Advertisement

ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ಮದುವೆ ವದಂತಿ: ಸುನೀಲ್ ಶೆಟ್ಟಿ ಹೇಳಿದ್ದೇನು?

12:03 PM May 12, 2022 | Team Udayavani |

ಮುಂಬಯಿ: ನಟ ಸುನೀಲ್ ಶೆಟ್ಟಿ ಅವರು, ‘ತಮ್ಮ ನಟ ಮಗಳು ಅಥಿಯಾ ಮತ್ತು ಅವರ ಕ್ರಿಕೆಟಿಗ ಗೆಳೆಯ ಕೆ.ಎಲ್. ರಾಹುಲ್ ಯಾವಾಗ ಮದುವೆಯಾಗಬೇಕು ಅನ್ನುವುದು ಅವರಿಗೆ ಬಿಟ್ಟದ್ದು, ಆದರೆ ಅವರಿಗೆ ನನ್ನ “ಆಶೀರ್ವಾದ” ಇದೆ’ ಎಂದು ಹೇಳಿದ್ದಾರೆ.

Advertisement

ದಂಪತಿಗಳು ತಾವು ಡೇಟಿಂಗ್ ಮಾಡುತ್ತಿರುವುದನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ, ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ವರದಿಗಳಿವೆ.

ಬುಧವಾರ ಸಂಜೆ ನಡೆದ ಮೆರಾಕಿ ರಿಯಲ್ ಎಸ್ಟೇಟ್ ಬ್ರಾಂಡ್‌ನ ಸಮಾರಂಭದಲ್ಲಿ, ಸುನೀಲ್ ಶೆಟ್ಟಿ ಅವರು ರಾಹುಲ್ ಅವರನ್ನು “ಪ್ರೀತಿಸುತ್ತೇನೆ” ಎಂದು ಹೇಳಿದರು ಆದರೆ ಮದುವೆಯ ವದಂತಿಗಳನ್ನು ದೃಢೀಕರಿಸಲು ನಿರಾಕರಿಸಿದರು. “ನನ್ನ ಮಗಳು, ಅವಳು ಯಾವಾಗಲಾದರೂ ಮದುವೆಯಾಗುತ್ತಾಳೆ. ನನ್ನ ಮಗನೂ ಮದುವೆಯಾಗಬೇಕೆಂದು ನಾನು ಬಯಸುತ್ತೇನೆ. ಎಷ್ಟು ಬೇಗವೊ ಅಷ್ಟು ಒಳ್ಳೆಯದು! ಆದರೆ ಇದು ಅವರ ಆಯ್ಕೆಯಾಗಿದೆ. ರಾಹುಲ್ ವಿಷಯಕ್ಕೆ ಬಂದರೆ, ನಾನು ಹುಡುಗನನ್ನು ಪ್ರೀತಿಸುತ್ತೇನೆ. ಕಾಲ ಬದಲಾಗಿರುವುದರಿಂದ ಅವರು ಏನು ಮಾಡಬೇಕೆಂದು ನಿರ್ಧರಿಸುತ್ತಾರೆ. ಅವರು ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ ಎಂದು ನಟ ಸುದ್ದಿಗಾರರಿಗೆ ತಿಳಿಸಿದರು.

29ರ ಹರೆಯದ ಅಥಿಯಾ ಮತ್ತು 30 ರ ಹರೆಯದ ರಾಹುಲ್, ಇಬ್ಬರೂ ನಿಯಮಿತವಾಗಿ ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ ಮತ್ತು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ನಟಿ ಇತ್ತೀಚಿಗೆ “ಮೋತಿಚೂರ್ ಚಕ್ನಾಚೂರ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next