Advertisement

ನಿರುದ್ಯೋಗಿಗಳಿಗೆ ಮೇಳ ಆಸರೆ

09:40 AM Jan 18, 2019 | |

ಬಸವಕಲ್ಯಾಣ: ದೊಡ್ಡ-ದೊಡ್ಡ ಕಂಪನಿಗಳ ಪ್ರಭಾವದಿಂದ ಗ್ರಾಮೀಣ ಪ್ರದೇಶದ ಮೂಲ ಕಸುಬುಗಳು ನಿಂತು ಹೋಗಿವೆ. ಇದರಿಂದ ದಿನೇ ದಿನೇ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕರ ಬದುಕಿಗೆ ಆಸರೆಯಾಗಲು ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಸಂತೋಷದ ವಿಷಯವಾಗಿದೆ ಎಂದು ಬಸವ ಮಹಾಮನೆ ಅಧ್ಯಕ್ಷ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಹೇಳಿದರು.

Advertisement

ನಗರದ ಮಾತೆ ಮಹಾದೇವಿ ಸಭಾಂಗಣದಲ್ಲಿ ಗುರುವಾರ ಡಾ| ಬಿ.ಆರ್‌.ಅಂಬೇಡ್ಕರ್‌ ಸೋಸಿಯಲ್‌ ವೆಲ್ಫೇರ್‌ ಟ್ರಸ್ಟ್‌ ಬೆಂಗಳೂರು, ದಿ.ನಡ್ಜ್ ಫೌಂಡೇಶನ್‌ (ಗುರುಕುಲ) ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್‌ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಂಬಾರಿಕೆ, ಕುಂಬಾರಿಕೆ, ನೇಕಾರ, ಬಡಿಗತನ ಸೇರಿದಂತೆ ಸಾಕಷ್ಟು ಕಸುಬುದಾರರು ಕೆಲಸ ಮಾಡುತ್ತಿದ್ದರು. ಆದರೆ ನೂತನ ತಂತ್ರಜ್ಞಾನ ಆವಿಷ್ಕಾರದಿಂದ ಎಲ್ಲ ಕೆಲಸಗಳು ಮುಳಗುವ ಹಂತಕ್ಕೆ ಬಂದು ತಲುಪುವಂತಾಗಿ, ದೇಶದ ತುಂಬಾ ನಿರುದ್ಯೋಗ ಶಾಪವಾಗಿ ಪರಿಣಮಿಸಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳು ಈ ಮೇಳದ ಸದುಪಯೋಗ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದಿ.ನಡ್ಜ್ ಫೌಂಡೇಶನ್‌ ಮುಖ್ಯಸ್ಥ ವಿನಾಯಕ, ಉದ್ಯೋಗ ಮೇಳದ ಉದ್ದೇಶ ಮತ್ತು ಮಹತ್ವ ಕುರಿತು ತಿಳಿಸಿದರು.

ತಾಪಂ ಇಒ ಮಡೋಳಪ್ಪಾ ಪಿ.ಎಸ್‌. ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಪರಿಶ್ರಮ ಪಟ್ಟಾಗ ಮಾತ್ರ ನಾವು ಏನಾದರೂ ಸಾಧಿಸಲು ಸಾಧ್ಯ. ಇಂತಹ ಸಂದರ್ಭದಲ್ಲಿ ನಿಮ್ಮ ಮನೆ ಬಾಗಿಲಿಗೆ ತರಬೇತಿ ಜೊತೆ ಉದ್ಯೋಗ ಒದಗಿಸುವ ಸೌಭಾಗ್ಯ ಕೂಡಿ ಬಂದಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಬಸವ ಮಹಾಮನೆ, ಅಲ್ಲಮಪ್ರಭು ಶೂನ್ಯಪೀಠದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ವೆಲ್ಫೇರ್‌ ಟ್ರಸ್ಟ್‌ ಅಧ್ಯಕ್ಷ ಸಂಜು ಗಾಯಕವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ತಹಶೀಲ್ದಾರ್‌ ಜಗನ್ನಾಥರೆಡ್ಡಿ, ಚಲನಚಿತ್ರ ನಿರ್ಮಾಕ ಬಸವರಾಜ ಹಿರೇಮಠ, ಸಂಚಾರಿ ಪೊಲೀಸ್‌ ಠಾಣೆ ಪಿಎಸ್‌ಐ ಜೈಶ್ರೀ ವಿ.ಹೂಡಲ್‌, ನಾಡ ತಹಶೀಲ್ದಾರ್‌ ಶಿವಾನಂದ ಮೇತ್ರೆ, ದಿಲೀಪ ಸಿಂಧೆ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next