Advertisement

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

07:35 AM Sep 26, 2021 | Team Udayavani |

ಮೇಷ: ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ಕೂಡಿದ ನಡೆ. ದೂರ ವ್ಯವಹಾರದಿಂದ ಧನ ವೃದ್ಧಿ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ಆರೋಗ್ಯ ಸ್ಥಿರ. ಗುರುಹಿರಿಯರನ್ನು ಅನುಸರಿಸುವುದರಿಂದ ಕ್ಷೇಮ.

Advertisement

ವೃಷಭ: ಪ್ರಯಾಣದಿಂದ ದೇಹಾಯಾಸ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಅಭಿವೃದ್ಧಿ. ಧಾರ್ಮಿಕ ಕೆಲಸಗಳಿಂದ ಮಾನಸಿಕ ನೆಮ್ಮದಿ. ಗೃಹೋಪಕರಣ ವಸ್ತುಗಳ ಸಂಗ್ರಹಕ್ಕೆ ಧನವ್ಯಯ.

ಮಿಥುನ: ನಿರೀಕ್ಷಿತ ಸ್ಥಾನ ಪ್ರಾಪ್ತಿ. ಅಧ್ಯಯನಶೀಲರಿಗೆ ಉತ್ತಮ ಗೌರವ ಆದರಗಳು ಸಿಗುವ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯ ಸುದೃಢ.

ಕರ್ಕ: ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಸಂಭವ. ಉದ್ಯೋಗ ಕೆಲಸ ಕಾರ್ಯಗಳಲ್ಲಿ ಉನ್ನತಿ. ಉತ್ತಮ ಧನ ಸಮೃದ್ಧಿ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ, ಹಿರಿಯರಿಗೆ ಅನುಕೂಲಕರ ಪರಿಸ್ಥಿತಿ.

ಸಿಂಹ: ಗೃಹೋಪಕರಣ ವಸ್ತುಗಳ ಸಂಗ್ರಹಕ್ಕಾಗಿ ಧನವ್ಯಯ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಒತ್ತಡ ಗಳಿದ್ದರೂ ಕಾರ್ಯ ಪೂರೈಸುವಿರಿ. ಧನಾರ್ಜನೆಗೆ ಕೊರತೆ ಕಾಣದು. ನೂತನ ಮಿತ್ರರ ಸಹಕಾರ. ಹಿರಿಯರ ಉತ್ತಮ ಮಾರ್ಗದರ್ಶನ.

Advertisement

ಕನ್ಯಾ: ಆರೋಗ್ಯ ಉತ್ತಮ. ಧನಾರ್ಜನೆ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸರಿಯಾದ ಯೋಜನೆಯಿಂದ ಕೂಡಿದ ಕಾರ್ಯ ವೈಖರಿ. ಸಹೋದರ, ಸಹೋದ್ಯೋಗಿಗಳಿಂದ ಸಹಾಯ ಸಹಕಾರ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ತುಲಾ: ಆಸ್ತಿ, ವಾಹನಾದಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಗುರುಹಿರಿಯರಿಂದ ಸಂತೋಷ ವೃದ್ಧಿ. ಪರಸ್ಪರ ಸಹಕಾರ. ಸಹೋದ್ಯೋಗಿಗಳಿಂದ ಪ್ರೋತ್ಸಾಹ. ಹೆಚ್ಚಿದ ಧನಲಾಭ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ.

ವೃಶ್ಚಿಕ: ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ದೂರದ ವ್ಯವಹಾರಗಳಲ್ಲಿ ಪರಾವಲಂಬನೆ ಅನಿವಾರ್ಯವಾದೀತು. ಪಾರದರ್ಶಕತೆಗೆ ಆದ್ಯತೆ ನೀಡಿ. ಧನಾರ್ಜನೆಯಲ್ಲಿ ಪ್ರಗತಿ.

ಧನು: ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯ ಸುದೃಢ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರುಹಿರಿಯರ ಮೇಲಾಧಿಕಾರಿಗಳ ಗಣ್ಯರ ಸಹಕಾರ ಪ್ರೋತ್ಸಾಹ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ.

ಮಕರ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ಸಮಾಜದಲ್ಲಿ ಗೌರವ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ಬದಲಾವಣೆ. ಬಂಧುಮಿತ್ರ ರೊಂದಿಗೆ ಚರ್ಚಿಸಿ ಅವಕಾಶ ನೀಡದಿರಿ. ನಿರೀಕ್ಷಿತ ಧನಾರ್ಜನೆ.

ಕುಂಭ: ಹಣಕಾಸಿನ ವಿಚಾರದಲ್ಲಿ ಅಪೇಕ್ಷಿಸಿದಂತೆ ಉತ್ತಮ ಪ್ರತಿಫ‌ಲ. ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಅಧಿಕಾರ ಗೌರವಾದಿ ಪ್ರಾಪ್ತಿ. ಗುರುಹಿರಿಯರ ಆರೋಗ್ಯ ಸುದೃಢ. ಬಂಧುಮಿತ್ರರಿಂದ ಜವಾಬ್ದಾರಿಯುತ ಸಹಕಾರ.

ಮೀನ: ನಿರೀಕ್ಷಿತ ಸ್ಥಾನ ಗೌರವಾದಿ ಸುಖ ಪ್ರಾಪ್ತಿ. ಆರೋಗ್ಯ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಸರಿಯಾದ ದಾಖಲಾತಿಗಳೊಂದಿಗೆ ವ್ಯವಹರಿಸಿ. ಸಾಲ ಖಾತೆಗೆ ಒಳಗಾಗದಂತೆ ಎಚ್ಚರಿಕೆ ಇರಲಿ. ಮಾತಿನಲ್ಲಿ ದಾಕ್ಷಿಣ್ಯತೆ ತೋರದಿರಿ.

Advertisement

Udayavani is now on Telegram. Click here to join our channel and stay updated with the latest news.

Next