ಕಾರ್ಕಳ: ಚುನಾಯಿತ ನಾದ ಮೊದಲ ಒಂದು ತಿಂಗಳು ಕ್ಷೇತ್ರದ ಆವಶ್ಯಕತೆಗಳ ಬಗ್ಗೆ ಇಲಾಖಾ ವಾರು ಪಟ್ಟಿ ಮಾಡಿ ಯೋಜನೆ ರೂಪಿ ಸುತ್ತೇನೆ. ಮುಂದಿನ ಐದು ವರ್ಷ ಗಳಲ್ಲಿ ಅದನ್ನು ಸಾಧಿಸುವುದು ನನ್ನ ಕಾರ್ಯಶೈಲಿ. ಅದನ್ನು ಪ್ರಾಮಾಣಿಕವಾಗಿ ಮಾಡಿ ಚಿತ್ರ ಸಹಿತ ಸಾಧನೆಯ ವರದಿ ಜನರ ಮುಂದಿರಿಸಿದ್ದೇನೆ ಎಂದು ಇಂಧನ ಸಚಿವ ಸುನಿಲ್‌ಕುಮಾರ್ ಹೇಳಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 5 ವರ್ಷಗಳ ಅವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಕ್ರಮಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಕಾರ್ಯ ಕ್ರಮದಲ್ಲಿ ಅವರು ಮಾತ ನಾಡಿದರು.
ಸ್ವರ್ಣ ಕಾರ್ಕಳದ ಕಲ್ಪನೆಯಲ್ಲಿ ಆರಂಭದಲ್ಲಿ ಕ್ಷೇತ್ರದ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿತ್ತು. ಆದರೀಗ ದೊಡ್ಡ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಕಾರ್ಯ ಆರಂಭಿಸಿದ್ದೇವೆ. ಮತ್ತೂಂದು ಅವಧಿಗೆ ಅವಕಾಶ ಸಿಕ್ಕಲ್ಲಿ ಕಲ್ಪನೆಯ ಸ್ವರ್ಣ ಕಾರ್ಕಳದ ಹಾದಿ ಸುಗಮವಾಗುತ್ತದೆ ಎಂದರು.
ಮೂಡುಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ್ ಆಳ್ವ ಮಾತ ನಾಡಿ, 224 ಕ್ಷೇತ್ರಗಳ ಪೈಕಿ ಸುನಿಲ್ ಎಲ್ಲರನ್ನೂ ವಿಶ್ವಾಸ ತೆಗೆದು ಕೊಂಡ ಯಶಸ್ವೀ ಸಚಿವರು ಎಂದರು. ಹಿರಿಯ ನ್ಯಾಯ ವಾದಿ ಎಂ.ಕೆ. ವಿಜಯ ಕುಮಾರ್ ಸಚಿವರ ಕಾರ್ಯಶೈಲಿಯ ಕುರಿತು ಮಾತನಾಡಿದರು. ಹಿರಿಯರಾದ ಪ್ರಭಾಕರ ಕಾಮತ್, ಗೇರು ಅಭಿವೃದ್ಧಿ ನಿಗಮದ ಮಣಿರಾಜ್ ಶೆಟ್ಟಿ, ಧಾರ್ಮಿಕ ಮುಖಂಡ ಭಾಸ್ಕರ್ ಜೋಯಿಸ, ದರ್ಮದರ್ಶಿ ಪುಂಡಲೀಕ ನಾಯಕ್, ಕಾಳಿಕಾಂಬಾ ದೇಗುಲದ ರಾಮಚಂದ್ರ ಆಚಾರ್ಯ, ಮಹಾಬಲ ಸುವರ್ಣ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಉದಯ ಕುಲಾಲ್ ವೇದಿಕೆ ಉಪಸ್ಥಿತಿಯಲ್ಲಿದ್ದರು.
ಬಾಲಕಲಾವಿದೆ ಸನ್ನಿಧಿ ಮೂಲ್ಯ ಅವರನ್ನು ಗೌರವಿಸಲಾಯಿತು. ರವೀಂದ್ರ ಮೊಲಿ ಸ್ವಾಗತಿಸಿ, ಶ್ರೀಧರ್ ವಂದಿಸಿದರು. ಸಂಗೀತ ಕುಲಾಲ್ ನಿರೂಪಿಸಿದರು. ಸಾಧನೆ ಗಳ ವೀಡಿಯೋ ಚಿತ್ರಿಕರಣ ಪ್ರದರ್ಶಿಸಲಾಯಿತು.
Related Articles
ಉದಯವಾಣಿ ವರದಿ ಪ್ರಸ್ತಾವ
ಅಂತರ್ಜಲ ಮಟ್ಟದ ಸ್ಥಿತಿಗತಿಗಳ ಬಗ್ಗೆ ಉದಯವಾಣಿ ಇತ್ತೀಚೆಗೆ ಅಂಕಿ ಅಂಶ ಸಹಿತ ವರದಿ ಪ್ರಕಟಿಸಿತ್ತು. ಅದರಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಸಮತೋಲನ ಕಾಯ್ದುಕೊಂಡಿರುವುದು ಕಂಡುಬಂದಿದೆ. ಅಂತರ್ಜಲ ವಿಚಾರವಾಗಿ ಕ್ಷೇತ್ರದಲ್ಲಿ ಕೈಗೊಂಡ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಸಚಿವರು ಉದಯವಾಣಿ ವರದಿಯನ್ನು ಉಲ್ಲೇಖೀಸಿದರು.
ಟೀಕೆ ಬೇಡ, ಅಭಿವೃದ್ಧಿ ಚರ್ಚೆ ನಡೆಯಲಿ
ರಾಜಕಾರಣದಲ್ಲಿ ಟೀಕೆ ಸಹಜ. ಟೀಕಾಕಾರರು ಅಭಿವೃದ್ಧಿ ವಿಚಾರದಲ್ಲಿ ಮುಕ್ತ ಚರ್ಚೆಗೆ ಬಂದಲ್ಲಿ ಸಿದ್ಧ. ಶಾಸಕನಾದ ಆರಂಭದ ದಿನಗಳ ಕೆಲಸ ಕೊನೆ ವೇಳೆಗೆ ಜನರಿಗೆ ನೆನಪಿರುವುದಿಲ್ಲ. ಶಾಸಕನಾಗಿ 5 ವರ್ಷಗಳಲ್ಲಿ ಮಾಡಿದ್ದನ್ನು ವರದಿಯಲ್ಲಿ ಹೇಳಿದ್ದೇನೆ. 5 ವರ್ಷ ನಾನು ಕ್ಷೇತ್ರದ ಜನತೆಯ ಪರವಾಗಿ ಮಾತನಾಡಿದ್ದೇನೆ ಇನ್ನು ಒಂದೂವರೆ ತಿಂಗಳು ನೀವು ಮಾತನಾಡಬೇಕು ಎಂದು ಸಚಿವರು ಹೇಳಿದರು.