Advertisement

ಕಾಸರಗೋಡಿನ ಜನತೆಗೆ ವರಿಷ್ಠಾಧಿಕಾರಿ ಕೃತಜ್ಞತೆ

03:13 PM Mar 28, 2017 | |

ಕಾಸರಗೋಡು: ಜಿಲ್ಲೆಯಲ್ಲಿ ಅಲ್ಪಕಾಲದಿಂದ ಸಂಭವಿಸಿದ ಕೆಲವು ಅಹಿತಕರ ಘಟನೆಗಳು ವ್ಯಾಪಿಸದಿರಲು ಹಾಗೂ ಸಮಾಜದಲ್ಲಿ ಶಾಂತಿ ನೆಲೆಗೊಳಿಸಲು ಪೊಲೀಸರೊಂದಿಗೆ ಆಹೋರಾತ್ರಿ ಕಾರ್ಯಾಚರಿಸಿದ ಕಾಸರಗೋಡು ಸಂಸದರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು, ಪತ್ರಿಕೆ ಸಹಿತ ವಿವಿಧ ಮಾಧ್ಯಮಗಳ ಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ಸೈಮನ್‌ ಅವರು ಹೊರಡಿಸಿದ ಪ್ರಕಟನೆಯಲ್ಲಿ  ತಿಳಿಸಿದ್ದಾರೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ  ಒಮ್ಮೆಯೂ ಸಂಭವಿಸಲು ಸಾಧ್ಯವಿಲ್ಲದ ಘಟನೆ ನಡೆದಿರುತ್ತದೆ. ಈ ಕಾರಣದಿಂದ ಹಲವಾರು ರೀತಿಯ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆಯಿದ್ದು, ಅವನ್ನೆಲ್ಲ ಶಾಂತಿಯನ್ನು  ಬಯಸುವ ಜನತೆ ಪೊಲೀಸರೊಂದಿಗೆ ಸಹಕರಿಸಿ ಕಾರ್ಯಾಚರಿಸಿದ ಹಿನ್ನೆಲೆಯಲ್ಲಿ  ತಡೆಯಲು ಸಾಧ್ಯವಾಗಿದೆ. ವಾಟ್ಸ್‌ ಆ್ಯಪ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ  ಬರುವ ನಕಲಿ ವದಂತಿಗಳನ್ನು  ಜನತೆ ತಿರಸ್ಕರಿಸಬೇಕೆಂದು ಪೊಲೀಸಧಿಕಾರಿಗಳು ವಿನಂತಿಸಿದ್ದಾರೆ.

ಜಿಲ್ಲೆಯಲ್ಲಿ  ಸೃಷ್ಟಿಯಾಗುವ ಎಲ್ಲಾ  ರೀತಿಯ ಆತಂಕದ ವಾತಾವರಣವನ್ನು  ಇಲ್ಲದಾಗಿಸಲು ಎಲ್ಲ  ವಿಭಾಗದ ಜನರು ಪೊಲೀಸರೊಂದಿಗೆ ಇನ್ನು  ಮುಂದೆಯೂ ಸಹಕರಿಸಬೇಕು. ಶಾಂತಿ ಸುವ್ಯವಸ್ಥೆ  ನೆಲೆಗೊಳಿಸಲು ಹೊರಡಿಸುವ ನಿಯಂತ್ರಣಗಳನ್ನು  ಕಡ್ಡಾಯವಾಗಿ ಪಾಲಿಸಬೇಕು. ಅಲ್ಲದೆ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುವ ರೀತಿಯ ಕಾರ್ಯ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ  ಆ ಬಗ್ಗೆ  ಪೊಲೀಸರಿಗೆ ತಿಳಿಸಬೇಕಾಗಿದೆ. ಶಾಂತಿ ಸಮಾಧಾನದ ಮೂಲಕ ಮಾತ್ರವೇ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅರಿತುಕೊಂಡು ಪೊಲೀಸರೊಂದಿಗೆ ಸಂಪೂರ್ಣ ಸಹಕರಿಸಬೇಕೆಂದು ಜಿಲ್ಲಾ  ಪೊಲೀಸ್‌ ಅಧಿಕಾರಿಯವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next