Advertisement
ಕರ್ಫ್ಯೂ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಸೇರಿಜಿಲ್ಲೆಯಲ್ಲಿ ಜನಜೀವನ ಸ್ತಬ್ಧಗೊಂಡಿದೆ. ನಾಗರಿಕರುಹೊರಬಾರದೇ ಮನೆಗಳಲ್ಲೇ ಲಾಕ್ ಆಗಿದ್ದರು.ವಾಹನ ಸಂಚಾರವೂ ಸಂಪೂರ್ಣ ಬಂದ್ ಆಗಿತ್ತು.ಭಾನುವಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಕೆಲವೇ ಬಸ್‌ಗಳು ಸಂಚಾರ ನಡೆಸಿದ್ದು,ಬಹುತೇಕ ಬಸ್‌ಗಳು ಡಿಪೋಗಳಿಂದ ಹೊರಬಂದಿಲ್ಲ.
Related Articles
Advertisement
ಎಪಿಎಂಸಿ ಮಾರುಕಟ್ಟೆ ಬಂದ್: ಕೊರೊನಾಸೋಂಕು ನಿಯಂತ್ರಿಸಲು ಸರ್ಕಾರ ವಾರಾಂತ್ಯದಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯಮಾರುಕಟ್ಟೆ ಪ್ರಾಂಗಣ, ಉಪಮಾರುಕಟ್ಟೆ ಪ್ರಾಂಗಣದ(ಕೆ.ವಿ.ಕ್ಯಾಂಪಸ್ ಹತ್ತಿರದ ಜಾಗಕ್ಕೆ ಸ್ಥಳಾಂತರಿಸಿದಹೂವಿನ ಮಾರುಕಟ್ಟೆ) ಮಾರುಕಟ್ಟೆಗಳಿಗೆ ರಜೆಘೋಷಿಸಿದ್ದರಿಂದ ಭಾನುವಾರದಂದು ಸಹಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ ಎಂದುಎಪಿಎಂಸಿ ಕಾರ್ಯದರ್ಶಿ ಫೆ„ಸಲ್ ಅಹಮದ್ ಹಕೀಂತಿಳಿಸಿದರು.
61 ವಾಹನ ವಶ: ಚಿಕ್ಕಬಳ್ಳಾಪುರ ಜಿಲ್ಲಾದ್ಯಂತವಾರಾಂತ್ಯದ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದ್ದರಲ್ಲದೆ, ಚಿಕ್ಕಬಳ್ಳಾಪುರ-ಶಿಡ್ಲಘಟ್ಟಮಾರ್ಗದ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ವಾಹನಸಂಚಾರ ಇಲ್ಲದೇ ಬಿಕೋ ಎನ್ನುತ್ತಿತ್ತು. ಸೋಂಕುನಿಯಂತ್ರಿಸಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿಬೆಂಬಲ ವ್ಯಕ್ತಪಡಿಸಿದ್ದಾರೆ. ವಾರಾಂತ್ಯದ ಕರ್ಫ್ಯೂಉಲಂಘಿಸಿ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರಸಂಚರಿಸಿದ 61 ವಾಹನ ವಶಪಡಿಸಿಕೊಳ್ಳಲಾಗಿದೆಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.
ದಂಡ: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಗ್ಗೆವ್ಯಾಪಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದರಿಂದಕೆಲವರು ಮಹಾವೀರ್ ಜಯಂತಿ ಇರುವುದನ್ನುಲೆಕ್ಕಿಸದೆ ಮಾಂಸದ ಅಂಗಡಿಗಳನ್ನು ತೆರೆದು ಮಾರಾಟಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಅರಿತಪೊಲೀಸರು ಕೂಡಲೇ ಕಾರ್ಯಪ್ರವೃತರಾಗಿಅಂಗಡಿಗಳನ್ನು ಮುಚ್ಚಿದ್ದರಲ್ಲದೆ ಅಂಗಡಿ ಮಾಲಿಕರಿಗೆದಂಡ ವಿಧಿ ಸಿದರು