Advertisement

Super-8; ವಿಂಡೀಸ್‌-ಅಮೆರಿಕ: ಆತಿಥೇಯರ ಸಮರ

11:51 PM Jun 21, 2024 | Team Udayavani |

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಲೀಗ್‌ ಹಂತದಲ್ಲಿ ಅಜೇಯವಾಗಿ ಮೆರೆದಾಡಿದ ಆತಿಥೇಯ ವೆಸ್ಟ್‌ ಇಂಡೀಸ್‌ “ಸೂಪರ್‌-8’ಗೆ ಬಂದೊಡನೆ ಸೋಲಿನ ಸುಳಿಗೆ ಸಿಲುಕಿದೆ. ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಎದುರಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಕಳೆದುಕೊಂಡಿದೆ. ಶನಿವಾರದ ದ್ವಿತೀಯ ಪಂದ್ಯದಲ್ಲಿ ಮತ್ತೂಂದು ಆತಿಥೇಯ ತಂಡವಾದ ಅಮೆರಿಕವನ್ನು ಎದುರಿಸಲಿದ್ದು, ಇಲ್ಲಿ ಗೆಲ್ಲಲೇಬೇಕಾದ ಒತ್ತಡ ಪೊವೆಲ್‌ ಪಡೆಯದ್ದು.

Advertisement

ಕೊನೆಯಲ್ಲಿ ದಕ್ಷಿಣ ಆಫ್ರಿಕಾದ ಕಠಿನ ಸವಾಲು ಎದುರಾಗುವುದರಿಂದ ಅಮೆರಿಕವನ್ನು ಮಣಿಸಬೇಕಾದುದು ಅನಿವಾರ್ಯ ಎಂಬುದು ಕೆರಿಬಿಯನ್ನರ ಸ್ಥಿತಿ. ಇಂಗ್ಲೆಂಡ್‌ ಎದುರಿನ ಸೋಲಿನಿಂದ ವೆಸ್ಟ್‌ ಇಂಡೀಸ್‌ಗೆ ಎದುರಾದ ಮತ್ತೂಂದು ಆಘಾತವೆಂದರೆ ಗ್ರೂಪ್‌ ಎರಡರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದದ್ದು. ನೆಟ್‌ ರನ್‌ರೇಟ್‌ -1.343ಕ್ಕೆ ಇಳಿದಿದೆ. ಅಂದರೆ ಅಮೆರಿಕಕ್ಕಿಂತ ಕೆಳಕ್ಕೆ (-0.900). ಹೀಗಾಗಿ ಯುಎಸ್‌ಎಯನ್ನು ದೊಡ್ಡ ಅಂತರದಲ್ಲಿ ಮಣಿಸಬೇಕಿದೆ.

ಇಂಗ್ಲೆಂಡ್‌ ಎದುರು 51 ಡಾಟ್‌ ಎಸೆತಗಳು ವೆಸ್ಟ್‌ ಇಂಡೀಸ್‌ಗೆ ಮುಳುವಾದವು. ಸ್ಟ್ರೈಕ್‌ ರೊಟೇಟ್‌ ಮಾಡಲು ಬ್ಯಾಟರ್ ವಿಫ‌ಲರಾದರು. ಇಲ್ಲವಾದರೆ ಮೊತ್ತವನ್ನು ಇನ್ನೂರರ ಗಡಿ ದಾಟಿಸಬಹುದಿತ್ತು. ಆದರೆ ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿರುವ ವಿಂಡೀಸ್‌ ಯಾವುದೇ ಕ್ಷಣದಲ್ಲಿ ತಿರುಗಿ ಬೀಳಬಹುದಾದ ತಂಡ. ಹೀಗಾಗಿ ಅಮೆರಿಕಕ್ಕೆ ದೊಟ್ಟ ಮಟ್ಟದಲ್ಲೇ ಆಘಾತ ನೀಡುವ ಸಾಧ್ಯತೆ ಇದ್ದೇ ಇದೆ.

ಇಂಗ್ಲೆಂಡ್‌ ವಿರುದ್ಧ ಸ್ನಾಯು ಸೆಳೆತಕ್ಕೆ ಸಿಲುಕಿದ ಬ್ರ್ಯಾಂಡನ್‌ ಕಿಂಗ್‌ ಇನ್ನೂ ಚೇತರಿಸಿಲ್ಲ. ಇವರ ಬದಲು ಶಿಮ್ರನ್‌ ಹೆಟ್‌ಮೈರ್‌ ಆಡಬಹುದು.

“ನಾವು ಅಂಡರ್‌ ಡಾಗ್ಸ್‌’
ಉದ್ಘಾಟನ ಪಂದ್ಯದಲ್ಲಿ ಕೆನಡಾವನ್ನು ಮಣಿಸಿದ ಅಮೆ ರಿಕ, ಬಳಿಕ ಪಾಕಿಸ್ಥಾನವನ್ನು ಕೆಡವಿ ಭಾರೀ ಸಂಚಲನ ಮೂಡಿ ಸಿತ್ತು. ಅನಂತರ ಮೊನಾಂಕ್‌ ಪಟೇಲ್‌ ಪಡೆ ಎಲ್ಲೂ ಗೆಲುವು ಸಾಧಿಸಿಲ್ಲ. ಆದರೆ ಆಡಿದ ಪ್ರಥಮ ವಿಶ್ವಕಪ್‌ನಲ್ಲೇ ದ್ವಿತೀಯ ಸುತ್ತಿಗೇರಿದ ಸಾಹಸ ಯಾವುದಕ್ಕೂ ಕಡಿಮೆ ಅಲ್ಲ.

Advertisement

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಮೆರಿಕದ ಸೋಲಿನ ಅಂತರ 18 ರನ್‌ ಮಾತ್ರ. ಆದರೆ ಸೋಲು ಸೋಲೇ. ವಿಂಡೀಸ್‌ ವಿರುದ್ಧವೂ ಎಡವಿದರೆ ಅಮೆರಿಕದ ಹಾದಿ ಮುಚ್ಚಲಿದೆ.
“ನಾವು ಉತ್ತಮ ಕ್ರಿಕೆಟ್‌ ಪ್ರದರ್ಶನ ನೀಡಿದ್ದೇವೆ. ತಂಡವಾಗಿ ಆಡಿದ್ದೇವೆ. ಆದರೆ ನಾವು ಸೂಪರ್‌-8 ಹಂತದಲ್ಲಿ ಪ್ರತಿಯೊಂದು ತಂಡದ ಪಾಲಿಗೂ ಅಂಡರ್‌ ಡಾಗ್ಸ್‌ ಆಗಿದ್ದೇವೆ’ ಎಂಬುದಾಗಿ ಯುಎಸ್‌ಎ ಬ್ಯಾಟರ್‌ ಸ್ಟೀವನ್‌ ಟೇಲರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next