ರೋಣ: ಗ್ರಾಮೀಣ ಪ್ರದೇಶದ ಬಹು ಗ್ರಾಮ ಕುಡಿವ ನೀರಿನ ಯೋಜನೆ ರೋಣ ಪಟ್ಟಣಕ್ಕೂ ವಿಸ್ತರಿಸಬೇಕೆಂದು ಪುರಸಭೆ ಸದಸ್ಯರು ಮೇ 14ರಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.
ಹೋರಾಟಕ್ಕೆ ಪಕ್ಷಾತೀತ ಬೆಂಬಲ: ಈ ವೇಳೆ ರೈತ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಪುರಸಭೆ ಸರ್ವ ಸದಸ್ಯರು ಪಕ್ಷಾತೀತವಾಗಿ ತೆಗೆದುಕೊಂಡ ಹೋರಾಟದ ನಿರ್ಧಾರಕ್ಕೆ ರೋಣ ಪಟ್ಟಣದ ರೈತ ಸಮೂಹ ಒಗ್ಗಟ್ಟಾಗಿ ಅಭೂತಪೂರ್ವ ಬೆಂಬಲ ನೀಡಲಿದೆ. ಈ ಹೋರಾಟ ಯಾವುದೇ ಒಂದು ವ್ಯಕ್ತಿ, ಕುಟುಂಬ, ಪಕ್ಷಕ್ಕೆ ಸಿಮೀತವಾಗಿಲ್ಲ. ಪ್ರತಿಯೊಬ್ಬರೂ ಅವಶ್ಯವಿರುವ ನೀರಿಗಾಗಿ ಮಾಡುವ ಹೋರಾಟ ಇದಾಗಿದೆ ಎಂದು ತಿಳಿಸಿದರು.
ಪುರಸಭೆ ನಿರ್ಣಯಕ್ಕೆ ಬದ್ಧ: ಈ ನಿಟ್ಟಿನಲ್ಲಿ ಈಗಾಗಲೇ ಗ್ರಾಮೀಣ ಭಾಗದಲ್ಲಿನ ಬಹು ಗ್ರಾಮ ನೀರಿನ ಯೋಜನೆ ರೋಣ ಪಟ್ಟಣಕ್ಕೂ ವಿಸ್ತರಿಸಬೇಕು. ಈ ದಿಶೆಯಲ್ಲಿ ಪುರಸಭೆ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ರೋಣ ಸಮಸ್ತ ರೈತ ಸಮೂಹದ ಬೆಂಬಲವಿದ್ದು, ಅಂದು ನಡೆಯುವ ಧರಣಿಯಲ್ಲಿ ಭಾಗವಹಿಸುತ್ತೇವೆ ಎಂದರು.
ಸಿದ್ದಣ್ಣ ನವಲಗುಂದ, ಬಸಪ್ಪ ಕರಿಲಿಂಗಣ್ಣವರ, ಈರಪ್ಪ ಕೋಳಿವಾಡ, ಬಸನಗೌಡ ಮಂಗಳೂರ, ಮೈಲಾರಪ್ಪ ಕಿರೇಸೂರ, ರಾಮಣ್ಣ ದೇಶಣ್ಣವರ, ಚಂದ್ರಪ್ಪ ಆದಿ, ಮಹ್ಮದ್ ಮುರಿಗಿಕಟ್ಟಿ, ಶರಣಪ್ಪ ಪಲ್ಲೇದ, ಮಲ್ಲಪ್ಪ ಹವಳಪ್ಪನವರ, ಶಾಂತಪ್ಪ ಶೆಟ್ಟರ ಇತರರಿದ್ದರು.
Advertisement
ಪಟ್ಟಣದ ವಿವಿಧ ಬಡಾವಣೆ ರೈತರು, ಹಾಲು ಉತ್ಪಾದಕರ ಸಂಘ, ಶಿರಡಿ ಸಾಯಿಬಾಬಾ ಚಾಲಕರ ಮತ್ತು ಮಾಲಕ ಸಂಘ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಅದರಂತೆಯೇ ಪಟ್ಟಣದ ಹೊನ್ನೆತ್ತವ್ವ ದೇಗುಲದ ಆವರಣದಲ್ಲಿ ರೈತ ಸಮೂಹ ಸಭೆ ನಡೆಸಿ ಬೆಂಬಲ ಸೂಚಿಸಿದೆ.
Related Articles
Advertisement
ರೋಣ ಪಟ್ಟಣ ಅನೇಕ ವರ್ಷಗಳಿಂದ ನಿರಂತರ ನೀರಿನ ಸಮಸ್ಯೆ ಎದುರಿಸುತ್ತ ಬಂದಿದೆ. ನೀರಿನ ಸಮಸ್ಯೆಯಿಂದ ಯಾವಾಗ ಮುಕ್ತಿ ಸಿಕ್ಕಿತು ಎಂಬ ಚಿಂತೆ ರೈತ ಸಮೂಹವನ್ನು ಕಾಡುತ್ತಿತ್ತು. ಸದ್ಯ ದಿನೇ ದಿನೇ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು, ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದ್ದರಿಂದ ನಿತ್ಯ ನೀರು ಪೂರೈಸುವಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು. •ಬಸನಗೌಡ ಪಾಟೀಲ, ರೈತ ಮುಖಂಡ