Advertisement

ಉತ್ತರ ಪ್ರದೇಶ: ಅವಳಿ ಕಟ್ಟಡ ನೆಲಸಮಕ್ಕೆ ಆ. 28ರ ಗಡುವು; ಸುಪ್ರೀಂ ಕೋರ್ಟ್‌

10:56 PM Aug 12, 2022 | Team Udayavani |

ನವದೆಹಲಿ: ಉತ್ತರ ಪ್ರದೇಶದ ನೋಯ್ಡಾದಲ್ಲಿ “ಸೂಪರ್‌ಟೆಕ್‌’ ಕಂಪನಿಯು ತನ್ನ ಎಮೆರಾಲ್ಡ್‌ ಯೋಜನೆಯಡಿ ನಿರ್ಮಿಸಿರುವ ಅವಳಿ ಕಟ್ಟಡಗಳ ನೆಲಸಮ ಕಾರ್ಯವನ್ನು ಈ ಹಿಂದಿನ ತೀರ್ಪಿನಂತೆ ಆ. 28ರಂದೇ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

Advertisement

ಈ ನಿರ್ಮಾಣಗಳು ಕಾನೂನುಬಾಹಿರ ಎಂದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಕಟ್ಟಡಗಳನ್ನು ಮೇ 22ರಂದು ನೆಲಸಮ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಆದರೆ, ತಾಂತ್ರಿಕ ಕಾರಣಗಳಿಂದ ಅದನ್ನು ಆ. 28ಕ್ಕೆ ಮುಂದೂಡಿತ್ತು. ಇದೀಗ, ಆ. 28ಕ್ಕೇ ಕಟ್ಟಡಗಳ ನೆಲಸಮ ಮಾಡಬೇಕು. ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳನ್ನು ಆ. 25ರೊಳಗೆ ಮುಗಿಸಬೇಕು ಎಂದು ನ್ಯಾ. ಡಿ.ವೈ. ಚಂದ್ರಚೂಡ್‌, ನ್ಯಾ. ಎ.ಎಸ್‌. ಬೋಪಣ್ಣ ಅವರುಳ್ಳ ನ್ಯಾಯಪೀಠ ಆದೇಶಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next