Advertisement

ಶಿವಮೊಗ್ಗ: ಟಿಇಟಿ ಪರೀಕ್ಷೆ…ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿ ಬದಲು ಸನ್ನಿ ಲಿಯೋನ್ ಫೋಟೋ!

08:11 AM Nov 09, 2022 | Team Udayavani |

ಶಿವಮೊಗ್ಗ : ರವಿವಾರ ನಡೆದ ಟಿಇಟಿ ಪರೀಕ್ಷೆಗೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿಯ ಫೋಟೋ ಬದಲು ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಫೋಟೋ ಕಾಣಿಸಿಕೊಂಡಿದೆ.

Advertisement

ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯಿಂದ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.
ಕಳೆದ ರವಿವಾರ ಶಿವಮೊಗ್ಗದಲ್ಲಿ ನಡೆದ ಟಿಇಟಿ ಪರೀಕ್ಷೆ ವೇಳೆ ಹಾಜರಾದ ಮಹಿಳಾ ಅಭ್ಯರ್ಥಿಯ ಹಾಲ್ ಟಿಕೆಟ್ ನಲ್ಲಿ ಅಶ್ಲೀಲಾ ಫೋಟೋ ಕಾಣಿಸಿಕೊಂಡಿದೆ, ಇದನ್ನು ಗಮನಿಸಿದ ಎನ್ ಇಎಸ್ ನ ರುದ್ರಪ್ಪ ಕಾಲೇಜು ಪ್ರಾಂಶುಪಾಲ ಚನ್ನಪ್ಪ ಅವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ, ಈ ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ ಟಿಇಟಿ ಹಾಲ್ ಟಿಕೆಟ್ ನಲ್ಲಿ ಅಭ್ಯರ್ಥಿ ಬದಲು ಅಶ್ಲೀಲ ಫೋಟೊ ಅಪ್ಲೋಡ್ ಆಗಿದೆ, ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ, ದೂರು ಆಧರಿಸಿ ಈಗಾಗಲೇ ತನಿಖೆ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಅಭ್ಯರ್ಥಿ ಬಳಿ ಮಾಹಿತಿ ಪಡೆಯಲಾಗಿದೆ, ಅರ್ಜಿ ಸಲ್ಲಿಕೆಗಾಗಿ ಬೇರೆಯವರಿಗೆ ಹೇಳಲಾಗಿತ್ತು ಎಂದು ಅಭ್ಯರ್ಥಿ ತಿಳಿಸಿದ್ದಾರೆ. ಅಭ್ಯರ್ಥಿಯ ಹೇಳಿಕೆ ಆಧರಿಸಿ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

ಇದನ್ನೂ ಓದಿ : ಟಿ20 ವಿಶ್ವಕಪ್‌: ಫೈನಲ್‌ ಟಿಕೆಟ್‌ಗೆ ಪಾಕಿಸ್ಥಾನ-ನ್ಯೂಜಿಲ್ಯಾಂಡ್‌ ಫೈಟ್‌

Advertisement

Udayavani is now on Telegram. Click here to join our channel and stay updated with the latest news.

Next