Advertisement

ಕೈಗಾರಿಕೆಗಳ ಪುನಶ್ಚೇತನಕ್ಕೆ ಸಹಕರಿಸಿ: ಡೀಸಿ

04:52 AM Jun 25, 2020 | Lakshmi GovindaRaj |

ಮಂಡ್ಯ: ಲಾಕ್‌ಡೌನ್‌ ಹಿನ್ನೆಲ್ಲೆಯಲ್ಲಿ ಕೈಗಾರಿಕೆಗಳು ಹಾಗೂ ಇತರೆ ಎಲ್ಲಾ ಕ್ಷೇತ್ರಗಳು ಆರ್ಥಿಕವಾಗಿ ನಷ್ಟ ಅನುಭವಿಸಿದ್ದು, ಕೈಗಾರಿಕೆಗಳ ಆರ್ಥಿಕ ಪುನಶ್ಚೇತನಕ್ಕಾಗಿ ಪ್ರಧಾನ ಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಎಂಎಸ್‌ಎಂಇ ಘಟಕಗಳಿಗೆ 3 ಲಕ್ಷ ಕೋಟಿ ರೂ.ವರೆಗೆ ಸಾಲ ನೀಡುವ ಸಂಬಂಧ ಜಿಲ್ಲೆಯ ಬ್ಯಾಂಕ್‌ಗಳು ಉದ್ದಿಮೆದಾರರಿಗೆ ಸಹಕರಿಸಬೇಕು ಎಂದು ಡೀಸಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

Advertisement

ಬುಧವಾರ ಡೀಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಲೀಡ್‌ ಬ್ಯಾಂಕ್‌ ಮತ್ತು ಜಿಲ್ಲಾ ಕೈಗಾರಿಕೆಗಳ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಜಿಇಸಿಎಲ್‌ ಸಾಲದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್‌ 19 ವೇಳೆ ಕೈಗಾರಿಕೆಗಳು ತೊಂದರೆಯಲ್ಲಿದ್ದು, ಈ ಯೋಜನೆಯಡಿ ಅವರಿಗೆ  ನಿಯಾಮನುಸಾರ ಸಾಲ ನೀಡಲು ಕ್ರಮವಹಿಸಬೇಕು ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳು ಅವರಿಗೆ ಈ ಯೋಜನೆಯ ಬಗ್ಗೆ ಅರಿವು ಮೂಡಿಸಿ, ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ಪ್ರಧಾನ ಮಂತ್ರಿಯವರ ಆತ್ಮ ನಿರ್ಭರ  ಯೋಜನೆಯಡಿ ಎಂಎಸ್‌ ಎಂಇ ಘಟಕಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ಮುಂದಾಗಬೇಕು. ಈ ಯೋಜನೆಯ ಪ್ರಕಾರ ಈಗಾಗಲೇ ಸಾಲ ಪಡೆದಿರುವ ಕೈಗಾರಿಕೆಗಳು ಕೋವಿಡ್‌ನಿಂದ ನಷ್ಟ ಅನುಭವಿಸಿದ್ದು, ಸಾಲ ನೀಡುವ ಮೂಲಕ  ಕೈಗಾರಿಕೆಗಳು ಆರ್ಥಿಕವಾಗಿ ಬೆಳೆವಣಿಗೆಯಾಗಲು ಈ ಯೋಜನೆ ಸಹಕಾರಿಯಾಗಿದೆ ಎಂದ ರು. ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೆಶಕ ಕದರಪ್ಪ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಉದ್ದಿಮೆದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next