Advertisement

ಸುನೀಲ್‌ ಶೆಟ್ಟಿ ಟಿ20 ವಿಶ್ವಕಪ್‌ ತಂಡದಲ್ಲಿ ಎಂ.ಎಸ್‌. ಧೋನಿ

10:15 PM May 08, 2020 | Sriram |

ಮುಂಬಯಿ: ಬಾಲಿವುಡ್‌ ಸ್ಟಾರ್‌ ಸುನೀಲ್‌ ಶೆಟ್ಟಿ ಲಾಕ್‌ಡೌನ್‌ ಸಮಯದಲ್ಲಿ ಟಿ20 ವಿಶ್ವಕಪ್‌ ಪಂದ್ಯಾವಳಿಗಾಗಿ ತನ್ನ ನೆಚ್ಚಿನ ಭಾರತ ತಂಡವೊಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಅವರು ರಿಷಭ್‌ ಪಂತ್‌ ಅವರನ್ನು ಕೈಬಿಟ್ಟು ಮಾಜಿ ನಾಯಕ, ಮಿಂಚಿನ ಸ್ಟಂಪರ್‌ ಧೋನಿ ಅವರನ್ನು ಸೇರಿಸಿದ್ದಾರೆ.

Advertisement

ಧೋನಿ ಅವರನ್ನು ಸೇರಿಸಿಕೊಳ್ಳಲು ಹಾಗೂ ಪಂತ್‌ ಅವರನ್ನು ಕೈಬಿಡಲು ಸುನೀಲ್‌ ಶೆಟ್ಟಿ ಕಾರಣವನ್ನೂ ನೀಡಿದ್ದಾರೆ. “ಸದ್ಯದ ಮಟ್ಟಿಗೆ ರಾಂಚಿ ಆಟಗಾರನಿಲ್ಲದ ಭಾರತ ಕ್ರಿಕೆಟ್‌ ತಂಡವನ್ನು ಕಲ್ಪಿಸಲು ಸಾಧ್ಯವಿಲ್ಲ. ಪಂತ್‌ ಪ್ರತಿಭಾನ್ವಿತ ನಿಜ, ಆದರೆ ಅವರು 4-5 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು…’ ಎಂದಿದ್ದಾರೆ.

ಸುನೀಲ್‌ ಶೆಟ್ಟಿ ಟಿ20 ತಂಡ: ರೋಹಿತ್‌ ಶರ್ಮ, ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಮಹೇಂದ್ರ ಸಿಂಗ್‌ ಧೋನಿ (ವಿ.ಕೀ.), ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌, ರವೀಂದ್ರ ಜಡೇಜ, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಬುಮ್ರಾ, ದೀಪಕ್‌ ಚಹರ್‌, ಭುವನೇಶ್ವರ್‌ ಕುಮಾರ್‌.

 

Advertisement

Udayavani is now on Telegram. Click here to join our channel and stay updated with the latest news.

Next