ಬೆಂಗಳೂರು: ಗೃಹೋಪಯೋಗಿ ವಸ್ತುಗಳ ಮಾರಾಟ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಪೈ ಇಂಟರ್‌ನ್ಯಾಷನಲ್‌ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಸೂಪರ್ ಸೇಲ್ ಲಕ್ಕಿ ಗ್ರಾಹಕರಿಗೆ ಬಹುಮಾನ ವಿತರಣೆ ಮಾಡಲಾಯಿತು.
ನಗರದ ಜಯಮಹಲ್ ಪ್ಯಾಲೇಸ್ ಹೋಟೆಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಸೂಪರ್ ಸೇಲ್ ಲಕ್ಕಿ ವಿಜೇತ ಗ್ರಾಹ ಕರಿಗೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ದ್ವಿತೀಯ ಬಹುಮಾನ ವಿಜೇತರಿಗೆ 50 ಸಾವಿರ ರೂ. ಮೌಲ್ಯದ ಚಿನ್ನ ವಿತರಿಸಲಾಯಿತು. ಪೈ ಸಹೋದರರ ಶಾಲಾ, ಕಾಲೇಜು ದಿನಗಳ ಶಿಕ್ಷಕತ್ರಯರಾದ ಫೆಡ್ರಿಕ್, ವಿಕ್ಟರ್ ಮತ್ತು ಅಮಲ್ ದಾಸ್ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ನಂತರ ಮಾತನಾಡಿದ ಅವರು, ನೆಚ್ಚಿನ ಶಿಷ್ಯರಾದ ರಾಜ್‌ಕುಮಾರ್ ಪೈ, ಉತ್ತರಕುಮಾರ್ ಪೈ, ಗುರುಪ್ರಸಾದ್ ಪೈ, ಅಜಿತ್‌ಕುಮಾರ್ ಪೈ ಅವರ ಶಿಸ್ತು, ಸಂಯಮ, ಹಸನ್ಮುಖತೆ ಹಾಗೂ ನಡವಳಿಕೆ ಬಗ್ಗೆ ಕೊಂಡಾಡಿದರಲ್ಲದೆ, ಪೈ ಇಂಟರ್ ನ್ಯಾಷನಲ್ ಈ ಎತ್ತರಕ್ಕೆ ಬೆಳೆಯಲು ಪೈ ಸಹೋದರರ ಈ ಗುಣಗಳೇ ಕಾರಣ ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ರಾಜ್‌ಕುಮಾರ್ ಪೈ ಮಾತನಾಡಿ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಪೈ ಇಂಟರ್ ನ್ಯಾಷನಲ್ ಮಳಿಗೆಗಳಲ್ಲಿ ಡಿಸೆಂಬರ್ 2017 ರಿಂದ 2018ರ ಜ. 31ರವರೆಗೆ ಅಯೋಜಿಸಿದ್ದ ಹೊಸ ವರ್ಷದ ಸೂಪರ್ ಮಾರಾಟದಲ್ಲಿ ಗ್ರಾಹಕರು ಖರೀದಿಸಿದ ವಸ್ತುಗಳ ಜತೆಗೆ ಲಕ್ಕಿ ಡ್ರಾ ಕೂಪನ್ ನೀಡಲಾಗಿತ್ತು. ಅದೃಷ್ಟ ಪರೀಕ್ಷೆಯಲ್ಲಿ ವಿಜೇತರಾದ 100 ಮಂದಿಗೆ ಪ್ರಥಮ ಬಹುಮಾನವಾಗಿ ಒಂದು ಲಕ್ಷರೂ. ಬೆಲೆಯ ಚಿನ್ನ ಹಾಗೂ 100 ಮಂದಿಗೆ 50 ಸಾವಿರ ಬೆಲೆಯ ಚಿನ್ನ ವಿತರಿಸಲಾಗಿದೆ. ಬೆಂಗಳೂರು ಭಾಗದ ವಿಜೇತರಿಗೆ ಇಂದು ಬಹುಮಾನ ವಿತರಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯಿಂದ ವರ್ಷದಲ್ಲಿ ಎರಡು ಬಾರಿ ಲಕ್ಕಿ ಡ್ರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಡಿಸೆಂಬರ್ ನಿಂದ ಜನವರಿ ಅಂತ್ಯದವರೆಗೆ ನ್ಯೂ ಇಯರ್ ಸೂಪರ್ ಸೇಲ್, ವರ್ಷಾಂತ್ಯದ ಸೆಪ್ಟೆಂಬರ್, ಅಕ್ಟೋ ಬರ್ ಮತ್ತು ಡಿಸೆಂಬರ್‌ನಲ್ಲಿ ಮೆಗಾ ಸೂಪರ್ ಸೇಲ್ ನಡೆಯುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೀರಾ ರಾಜ್‌ಕುಮಾರ್ ಪೈ, ನಿವೃತ್ತ ಎಸಿಪಿ ವೆಂಕಟಸ್ವಾಮಿ ಮತ್ತಿತರರು ಇದ್ದರು.