Advertisement
ಬುಲೆಟ್ ಪೀಸ್ ಪೀಸ್ಬುಲೆಟ್ಅನ್ನು ತುಂಡು ಮಾಡಬಲ್ಲಿರಾ? ಟೇಬಲ್ ಮೇಲೆ ಇಟ್ಟ ಬುಲೆಟ್‌ಅನ್ನು ಯಾವುದಾದರೂ ಆಯುಧ ಬಳಸಿ ಕತ್ತರಿಸಬಹುದು. ಆದರೆ ಪಿಸ್ತೂಲಿನಿಂದ ಹೊರಟ ಬುಲೆಟ್‌ಅನ್ನು ತುಂಡರಿಸಬಲ್ಲಿರಾ? ಅದು ಕಣ್ಣಿಗೆ ಕಾಣುವುದೇ ಇಲ್ಲ ಎನ್ನುವುದನ್ನು ಗಮನದಲ್ಲಿಡಿ. ಆ ಕೆಲಸವನ್ನು ಮಾಡಬಲ್ಲ ಇಸಾವೊ. ಪ್ರತಿ ಸೆಕೆಂಡಿಗೆ 550 ಅಡಿ ಬಿರುಸಿನಿಂದ ಬರುವ ಗುಂಡನ್ನು ಗಾಳಿಯಲ್ಲಿಯೇ ಎರಡು ತುಂಡು ಮಾಡಬಲ್ಲನು. ಈತನ ಖಡ್ಗದ ಚಲನೆಯನ್ನು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ.
ಈತನ ಖಡ್ಗದ ಪಟ್ಟನ್ನು ಬರಿಗಣ್ಣಿಗೆ ನೋಡಲು ಸಾಧ್ಯವಿಲ್ಲ. ಎಷ್ಟು ವೇಗವಾಗಿ ಖಡ್ಗವನ್ನು ಬೀಸುತ್ತಾನೆ ಎಂದರೆ ಕ್ಯಾಮೆರಾ ಕೂಡಾ ಆ ಚಲನೆಯನ್ನು ಹಿಡಿದಿಡಲು ಸೋಲುತ್ತದೆ. ಅದಕ್ಕೆಂದೇ ವಿಶೇಷ ಕ್ಯಾಮೆರಾವನ್ನು ಬಳಸಿ ಆತನ ಕತ್ತಿಯ ಚಲನೆಯನ್ನು ಚಿತ್ರೀಕರಿಸಲಾಗಿದೆ. ಹಾಗೂ ಈತ ಪ್ರತಿ ಗಂಟೆಗೆ 820 ಕಿ.ಮೀ ವೇಗದಲ್ಲಿ ಬರುವ ಟೆನ್ನಿಸ್ ಬಾಲ್‌ಅನ್ನು ಕೂಡಾ ಕಣ್ಮುಚ್ಚಿ ತೆಗೆಯುವುದರೊಳಗೆ ಕತ್ತರಿಸಿದ್ದಾನೆ. ಬೇರೆ ಬೇರೆ ದಾಖಲೆಗಳನ್ನು ನಿರ್ಮಿಸಿ ಈಗಾಗಲೇ ಗಿನ್ನೆಸ್ ರೆಕಾರ್ಡ್‌ನಲ್ಲಿ ಹೆಸರು ಹೊಂದಿ¨ªಾನೆ. ತಲೆಬುರುಡೆಗಳ ಗುಹೆ
ಪಪುವಾ ನ್ಯೂ ಗಿನಿಯಾದ, ಮಿಲೆ°à ಬೇ ಪ್ರಾಂತ್ಯದಲ್ಲಿ ಒಂದು ಗುಹೆ ಇದೆ. ಅದರ ಹೆಸರು ತವಾಲಿ ಗುಹೆ. ಸ್ಥಳೀಯರು ಇದನ್ನು “ತಲೆಬುರುಡೆ ಗುಹೆ’ ಎಂದು ಕರೆಯುತ್ತಾರೆ. ಇÇÉೊಂದು ಪ್ರಾಚೀನ ಕಾಲದ ವಿಶಿಷ್ಟ ಆಚರಣೆ ಇದ್ದು ಆ ಮೂಲಕ ಗುಹೆಯು ಪ್ರಸಿದ್ಧಿಗೆ ಬಂದಿದೆ. ಅಲ್ಲಿ ಪ್ರೀತಿಪಾತ್ರರು, ಹತ್ತಿರದ ಸಂಬಂಧಿಗಳು ಸಾವನ್ನಪ್ಪಿದರೆ ಅವರನ್ನು ಮಲಗಿಸಿ ದೇಹವನ್ನು ಹೂಳದೆ ನೇರಕ್ಕೆ ನಿಲ್ಲಿಸಿ ಹೂಳುತ್ತಾರೆ.
Related Articles
Advertisement
– ಪುರುಷೋತ್ತಮ್ ವೆಂಕಿ