ಸಕಲೇಶಪುರ: ಕರ್ನಾಟಕದಲ್ಲಿ ಬರುವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೇರಲು ಪಕ್ಷವನ್ನು ಗ್ರಾಪಂ ಮಟ್ಟದಿಂದ ಸಂಘಟಿಸಲಾಗುವುದು ಎಂದು ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷ ರಾಜ ಶೇಖರ್ ದೊಡ್ಡಣ್ಣ ಹೇಳಿದರು.
ಬುಧವಾರಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಇತರ ಪಕ್ಷಗಳು ಜಾತಿ, ಧರ್ಮಗಳಆಧಾರದಲ್ಲಿರಾಜಕೀಯಮಾಡುತ್ತಿದೆ. ಆದರೆ ಆಮ್ ಆದ್ಮಿ ಪಾರ್ಟಿ ಅಭಿವೃದ್ಧಿ ಹೆಸರಿನಲ್ಲಿ ರಾಜಕೀಯ ಮಾ ಡುತ್ತದೆ. ಪ್ರತಿದಿನ ಸಾವಿರಾರು ಜನ ಆಮ್ ಆದ್ಮಿ ಪಕ್ಷವನ್ನು ಸೇರಲು ಮುಂದಾಗು ತ್ತಿದ್ದಾರೆ. ರಾಜ್ಯದ ಜನ ಬಿಜೆಪಿ, ಕಾಂಗ್ರೆಸ್, ಜನತಾ ದಳದ ಆಡಳಿತ ನೋಡಿ ಬೇಸತ್ತಿದ್ದು ಭ್ರಷ್ಟಚಾರ ರಹಿತ ಆಡಳಿತಕ್ಕಾಗಿ ಆಮ್ ಆದ್ಮಿ ಪಾರ್ಟಿಯತ್ತ ಮುಖ ಮಾಡುವುದರಲ್ಲಿ ಅನುಮಾನವಿಲ್ಲ.
ದೆಹಲಿ ಮಾದರಿಯಲ್ಲಿ ಉಚಿತ ಶಿಕ್ಷಣ, ಉಚಿತ ವಿದ್ಯುತ್, ನೀರು, ಮನೆ ಮನೆಗೆ ರೇಷನ್, ಮೊಹಲ್ಲಾಕ್ಲಿನಿಕ್‌ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದ್ದು ಅಲ್ಲದೆ ಸುಮಾರು 116 ಸೇವೆಗಳನ್ನು ಆನ್‌ಲೈನ್ ಮುಖಾಂತರ ನೀಡಲು ಉದ್ದೇಶಿಸಲಾಗಿದ್ದು ಇದರಿಂದಾಗಿ ಭ್ರಷ್ಟಚಾರ ಕಡಿಮೆಯಾಗು ವುದರಲ್ಲಿ ಅನುಮಾನವಿಲ್ಲ. ಪಂಜಾಬ್‌ನಲ್ಲಿ ಪಕ್ಷ ಕೆಲವೇ ದಿನಗಳ ಹಿಂದೆಯಷ್ಟೆ ಅಧಿಕಾರಕ್ಕೇರಿದ್ದರು ಸಹ ಭ್ರಷ್ಟಚಾರವನ್ನುಕಡಿಮೆ ಮಾಡಿದೆ.
ರಾಜ್ಯವನ್ನು ಸಹ ಭ್ರಷ್ಟಚಾರ ಮುಕ್ತ ಮಾಡಲು ಆಮ್ ಆದ್ಮಿ ಪಾರ್ಟಿ ಅವಶ್ಯಕತೆಯಿದ್ದು ಮುಂಬರುವ ಬಿಬಿಎಂಪಿ ಚುನಾವಣೆ ಸೇರಿದಂತೆ ರಾಜ್ಯದ 224 ಕ್ಷೇತ್ರಗಳಲ್ಲೂ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲು ಯೋಜನೆ ಹಾಕಿಕೊಂಡಿದೆ. ಚುನಾವಣೆಯಲ್ಲಿ ಹಣವುಳ್ಳವರಿಗೆ ಟಿಕೆಟ್ ಕೊಡದೆ ಜನಸಾಮಾನ್ಯರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು.
ಪಕ್ಷದಜಿಲ್ಲಾಅಧ್ಯಕ್ಷ ಶಿವಕುಮಾರ್‌ಮಾತನಾಡಿ, ಆಮ್ ಆದ್ಮಿ ಪಕ್ಷ ಜಿಲ್ಲೆಯಲ್ಲಿ ಸಂಘಟನೆ ಆರಂಭಿಸಿದ್ದು ಈ ಹಿನ್ನೆಲೆ ಪ್ರತಿ ತಾಲೂಕಿನಲ್ಲಿ ಸಹ ಪಕ್ಷದ ಪದಾಧಿಕಾರಿಗಳನ್ನು ನೇಮಕಾತಿಮಾಡಲಾ ಗುತ್ತಿದೆ. ಸಕಲೇಶಪುರ ತಾಲೂಕು ಅಧ್ಯಕ್ಷರಾಗಿ ರವಿ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದ್ದು,
ಉಪಾಧ್ಯಕ್ಷರಾಗಿ ರವೀಂದ್ರ ಎಂ.ಎಸ್, ತಾಲೂಕು ಕಾರ್ಯದರ್ಶಿಯಾಗಿ ಸುದರ್ಶನ್, ಸಹ ಕಾರ್ಯದರ್ಶಿಯಾಗಿ ಅಶ್ವತ್ಥ್, ತಾಲೂಕು ಸಂಘ ಟನಾ ಕಾರ್ಯದರ್ಶಿಯಾಗಿ ರಘು, ಖಚಾಂಚಿ ಯಾಗಿ ಮೋಹನ್, ಕಾನೂನು ಸಲಹೆಗಾರರಾಗಿ ವಿನೋದ್ ಕುಮಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಜಾಬೀರ್ ಪಾಷಾ, ಉಪಾಧ್ಯಕ್ಷರಾಗಿ ಇಕ್ಬಾಲ್,ಮಹಿಳಾಘಟಕದ ತಾಲೂಕುಅಧ್ಯಕ್ಷರಾಗಿ ಸವಿತಾ, ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಜಯಣ್ಣ, ಮಾಧ್ಯಮ ಸಲಹೆಗಾರರಾಗಿ ಪ್ರಕಾಶ್ ರವರನ್ನು ಆಯ್ಕೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರುಗಳಾದ ರವಿ, ಅಶ್ವತ್ಥ್, ಸವಿತಾ, ಗೀತಾ ಮುಂತಾದವರು ಹಾಜರಿದ್ದರು.