ಲಿ 22 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಅದೇ ಯೋಜನೆಡಿಯಲ್ಲಿ 89 ಸಾವಿರ ಕೋಟಿ ರೂ. ರೈತರ ಜಮೀನುಗಳಿಗೆ ನೀರಾವರಿ ಇನ್ನಿತರಕ್ಕಾಗಿ ಖರ್ಚು ಮಾಡಲಾಗಿದೆ. ರೈತರ ಜಮೀನುಗಳಿಗೆ ನೀರಾವರಿಗಾಗಿ 50 ಸಾವಿರ ಕೋಟಿ
ರೂ. ಖರ್ಚು ಮಾಡಿದ್ದು, ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಹಸಿವು ಮುಕ್ತ, ಗುಡಿಸಲು ಮುಕ್ತ, ನವ ಕರ್ನಾಟಕ ನಿರ್ಮಾಣವೇ ನಮ್ಮ ಕಾಂಗ್ರೆಸ್‌ ಸರಕಾರದ ಉದ್ದೇಶವಾಗಿದೆ. ಮೋದಿ, ಶಾ ಅವರು ಬಂದರೂ ನನಗೆ ಏನೂ ಮಾಡಲಾಗುವುದಿಲ್ಲ. ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಸರಕಾರ ಆಡಳಿತಕ್ಕೆ ಬರಲಿದೆ. ಸುರಪುರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮುತ್ಸದ್ಧಿ ನಾಯಕ, ಅವರನ್ನು ಮತ್ತೂಮ್ಮೆ ಬೆಂಬಲಿಸಿ
ಬಹುಮತದಿಂದ ಆರಿಸಿ ತಂದಾಗ ನನಗೆ ಮತಷ್ಟು ಬಲ ಬರುತ್ತದೆ ಎಂದರು.

ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಚಿವ ರಾಜುಗೌಡ ನನ್ನನ್ನು ಸೋಲಿಸಲು ಪ್ರಚಾರಕ್ಕೆ ಹೋಗಿದ್ದಾರೆ. ರಾಜುಗೌಡ್ರೇ ನಿಮ್ಮಂತಹ
ನೂರು ಜನ ಬಂದರೂ ನನಗೆ ಸೋಲಿಸಲು ಆಗುವುದಿಲ್ಲ. ನಿಮ್ಮ ಮಾತು ಕೇಳಲು ಜನರು ಹುಚ್ಚರಲ್ಲ. ಮೊದಲು ಸುರಪುರ ಕೇತ್ರದಲ್ಲಿ ಗೆದ್ದು ಬನ್ನಿ.
ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿಯಿಂದ ವಂಚಿತರಾಗಬೇಕಾಗುವ ಕಾಲ ದೂರವಿಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡುವ ಹುನ್ನಾರ ಬಿಜೆಪಿ ನಡೆಸಿದ್ದು, ಇವರಿಗೆ ಮತದಾನದ ಮೂಲಕ ತಕ್ಕಪಾಠ ಕಲಿಸಬೇಕು. ಧರ್ಮ ಧರ್ಮದ ನುಡುವೆ ಕಲಹ ಸೃಷ್ಟಿಸುತ್ತಾರೆ. ಜಾತಿ ಬೇಧ, ತಾರತಮ್ಯ ತಂದು ಸಮಾಜವನ್ನು ಹೊಡೆದಾಳುವ ನೀತಿ ಬಿಜೆಪಿಯವರು ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ, ದೇಶದಲ್ಲಿ ಹಿಂದೂ, ಮುಸ್ಲಿಂ ಒಂದೇ ಎಂಬ ತತ್ವ, ಸಿದ್ಧಾಂತ, ಸಂವಿಧಾನ ಸಂರಕ್ಷಣೆಯೊಂದಿಗೆ ಆಡಳಿತ ನಡೆಸುವ ಪಕ್ಷ ಎಂದರೆ ಕಾಂಗ್ರೆಸ್‌. ಹೀಗಾಗಿ ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ.
ಸಿ.ಎಂ. ಇಬ್ರಾಹಿಂ, ಕೇಂದ್ರದ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next