ರಾಮನಗರ: ಸ್ವತಃ ಕ್ವಾರೈಂಟನ್‌ನಲ್ಲಿದ್ದು ಅಲ್ಲಿನ ಅವ್ಯವಸ್ಥೆಗೆ ರೋಸಿ ಹೋಗಿದ್ದ ಕನಕಪುರ ಪಟ್ಟಣದ ನಿವಾಸಿ, ಖಾಸಗಿ ಕಂಪನಿಯೊಂದರ ಉದ್ಯೋಗಿ ಕೆ.ಎಸ್.ರಾಮು ಎಂಬುವರು ತಮ್ಮ ಸ್ನೇಹಿತರೊಡಗೂಡಿ ಕ್ವಾರಂಟೈನ್ ಕೇಂದ್ರದ ನಿವಾಸಿಗಳಿಗೆ ಅಗತ್ಯ ವಸ್ತು ಕೊಡುಗೆ ನೀಡಿದ್ದಾರೆ.
ಕುಡಿಯುವ ನೀರಿನ ಬಾಟಲ್‌ಗಳು, ಸ್ಯಾನಿಟೈಸರ್ ಬಾಟಲ್, ಟಿಶ್ಯು ಪೇಪರ್‌ಗಳು, ಸೋಪು, ಶಾಂಪು, ಶೌಚಾಲ ಯ ಸ್ವತ್ಛಗೊಳಿಸುವ ವಸ್ತುಗಳು, ಬ್ರೆಡ್, ಜಾಮ್, ಬಿಸ್ಕಟ್ ಗಳು, ಗ್ಲೌಸ್‌ಗಳು, ಪೇಪರ್ ಪ್ಲೇಟ್‌ಗಳು.. ಹೀಗೆ ಹತ್ತು ಹಲವರು ವಸ್ತುಗಳನ್ನು ನಿವಾಸಿಗಳ ಬಳಕೆಗೆ ಕೊಡುಗೆ ನೀಡಿದ್ದಾರೆ. ಬೆಂಗಳೂರು ಮಲ್ಲೇಶ್ವರದ ಸಿದ್ಧಾಶ್ರಮದ ಸಕ್ರಿಯ ಸದಸ್ಯ ಕೃಷ್ಣ ಎಂಬುವರ ಬಳಿಯಿರುವ ಅವ್ಯವಸ್ಥೆ ತೋಡಿಕೊಂಡಾಗ ಸ್ಪಂದಿಸಿದ್ದಾರೆ.
ಟೊಯೋಟಾ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಆಡಳಿತ ಮತ್ತು ನೌಕರರ ಸಂಘಗಳು ಸ್ಪಂದಿಸಿ ದ್ದಾರೆ. ಕನಕಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರುವ ಕ್ವಾರಂಟೈನ್ ನಿವಾಸಿಗಳಿಗೆ ಈ ವಸ್ತುಗಳು ತಲುಪಿವೆ. ಶಿವನಹಳ್ಳಿ ಬಳಿಯಿರುವ ಕ್ವಾರಂಟೈನ್ ಕೇಂದ್ರಕ್ಕೂ ಈ ವಸ್ತು ಗಳು ತಲುಪಿಸುವುದಾಗಿ ಕೆ.ಎಸ್.ರಾಮು ತಿಳಿಸಿದ್ದಾರೆ. ಕೊಡುಗೆ ನೀಡಿದ ಸಿದ್ಧರೂಢ ಆಶ್ರಮ ಮತ್ತು ಟೊಯೋಟಾ ಆಟೋ ಪಾರ್ಟ್ಸ್ನ ಆಡಳಿತ ಮತ್ತು ನೌಕರರ ಸಂಘಕ್ಕೆ ಟಿಎಚ್‌ಒ ನಂದಿನಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದರು.
ಗೊಣಗುವುದಕ್ಕಿಂತ, ಹೆಣಗೋದು ವಾಸಿ: ಕ್ವಾರಂಟೈನ್ ಕೇಂದ್ರಗಳಲ್ಲಿ ವ್ಯವಸ್ಥೆ ಸುಧಾರಣೆ ವಿಚಾರದಲ್ಲಿ ಸರ್ಕಾರವ ನ್ನು ಬೈಯುವುದಕ್ಕಿಂತ, ಅಲ್ಲಿರುವಷ್ಟು ದಿನ ನನ್ನ ಮನೆ ಎಂದು ಭಾವಿಸಿ ಸ್ವತಃ ನಾವೇ ಸ್ವತ್ಛಗೊಳಿಸಿಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ತಾವು ಅಲ್ಲಿರು ವವರೆಗೂ ತಾವು ಬಳಸುತ್ತಿದ್ದ ಟಾಯ್ಲೆಟ್ ಕ್ಲೀನ್ ಮಾಡಿ ದ್ದಾಗಿ, ತಾವು ಅದನ್ನು ಸ್ವತ್ಛವಾಗಿರಿಸಿಕೊಂಡಿದ್ದರಿಂದ ಮತ್ತೂಬ್ಬರಿಗೆ ಅದು ಬಳಸಲು ಅನುಕೂಲವಾಗಿದೆ ಎನ್ನು ವುದು ಅವರ ಅಭಿಪ್ರಾಯ. ತಾವು ಅಲ್ಲಿಂದ ಹೊರಬರುವಾಗ ಅಲ್ಲಿದ್ದವರೆಲ್ಲರಿಗೂ ನಿಮ್ಮ ಶುಚಿ, ನಿಮ್ಮ ಆರೋಗ್ಯ ಎಂದು ಹೇಳಿ ಬಂದಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.