Advertisement

ಭಾರತ ಬಂದ್‌ ಮುಷ್ಕರಕ್ಕೆ ಬೆಂಬಲಿಸಿ

03:03 PM Dec 18, 2018 | |

ವಿಜಯಪುರ: ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಕ್ಕುಗಳ ಈಡೇರಿಕೆಗೆ ಆಗ್ರಹಿಸಿ ಬರುವ ಜನೇವರಿ 8ರಿಂದ ದೇಶಾದ್ಯಂತ ಹಮ್ಮಿಕೊಂಡಿರುವ ಭಾರತ ಬಂದ್‌ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಸಿಐಟಿಯು ಅಂಗನವಾಡಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷೆ ಶಾಂತಾ ಘಂಟಿ ಮನವಿ ಮಾಡಿದರು.

Advertisement

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ-ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಜರುಗಿದ ಅಂನಗೌಡಿ ನೌಕರರ ವಿಜಯಪುರ ತಾಲೂಕು ಮೂರನೇ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾನ ಕೆಲಸಕೆ ಸಮಾನ ವೇತನವಾಗಿ ಕನಿಷ್ಠ 18 ಸಾವಿರ ರೂ. ಕೂಲಿ ನೀಡಬೇಕು. ಅಂಗನವಾಡಿ ನೌಕರರ ಸೇವೆ ಕಾಯಂಗೊಳಿಸಬೇಕು. ಎನ್‌ಪಿಎಸ್‌ ಭವಿಷ್ಯ ನಿಧಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಆಗ್ರಹಿಸಿದರು.
 
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಯಾವುದೇ ಹಕ್ಕುಗಳು ಸುಲಭವಾಗಿ ದೊರೆಯುವುದಿಲ್ಲ. ಬದಲಾಗಿ ಹೋರಾಟಗಳಿಂದ ಮಾತ್ರ ಎಲ್ಲವನ್ನು ಪಡೆಯಲು ಸಾಧ್ಯ. ಅಂಗನವಾಡಿ ನೌಕರರು
ಸೇರಿದಂತೆ ಶ್ರಮಿಕ ಸಮುದಾಯವಾದ ಕಾರ್ಮಿಕರ ಯಾವುದೇ ಹೋರಾಟಕ್ಕೆ ಕೈ ಜೋಡಿಸಲು ಸಿದ್ಧ. ಬೇಡಿಕೆಗಳ
ಈಡೇರಿಕೆಗೆ ಆಗ್ರಹಿಸಿ ನಡೆಯುವ ಹೋರಾಟಕ್ಕೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲ ನೀಡಲು ಸದಾ ಸಿದ್ಧ
ಎಂದರು.

ಅಧ್ಯಕ್ಷತೆ ವಹಿಸಿದ್ಧ ಸಂಘಟನೆ ತಾಲೂಕಾಧ್ಯಕ್ಷೆ ಸುನಂದಾ ನಾಯಿಕ ಮಾತನಾಡಿ, ಜನೇವರಿ 8ರಿಂದ ಎರಡು ದಿನ ನಡೆಯುವ ಮುಷ್ಕರಕ್ಕೆ ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಇದಲ್ಲದೇ ಜನೇವರಿ 31ರಂದು ನಡೆಯಲಿರುವ 7ನೇ ಅಂಗನವಾಡಿ ನೌಕರರ ರಾಜ್ಯ ಸಮ್ಮೇಳನದಲ್ಲೂ  ಜಯಪುರ
ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯದರ್ಶಿ ಸುವರ್ಣಾ ಬಿರಾದಾರ ಹಲಗಣಿ ಸ್ವಾಗತಿಸಿದರು. ಅಣ್ಣಾರಾಯ ಈಳಗೇರಿ, ಲಕ್ಷ್ಮಣ ಹಂದ್ರಾಳ
ವೇದಿಕೆಯಲ್ಲಿದ್ದರು. ದ್ರಾಕ್ಷಾಯಣಿ ಧ್ವಜಾರೋಹಣ ನೆರವೇರಿಸಿದರು. ಗೀತಾ ಜಾಧವ, ಪಟೇಲ್‌, ಸಂಗೀತಾ ದುಂಡಮ್ಮ, ಎಸ್‌. ಎಂ. ಜಮಾದಾರ, ಚನ್ನಮ್ಮ ಖಾನಾಪುರ, ಮಂಜುಳಾ ಪತ್ತಾರ, ರಾಜೇಶ್ವರಿ, ಸಂಕದ ಝರಿನಾ, ಛಾಯಾ ತಬಸುಮ, ದೊಡ್ಡವ್ವ ಸಿದ್ದಮ್ಮಾ, ಲಲಿತಾ ಪೋಳ, ಶಾಲಿನಿ ಇದ್ದರು. ಇದೇ ವೇಳೆ ಸಂಘಟನೆಯ ತಾಲೂಕು ಘಟಕ
ರಚಿಸಲಾಯಿತು. ಸುನಂದಾ ನಾಯಿಕ ಅಧ್ಯಕ್ಷರಾಗಿ, ಜಯಶ್ರೀ ಪೂಜಾರಿ ಗೌರವಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಕಾರ್ಯದರ್ಶಿ ಸುವರ್ಣಾ ಬಿರಾದಾರ, ಖಜಾಂಚಿ ರಿಜ್ವಾನ್‌ ಕರೋಸಿ ಇವರನ್ನು ಆಯ್ಕೆ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next