ಚೆನ್ನೈ: ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಅವರ ಕನಸೊಂದು 21 ವರ್ಷಗಳ ಬಳಿಕ ನನಸಾಗಿದೆ. ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಚೆನ್ನೈನ ನಿವಾಸದಲ್ಲಿ ಭೇಟಿಯಾದರು.
Advertisement
“ನಾನು 7 ವರ್ಷದ ಬಾಲಕನಾಗಿದ್ದಾಗಲೇ ರಜನಿಕಾಂತ್ ಅವರ ಸೂಪರ್ ಫ್ಯಾನ್ ಆಗಿದ್ದೆ. ಮುಂದೊಂದು ದಿನ ರಜನಿಕಾಂತ್ ಅವರನ್ನು ಅವರದೇ ಮನೆಯಲ್ಲಿ ಭೇಟಿಯಾಗಲಿದ್ದೇನೆ ಎಂದು ಅಪ್ಪ- ಅಮ್ಮನಲ್ಲಿ ಹೇಳಿದ್ದೆ. 21 ವರ್ಷಗಳ ಬಳಿಕ ಈ ದಿನ ಕೂಡಿ ಬಂತು. ತಲೈವಾಸ್ ನನಗೆ ಮನೆಗೆ ಬರುವಂತೆ ಆಹ್ವಾನವಿತ್ತರು” ಎಂಬು ದಾಗಿ ಸಂಜು ಸ್ಯಾಮ್ಸನ್ ಇನ್‌ಸ್ಟಾಗ್ರಾಂ ವೀಡಿಯೋವೊಂದರಲ್ಲಿ ಖುಷಿಯಿಂದ ಹೇಳಿಕೊಂಡಿದ್ದಾರೆ.