Advertisement

ಟಿ20 ತಂಡದ ನಾಯಕತ್ವಕ್ಕೆ ರೋಹಿತ್ ಬದಲು ಹೊಸ ಹೆಸರು ಸೂಚಿಸಿದ ಸುನೀಲ್ ಗಾವಸ್ಕರ್

10:03 AM Sep 17, 2021 | Team Udayavani |

ಮುಂಬೈ: ಹಲವು ಗುಮಾನಿಗಳ ಬಳಿಕ ಭಾರತದ ಮೂರು ಮಾದರಿ ಕ್ರಿಕೆಟ್ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವೊಂದನ್ನು ಘೋಷಣೆ ಮಾಡಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವವನ್ನು ತ್ಯಜಿಸಲಿದ್ದೇನೆ ಎಂದು ವಿರಾಟ್ ಗುರುವಾರ ಹೇಳಿದ್ದಾರೆ.

Advertisement

ಇದೀಗ ಮುಂದಿನ ನಾಯಕನ ಬಗ್ಗೆ ಚರ್ಚೆ ಆರಂಭವಾಗಿದೆ. ಸಹಜವಾಗಿಯೇ ಉಪ ನಾಯಕ ರೋಹಿತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ. ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ ರೋಹಿತ್ ಟಿ20 ತಂಡದ ನಾಯಕತ್ವಕ್ಕೆ ಸಹಜವಾಗಿಯೇ ಪ್ರಬಲ ಸ್ಪರ್ಧಿ. ಆದರೆ 34 ವರ್ಷದ ರೋಹಿತ್ ಇನ್ನೆಷ್ಟು ವರ್ಷ ಆಡುತ್ತಾರೆ ಎನ್ನುವುದೇ ಇಲ್ಲಿ ಅವರ ಆಯ್ಕೆಗೆ ಅಡಚಣೆಯಾಗವಹುದು ಎನ್ನುವುದು ಹಲವರ ವಾದ.

ಭಾರತದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಕೂಡಾ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಪೋರ್ಟ್ಸ್ ತಕ್ ಜೊತೆಗೆ ಮಾತನಾಡಿದ ಅವರು, ಭವಿಷ್ಯದ ಬಗ್ಗೆ ಯೋಚನೆ ಮಾಡುವುದಾದರೆ ಕೆ.ಎಲ್.ರಾಹುಲ್ ಟಿ20 ತಂಡದ ನಾಯಕತ್ವಕ್ಕೆ ಸೂಕ್ತ ವ್ಯಕ್ತಿ ಎಂದಿದ್ದಾರೆ.

“ನೀವು ಹೊಸ ನಾಯಕನ ಬಗ್ಗೆ ಯೋಚಿಸುತ್ತಿದ್ದರೆ, ಕೆಎಲ್ ರಾಹುಲ್ ಅವರನ್ನು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಅವರ ಕಾರ್ಯಕ್ಷಮತೆ ತುಂಬಾ ಚೆನ್ನಾಗಿದೆ. ಇಂಗ್ಲೆಂಡಿನಲ್ಲಿಯೂ ಅವರ ಬ್ಯಾಟಿಂಗ್ ತುಂಬಾ ಚೆನ್ನಾಗಿತ್ತು. ಅವರು ಐಪಿಎಲ್ ಮತ್ತು 50 ಓವರ್‌ಗಳ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರನ್ನು ಉಪನಾಯಕನನ್ನಾಗಿ ಮಾಡಬಹುದು” ಎಂದು ಸುನೀಲ್ ಗಾವಸ್ಕರ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next