Advertisement

ನಗರಗಳ ಅಭಿವದ್ಧಿಗೆ ಸಹಕಾರ ನೀಡಿ

05:51 PM Dec 31, 2021 | Team Udayavani |

ರಬಕವಿ-ಬನಹಟ್ಟಿ: ಅಭಿವೃದ್ಧಿ ಹಿನ್ನಲೆಯಲ್ಲಿ ನೂತನ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೆ ಸಹಕಾರ ನೀಡಿ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ಶುಕ್ರವಾರ ರಾಮಪುರದ ಶ್ರೀ ದಾನೇಶ್ವರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡ ನೂತನ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ನೂತನ ಅಧ್ಯಕ್ಷ ನಗರ ಸೌಂದರ್ಯಕರಣಕ್ಕೆ ಹಾಗೂ ಅಭಿವದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಬಸಪರಪ್ಪ ಹಟ್ಟಿಯವರು ಹಿರಿಯರು, ಅನುಭವಿಕರಾಗಿದ್ದು, ಉತ್ತಮ ವ್ಯಕ್ತಿಯಾಗಿದ್ದಾರೆ.  ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಅಭಿವೃದ್ಧಿಯ ನಿಟ್ಟಿನಲ್ಲಿ ಅವರಿಗೆ ಪ್ರತಿಯೊಬ್ಬರು ಸಹಕಾರ ನೀಡಿ ಎಂದರು.

ರಬಕವಿ ಬನಹಟ್ಟಿ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯಕ್ಕೆ ಬೇಕಾದ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸಂಬಧಪಟ್ಟ ಸಚಿವ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಮತ್ತು ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 400 ಆಶ್ರಯ ಮನೆ ಮಂಜೂರಾಗಿದ್ದು ಆದಷ್ಟು ಬೇಗನೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವುಗಳನ್ನು ಹಂಚಲಾಗುವುದು. ನಗರೋತ್ತಾನ ಯೋಜನೆಯಲ್ಲಿ 35 ಕೋಟಿ ಮಂಜೂರಾತಿ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ರಸ್ತೆ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಬಸಪರಪ್ಪ ಹಟ್ಟಿ ಮಾತನಾಡಿ, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಗರಗಳ ಸೌಂದರ್ಯ ಹೆಚ್ಚಳ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ತಮ್ಮ ಸಹಾಯ ಸಹಕಾರ ಇರಲಿ ಎಂದರು.

Advertisement

ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈಶ್ವರ ನಾಗರಾಳ, ದುಂಡಪ್ಪ ಮಾಚಕನೂರ ಮಾತನಾಡಿದರು.

ಸಮಾರಂಭದಲ್ಲಿ ಜಿಲ್ಲಾ ಯೋಜನಾ ಪ್ರಾಧಿಕಾರದ ಅಧಿಕಾರಿ ರಂಜನಾ ಮನವಳ್ಳಿ, ಧರೆಪ್ಪ ಉಳ್ಳಾಗಡ್ಡಿ, ದುಂಡಪ್ಪ ಮಾಚಕನೂರ, ಸುಬಾಸ ಚೋಳಿ, ಈಶ್ವರ ನಾಗರಾಳ, ರಾಜೇಂದ್ರ ಅಂಬಲಿ, ಮನೋಹರ ಶಿರೋಳ, ಶಂಕರೆಪ್ಪ ಬುಜರುಕ, ಮಲ್ಲಿಕಾರ್ಜುನ ಬಾಣಕಾರ, ರಾಮಣ್ಣ ಹುಲಕುಂದ, ಪರಪ್ಪ ಬಿಳ್ಳೂರ, ಶ್ರೀಶೈಲ ಬೀಳಗಿ, ಗಣಪತರಾವ ಹಜಾರೆ, ಆನಂದ ಕಂಪು, ರಾಮದಾಸ ಸಿಂಗನ್, ಜಯಪ್ರಕಾಶ ಸೊಲ್ಲಾಪುರ, ಮಹಾಲಿಂಗಪ್ಪ ಜಡಿ, ಬಾದಸಾ ಮುಲ್ಲಾ, ಶೇಖರ ಅಂಗಡಿ, ಸುರೇಶ ಚಿಂಡಕ, ಸುವರ್ಣ ಕೊಪ್ಪದ, ಶಿವಾನಂದ ಬಾಗಲಕೋಟಮಠ, ಮಹಾಲಿಂಗಪ್ಪ ಕರಡಿ, ರವಿ ಕೊರ್ತಿ ಸೇರಿದಂತೆ ಅನೇಕರು ಇದ್ದರು.

ರಕ್ಷಿತಾ ಜೋಶಿ ಪ್ರಾರ್ಥಿಸಿದರು. ಪ್ರಕಾಶ ಸಿಂಗನ ಸ್ವಾಗತಿಸಿದರು. ಮ.ಕೃ.ಮೇಗಾಡಿ ನಿರೂಪಿಸಿದರು. ಎಂ.ಎಸ್.ಬದಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರಿನ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next