Advertisement

ಇಂದಿನ ಗ್ರಹಬಲ: ರವಿವಾರದ ರಾಶಿಫಲ ಹೇಗಿದೆ?

08:25 AM Apr 24, 2022 | Team Udayavani |

24-04-2022

Advertisement

ಮೇಷ: ಉದ್ಯೋಗ ನಿಮಿತ್ತ ದೂರ ಪ್ರಯಾಣ ಸಂಭವ. ಆರೋಗ್ಯ ಗಮನಿಸಿ. ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಪ್ರಗತಿ. ಉತ್ತಮ ಧನವೃದ್ಧಿ. ಬಂಧುಮಿತ್ರರ ಪ್ರೋತ್ಸಾಹ. ಧಾರ್ಮಿಕ ವಿಚಾರದಲ್ಲಿ ನಿಷ್ಠೆ , ಶ್ರದ್ಧೆ.

ವೃಷಭ: ದೇವತಾ ಕಾರ್ಯದಲ್ಲಿ ತಲ್ಲೀನತೆ. ಜನಮನ್ನಣೆ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು. ಕೀರ್ತಿ ಸಂಪಾದನೆ. ಧನಾರ್ಜನೆ ವೃದ್ಧಿ. ಗುರುಹಿರಿಯರಿಂದ ಸಂತೋಷ ವೃದ್ಧಿ.

ಮಿಥುನ: ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿ. ನಿರೀಕ್ಷಿತ ಧನಾಗಮನ. ಸಹೋದ್ಯೋಗಿಗಳಿಂದ ಸಹಕಾರ. ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಪ್ರಗತಿ. ಸಂಶೋಧಕ ಪ್ರವೃತ್ತಿಯವರಿಗೆ ಸೌಕರ್ಯಾದಿ ವೃದ್ಧಿ. ಗುರು ಹಿರಿಯರ ಉತ್ತಮ ಮಾರ್ಗದರ್ಶನ.

ಕರ್ಕ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿತ ಯಶಸ್ಸು ಲಭ್ಯ. ಆರ್ಥಿಕ ಸುದೃಢತೆ. ಮಕ್ಕಳಿಂದಲೂ ಹಿರಿಯರಿಂದಲೂ ಸಂತೋಷ ವೃದ್ಧಿ ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆ ಅಗತ್ಯ. ಗೃಹದಲ್ಲಿ ಸಂತೋಷ.

Advertisement

ಸಿಂಹ: ಸ್ಥಿರ ಮತ್ತು ದೃಢತೆಯಿಂದ ಕೂಡಿದ ಕಾರ್ಯ ವೈಖರಿ. ಸ್ಥಾನಮಾನ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಅಗತ್ಯ. ಮಾತಿನಲ್ಲಿ ಸಹನೆ ತಾಳ್ಮೆ ವಹಿಸುವುದರಿಂದ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಗೃಹೋಪಕರಣ ವಸ್ತುಗಳ ಸಂಗ್ರಹ.

ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಸಫ‌ಲತೆ. ಪಾರದರ್ಶಕತೆಗೆ ಆದ್ಯತೆ ನೀಡಿ. ಉತ್ತಮ ಧನ ಸಂಚಯನ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ .

ತುಲಾ: ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಜವಾಬ್ದಾರಿ ಒತ್ತಡ. ಉತ್ತಮ ಧನಾರ್ಜನೆ ಇದ್ದರೂ ಖರ್ಚಿಗೆ ಹಲವಾರು ಮಾರ್ಗಗಳು ಎದುರಾಗುವುವು.

ವೃಶ್ಚಿಕ: ನಿರೀಕ್ಷಿತ ಸ್ಥಾನ ಗೌರವ ಆದರಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನ ಸಂಪಾದನೆಯಿಂದ ಆತ್ಮ ಸ್ವಾಸ್ಥ್ಯ ವೃದ್ಧಿ.

ಧನು: ಆರೋಗ್ಯದಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಭೂಮಿ ಆಸ್ತಿ ವ್ಯವಹಾರ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸಹಾಯ ಒದಗಿ ಅಭಿವೃದ್ಧಿ. ದಾಂಪತ್ಯ ತೃಪ್ತಿದಾಯಕ. ಕುಟುಂಬಿಕರ ಉತ್ತಮ ಸಹಕಾರ, ಪ್ರೋತ್ಸಾಹ.

ಮಕರ: ಉತ್ತಮ ಆರೋಗ್ಯ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಧನಾರ್ಜನೆಗೆ ಸರಿಯಾದ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ದಾಂಪತ್ಯ ಸುಖ ಉತ್ತಮ. ನೂತನ ಮಿತ್ರರ ಭೇಟಿ.

ಕುಂಭ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಉತ್ತಮ ಧನ ಸಂಪತ್ತು ಪ್ರಾಪ್ತಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಗೃಹೋಪ ವಸ್ತುಗಳ ಸಂಗ್ರಹ. ದೀರ್ಘ‌ ಪ್ರಯಾಣದಿಂದ ದೇಹಾಯಾಸ.

ಮೀನ: ಸುದೃಢ ಆರೋಗ್ಯ. ಮಾತಿನಲ್ಲಿ ತಾಳ್ಮೆ ಹಿಡಿತವಿರಲಿ. ಅನಗತ್ಯ ಚರ್ಚೆಗೆ ಒಳಗಾಗಿ ಆರ್ಥಿಕ ನಷ್ಟಕ್ಕೆ ಒಳಗಾಗದಿರಿ. ಪಾಲುದಾರಿಕಾ ಕ್ಷೇತ್ರ ಉದ್ಯೋಗ ವ್ಯವಹಾರಗಳಲ್ಲಿ ಪರಸ್ಪರ ಸಹಕಾರ ಪ್ರೋತ್ಸಾಹವಿರಲಿ.. ವಿದ್ಯಾರ್ಥಿಗಳಿಗೆ ಅತ್ಯುತ್ತಮ ದಿನ. ಸದಾವಕಾಶ ಕೂಡಿ ಬರುವುದು

Advertisement

Udayavani is now on Telegram. Click here to join our channel and stay updated with the latest news.

Next