Advertisement

ಹಗ್ಗಜಗ್ಗಾಟ ಶಾರೀರಿಕ ಬೆಳವಣಿಗೆಗೆ ಪೂರಕ: ಶಾಸಕ ಸೊರಕೆ

06:28 PM Apr 27, 2017 | |

ಕಾಪು: ಸಾಂಪ್ರದಾಯಿಕ ಕ್ರೀಡೆ ಹಗ್ಗ ಜಗ್ಗಾಟವು ಶಾರೀರಿಕ ಬೆಳವಣಿಗೆ ಮತ್ತು ಧಾರ್ಮಿಕ ಶ್ರದ್ಧೆಗೆ ಪೂರಕವಾಗಿದೆ.  ಶಕ್ತಿ ಪ್ರದರ್ಶನದ ಜತೆಗೆ ಪ್ರತಿಭೆಯೂ ಅನಾವರಣಗೊಳ್ಳಲು ವೇದಿಕೆ ದೊರಕಿ ದಂತಾಗುತ್ತದೆ ಎಂದು ಶಾಸಕ ವಿನಯ ಕುಮಾರ್‌ ಸೊರಕೆ ಹೇಳಿದರು.

Advertisement

ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ, ಪೂಜಾ ಮಂದಿರ ಕೈಪುಂಜಾಲು ಹಾಗೂ ಕೈಪುಂಜಾಲು ಜೈ ವೀರ ಮಾರುತಿ ಹಗ್ಗಜಗ್ಗಾಟ ತಂಡದ ಸಹಯೋಗದಲ್ಲಿ ಪೂಜಾ ಮಂದಿರದ 36ನೇ ವಾರ್ಷಿಕ ಮಹೋತ್ಸವದ ಪ್ರಯುಕ್ತ ಕೈಪುಂಜಾಲು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಅಂತಾರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಹಗ್ಗಜಗ್ಗಾಟ ಜೈ ವೀರ ಮಾರುತಿ ಟ್ರೋಫಿ-2017 ಪಂದ್ಯಾಟವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅದಾನಿ ಯುಪಿಸಿಎಲ್‌ ಸಮೂಹ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಹಗ್ಗ ಜಗ್ಗಾಟ ಪಂದ್ಯಾಟದ ಅಂಗಣವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ / ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿ, ಉಡುಪಿ ಸಾಯಿರಾಧಾ ಗ್ರೂಪ್ಸ್‌ನ ಮನೋಹರ್‌ ಶೆಟ್ಟಿ, ದ. ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಉದ್ಯಮಿ ಸುರೇಶ್‌ ಶೆಟ್ಟಿ ಗುರ್ಮೆ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಬಾಲಾಜಿ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಚಿತ್ರ ನಟಿಯರಾದ ರಂಜಿತಾ ಶೇಟ್‌, ಜಯಶ್ರೀ ಕೋಟ್ಯಾನ್‌ ಕಟಪಾಡಿ, ಕರ್ನಾಟಕ ಮೀನುಗಾರಿಕಾ ಅಭಿ ವೃದ್ಧಿ ನಿಗಮದ ನಿರ್ದೇಶಕ ದೀಪಕ್‌ ಕುಮಾರ್‌ ಎರ್ಮಾಳ, ಕೈಪುಂಜಾಲು ಮೊಗವೀರ ಮಹಾಸಭಾದ ಅಧ್ಯಕ್ಷ ಕರುಣಾಕರ್‌ ಸಾಲ್ಯಾನ್‌, ಕಾಪು ಪುರಸಭೆ ಸದಸ್ಯೆ ರಮಾ ವೈ. ಶೆಟ್ಟಿ, ರವಿ ಜೀರೆ ಮುಖ್ಯ ಅತಿಥಿಗಳಾಗಿದ್ದರು.

ಸಮ್ಮಾನ
ಚಿನ್ನದ ಪದಕ ವಿಜೇತೆ ರಾಷ್ಟ್ರ ಮಟ್ಟದ ಕರಾಟೆ ಪಟು ಸಪ್ತಶ್ರೀ ಅವರನ್ನು ಸಮ್ಮಾನಿಸಲಾಯಿತು.36ನೇ ವಾರ್ಷಿಕೋತ್ಸವ ಸಮಿತಿ ಗೌರವಾಧ್ಯಕ್ಷ ಸುಧಾಕರ ಡಿ. ಅಮೀನ್‌ ಪಾಂಗಾಳ, ಉಪಾಧ್ಯಕ್ಷ ಪ್ರಭಾಕರ ಪೂಜಾರಿ, ಗೌ.ಪ್ರ. ಕಾರ್ಯದರ್ಶಿ ಯೋಗೀಶ್‌ ವಿ.ಟಿ., ಕೋಶಾಧಿಕಾರಿ ದಿನೇಶ್‌ ಕುಂದರ್‌ ಉಪಸ್ಥಿತರಿ ದ್ದರು. ಸಪ್ತಶ್ರೀ ಕೈಪುಂಜಾಲು ಸ್ವಾಗತಿಸಿ ದರು. ರಾಜೇಶ್‌ ಕೋಟ್ಯಾನ್‌ ವರದಿ ವಾಚಿಸಿದರು. ಸಮಿತಿ ಅಧ್ಯಕ್ಷ ಸತೀಶ್‌ ಕೆ. ಕುಂದರ್‌ ವಂದಿಸಿದರು. ಉಪನ್ಯಾಸಕ ಶಿವಣ್ಣ ಬಾಯರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next