Advertisement

ಭಾನುವಾರದ ರಾಶಿಫಲ ಇಲ್ಲಿದೆ ನೋಡಿ

08:14 AM Oct 03, 2021 | Team Udayavani |

ಮೇಷ: ಅನಿರೀಕ್ಷಿತ ಧನಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್‌ಚತುರತೆ.

Advertisement

ವೃಷಭ: ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧುಮಿತ್ರರ ಸಹಕಾರ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ. ದಾಂಪತ್ಯದಲ್ಲಿ ಅನುರಾಗ ವೃದ್ಧಿ.

ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ವತ್ಛತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ , ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಮಕ್ಕಳ ನಿಮಿತ್ತ ಶ್ರಮ.

ಕರ್ಕ: ಸಣ್ಣ ಪ್ರಯಾಣ ಸಂಭವ. ನಿರೀಕ್ಷಿಗೂ ಮಿರೀದ ಧನಾಗಮನ. ಮನಃಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನ ಗೌರವಾದಿ ವೃದ್ಧಿ. ಅಧಿಕಾರಿಯುತ ನಡೆಯಿಂದ ಸಫ‌ಲತೆ. ಬಂಧುಮಿತ್ರರ ಸಹಾಯ ಸಹಕಾರ ಲಭ್ಯ.

ಸಿಂಹ: ಆರೋಗ್ಯ ಸುಧಾರಣೆ. ಆಲೋಚಿಸಿದ ರೀತಿ ಯಲ್ಲಿ ಕಾರ್ಯ ವೃದ್ಧಿಯಾದುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ಗೌರವ ಪ್ರಾಪ್ತಿ. ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ ನಷ್ಟ ಸಂಭವ.

Advertisement

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ನೇತೃತ್ವ. ಗುರುಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾಗಿ ಧನವ್ಯಯ ತೋರೀತು. ಮಕ್ಕಳಿಂದ ತೃಪ್ತಿ. ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.

ತುಲಾ: ಸುಖ ಸಂತೋಷದಿಂದ ಕೂಡಿದ ಸಮಯ. ಆಸ್ತಿವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧಿಕ ಧನಾರ್ಜನೆ ಇದ್ದರೂ ಲಾಭಾಂಶ ಕಡಿಮೆ ತೋರೀತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯ.

ವೃಶ್ಚಿಕ: ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರಾದಿ ವರ್ಗದವರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಪ್ರಾಪ್ತಿ.

ಧನು: ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆ ಆಗುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ.

ಮಕರ: ಉತ್ತಮ ಸ್ಥಿರ ಆರೋಗ್ಯ. ವಿವೇಕದಿಂದ ಕೂಡಿದ ಕೆಲಸ ಕಾರ್ಯಗಳು. ಜನಮನ್ನಣೆ. ಉತ್ತಮ ವಾಕ್‌ಚತುರತೆಯಿಂದ ಹೆಚ್ಚಿದ ಧನಾರ್ಜನೆ. ಕುಟುಂಬ ಸುಖ ವೃದ್ಧಿ. ನೂತನ ಮಿತ್ರರ ಭೇಟಿ. ದೀರ್ಘ‌ ಪ್ರಯಾಣ ಸಂಭವ.

ಕುಂಭ: ಆರೋಗ್ಯ ವೃದ್ಧಿ. ಉತ್ತಮ ಕಾರ್ಯ ಚಟುವಟಿಕೆ ಗಳಿಂದ ಕೂಡಿದ ದಿನಚರಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳ ನೇತೃತ್ವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು.

ಮೀನ: ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಉತ್ತಮ ಧನಾರ್ಜನೆ ಹಾಗೂ ಅಧಿಕ ಉಳಿತಾಯ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ಗುರು ಹಿರಿಯರ ಆರೋಗ್ಯ ಸುಧಾರಣೆ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಸ್ಥಾನ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next