Advertisement

ಎಸ್ಸಿ ಪ್ರಮಾಣ ಪತ್ರಕ್ಕಾಗಿ ಜಂಗಮರ ಹೋರಾಟಕ್ಕೆ ಬೆಂಬಲ

05:53 PM Jul 21, 2022 | Team Udayavani |

ಲಿಂಗಸುಗೂರು: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಕಳೆದ 15 ದಿನಗಳಿಂದ ವೀರಶೈವ ಜಂಗಮ ಸಮಾಜ ಪಟ್ಟಣದ ಎಸಿ ಕಚೇರಿ ಬಳಿ ನಡೆಸುತ್ತಿರುವ ಹೋರಾಟಕ್ಕೆ ಬುಧವಾರ ಪಂಚಮಸಾಲಿ ಸಮಾಜದ ಮುಖಂಡರು ಬೆಂಬಲ ನೀಡಿದರು.

Advertisement

ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಬಳಿ ನಡೆಯುತ್ತಿರುವ ಧರಣಿಯಲ್ಲಿ ಜಂಗಮ ಸಮಾಜ ಬೇಡ ಜಂಗಮರಾಗಿದ್ದಾರೆ. ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದ್ದರೂ ಜಂಗಮ ಸಮಾಜಕ್ಕೆ ಎಸ್ಸಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಸಂವಿಧಾನಕ ಹಕ್ಕು ಪಡೆಯಲು ಜಂಗಮ ಸಮಾಜ ರಾಜ್ಯಾವ್ಯಾಪಿ ಹೋರಾಟ ನಡೆಸಿದೆ. ಈ ಮತ್ತಷ್ಟು ತೀವ್ರಗೊಳ್ಳಬೇಕಿದೆ. ಜಂಗಮರ ಹೋರಾಟಕ್ಕೆ ಪಂಚಮಸಾಲಿ ಸಮಾಜ ಬೆಂಬಲ ನೀಡಲಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಸಿಸಿ ಕರಡಕಲ್‌ ಹೇಳಿದರು.

ಧರಣಿಯಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ತಾವರಗೇರಾ, ಮಲ್ಲಿಕಾರ್ಜುನ ನಾಡಗೌಡ, ಜಂಗಮ ಸಮಾಜ ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು, ಮಹೇಶ ನಂದಿಕೋಲಮಠ, ವೀರಭದ್ರಯ್ಯ ಯಲಗಲದಿನ್ನಿ, ಬಸವರಾಜಸ್ವಾಮಿ ಎಳೆಮನಿ, ರಮೇಶ ಶಾಸ್ತ್ರೀ, ಜಂಬಯ್ಯ ಹಿರೇಮಠ, ಜಗದೀಶ ಕೆಇಬಿ, ಗುಂಡಯ್ಯ ಸೊಪ್ಪಿಮಠ, ಅಮರೇಶ ಗಂಬೀರಮಠ, ಶರಣಪ್ಪ ಸುಂಕದ, ಸುಭಾಸ ಪಲ್ಲೇದ, ಅಮರೇಶ ಗುಂಡಸಾಗರ, ಬಸವರಾಜ ಬ್ಯಾಳಿ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next