Advertisement

ಸುನೀಲ್‌ ಚೆಟ್ರಿ ಹುಟ್ಟುಹಬ್ಬಕ್ಕೆ ಪ್ರದರ್ಶನ ಪಂದ್ಯ

06:00 AM Aug 04, 2018 | Team Udayavani |

ಹೊಸದಿಲ್ಲಿ: ಖ್ಯಾತ ಫ‌ುಟ್ಬಾಲಿಗ ಸುನೀಲ್‌ ಚೆಟ್ರಿ ಹುಟ್ಟುಹಬ್ಬದ ವಿಶೇಷವಾಗಿ ಹೊಸದಿಲ್ಲಿಯಲ್ಲಿ ಪ್ರದರ್ಶನ ಪಂದ್ಯವನ್ನು ಶುಕ್ರವಾರ ಆಯೋ ಜಿಸಲಾಗಿತ್ತು. “ದಿಲ್ಲಿ ಫ‌ುಟ್‌ಬಾಲ್‌ ದಿನ’ ಎನ್ನುವ ಹೆಸೆರಿನಿಂದ ಈ ಪಂದ್ಯ ನಡೆಯಿತು.

Advertisement

ಹೊಸದಿಲ್ಲಿಯ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ದಲ್ಲಿ 19 ವರ್ಷ ವಯೋಮಿತಿಯ ಆಟಗಾರ್ತಿಯರು ಪಾಲ್ಗೊಂಡರು. ಚೆಟ್ರಿ ಅಂತಾರಾಷ್ಟ್ರೀಯ ಫ‌ುಟ್‌ ಬಾಲ್‌ನಲ್ಲಿ ಮಾಡಿರುವ ಸಾಧನೆ ದೇಶದ ಯುವಕರಿಗೆ ಸ್ಫೂರ್ತಿ. ಅಂತಹ ಸಾಧಕನ ಹೆಸರಿನಲ್ಲಿ ಪಂದ್ಯವನ್ನು ಆಯೋಜಿಸು ತ್ತಿರುವುದು ಹೆಮ್ಮೆಯ ವಿಷಯ ಎಂದು ದಿಲ್ಲಿ ಫ‌ುಟ್‌ಬಾಲ್‌ ಸಂಸ್ಥೆ ತಿಳಿಸಿದೆ. ಇತ್ತೀಚೆಗೆ ಸುನೀಲ್‌ ಚೆಟ್ರಿ ಅವರಿಗೆ ಅಖೀಲ ಭಾರತೀಯ ಫ‌ುಟ್‌ಬಾಲ್‌ (ಎಐಎಫ್ಎಫ್) ಸಂಸ್ಥೆ ವತಿಯಿಂದ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next