Advertisement

ಶಿರಸಿಗೆ ಸೂಪರ್ ಆಸ್ಪತ್ರೆ: ಕಟ್ಟಡಕ್ಕೆ ಶಿಲಾನ್ಯಾಸ

12:12 PM Apr 02, 2022 | Team Udayavani |

ಶಿರಸಿ: ಶಿರಸಿಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಕಡಿಮೆ ಇಲ್ಲದ ವ್ಯವಸ್ಥೆ ಇಲ್ಲಿ ಸಿಗಲಿದೆ. ಅದರ ಕಟ್ಟಡ ಕಾಮಗಾರಿಗೆ ಯುಗಾದಿಯಂದು ಚಾಲನೆ ನೀಡಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಅವರು ನಗರದ ರಾಯಪ್ಪ ಹುಲೇಕಲ್ ಶಾಲೆಯ ಆವಾರದಲ್ಲಿ 112 ಕೋ.ರೂಮ ಮೊತ್ತ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಎಂದು ಸರಕಾರಿ ಭಾಷೆಯಲ್ಲಿ ಬಳಸಲು ಆಗದು ಅಷ್ಟೇ.  ಆದರೆ, ಇಲ್ಲಿ ಅಷ್ಟೇ ಸೌಲಭ್ಯ ಸಿಗಲಿದೆ ಎಂದರು.

ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳು ಚಿಕಿತ್ಸೆ ನಿತ್ಯ ಆರೆಂಟು ಸಾವಿರ ಜನರಿಗೆ ಚಿಕಿತ್ಸೆಯ ನೆರವಾಗುತ್ತಿದೆ. ಖಾಸಗಿ ಆಸ್ಪತ್ರೆ ಆರೋಗ್ಯ ಸೇವೆ ಸುಧಾರಣೆ ಆಗಿದೆ. ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ಪಡೆಯುತ್ತಿದ್ದೇವೆ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಹೊರ ಊರನ್ನೇ ಅವಲಂಬಿಸಬೇಕಾಗಿತ್ತು. ಆ ಸಮಸ್ಯೆ ಇಲ್ಲಿ ಸ್ಪಂದಿಸಲು ನೆರವಾಗುತ್ತದೆ ಎಂದರು.

Advertisement

250 ಹಾಸಿಗೆಗಳ ದೊಡ್ಡಾಸ್ಪತ್ರೆ ಇದಾಗಲಿದೆ. 24 ತಿಂಗಳಲ್ಲಿ ಇದರ ಕಾಮಗಾರಿ ಮುಗಿಯಬೇಕು. 30 ಕೋ.ರೂ.ಗೂ ಅಧಿಕ ಉಪಕರಣಗಳೂ ಬರಲಿವೆ. ಮೂರು‌ ಅಂತಸ್ತಿನ ಕಟ್ಟಡ, ವಸತಿ ನಿಲಯ ಹೀಗೆ ನಿರೀಕ್ಷೆ‌ ಮೀರಿದ ಆಸ್ಪತ್ರೆ ಆಗಲಿದೆ. ರಾಯಪ್ಪ ಹುಲೇಕಲ್ ಶಾಲೆಯವರು 1 ಎಕರೆ ಜಾಗ ಕೂಡ ಕೊಟ್ಟಿದ್ದಾರೆ. ದೊಡ್ಡ ಉದ್ದೇಶಕ್ಕೆ ಸಣ್ಣ ಪುಟ್ಟ ತೊಂದರೆ ಆಗದಂತೆ ಕೆಲಸ‌ ಮಾಡಬೇಕು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಶರದ್ ನಾಯಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ  ವೀಣಾ ಶೆಟ್ಟಿ, ಎಸಿ ದೇವರಾಜು, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಸ್ಥಾಯಿ‌ ಸಮಿತಿ ಅಧ್ಯಕ್ಷ ಆನಂದ ಸಾಲೇರ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಪೌರಾಯುಕ್ತ ‌ಕೇಶವ ಚೌಗಲೆ ಇತರರು ಇದ್ದರು.

ಆಸ್ಪತ್ರೆ ದೊಡ್ಡದಾಗಿದೆ ಎಂದರೆ‌ ನಾವು  ಆಸ್ಪತ್ರೆಗೆ ಬರಬೇಕಿಲ್ಲ. ನಾವು ಒಳ್ಳೆಯ ಜೀವನ ಶೈಲಿ, ಯೋಗ, ಆಹಾರ ರೂಢಿಸಿಕೊಳ್ಳಬೇಕು. ಆರೋಗ್ಯ ರಕ್ಷಣೆ‌ ನಿರ್ಲಕ್ಷ್ಯ ಮಾಡಬಾರದು.– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Advertisement

Udayavani is now on Telegram. Click here to join our channel and stay updated with the latest news.

Next