ನವದೆಹಲಿ: ಐಪಿಎಲ್ ಗಾಗಿ ತಯಾರಿ ನಡೆಸುತ್ತಿರುವ ಪಂಜಾಬ್ ಕಿಂಗ್ಸ್ ತಂಡವು ಹಿರಿಯ ಆಟಗಾರ, ಕನ್ನಡಿಗ ಸುನೀಲ್ ಜೋಷಿ ಅವರನ್ನು ಸ್ಪಿನ್ ಕೋಚ್ ಆಗಿ ನೇಮಕ ಮಾಡಿದೆ.
ಈ ಸಂಬಂಧ ಟ್ವಿಟರ್ ಪ್ರಕಟಣೆ ಹೊರಡಿಸಿರುವ ಪಂಜಾಬ್ ಕಿಂಗ್ಸ್, ಹಿರಿಯ ಆಟಗಾರ ಸುನೀಲ್ ಜೋಷಿ ಅವರನ್ನು ಸ್ಪಿನ್ ತರಬೇತುದಾರರಾಗಿ ನೇಮಕ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವಾಗಿದೆ ಎಂದಿದೆ.
ಇದನ್ನೂ ಓದಿ:ಕಾರ್ಯಕಾರಣಿ ನಡುವೆ ಬಿಎಸ್ ವೈ ಜೊತೆ ಪ್ರಧಾನಿ ಮೋದಿ ಪ್ರತ್ಯೇಕ ಚರ್ಚೆ
52 ವರ್ಷದ ಸುನೀಲ್ ಜೋಷಿ ಅವರು 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 1999ರಿಂದ 2001ರ ವರೆಗೆ ಭಾರತ ತಂಡದಲ್ಲಿದ್ದರು. ಜತೆಗೆ, ಭಾರತ ಹಿರಿಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ. ಜತೆಗೆ ಎರಡು ದಶಕಗಳ ಕಾಲ, ಕರ್ನಾಟಕ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.