Advertisement

ರವಿವಾರದ ರಾಶಿ ಫಲ : ಇಂದು ಈ ರಾಶಿಯವರಿಗೆ ನಿರೀಕ್ಷೆಗೂ ಮೀರಿದ ಧನಲಾಭ

07:30 AM Oct 02, 2022 | Team Udayavani |

ಮೇಷ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಸತ್ಕಾರ್ಯಕ್ಕೆ ಧನವ್ಯಯ. ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ದೂರ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಅಧಿಕ ಶ್ರಮ ಎದುರಾದೀತು. ದಂಪತಿಗಳಲ್ಲಿ ಪರಸ್ಪರ ಸಹಕಾರ.

Advertisement

ವೃಷಭ: ಜವಾಬ್ದಾರಿಯುತ ನಡೆಯಿಂದ ಸ್ಥಾನಮಾನಗಳಿಂದ ಗುರುತಿಸುವಿಕೆ. ಕೈ ಹಿಡಿದ ಕೆಲಸ ಕಾರ್ಯಗಳನ್ನು ಪೂರೈಸಿದ ನೆಮ್ಮದಿ. ಸಂಶೋದನಾ ಪ್ರವೃತ್ತಿ. ಪರರೊಂದಿಗೆ ವ್ಯವಹರಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ.

ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದೀರ್ಘ‌ ಪ್ರಯಾಣ. ಪರರ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವಿಕೆ. ಅಧಿಕ ಪರಿಶ್ರಮ. ಹಿರಿಯರೊಂದಿಗೆ ಸಮಾದಾನದಿಂದ ವರ್ತಿಸುವುದರಿಂದ ಮನ್ನಣೆ. ನಿರೀಕ್ಷೆಗೂ ಮೀರಿದ ಧನಲಾಭ.

ಕರ್ಕ: ಆರೋಗ್ಯ ವೃದ್ಧಿ. ನಿರೀಕ್ಷಿಸಿದಂತೆ ಸುಖ. ಸಂದರ್ಭಕ್ಕೆ ಸರಿಯಾಗಿ ಪರಾಕ್ರಮ ಪ್ರದರ್ಶನ. ಚಂಚಲತೆ ಅತೀ ಬುದ್ಧಿವಂತಿಕೆ ತೋರ³ಡುವಿಕೆ. ಜನಪದದಿಂದ ಗೌರವ ಆದರ ಲಭ್ಯ. ಧಾರ್ಮಿಕ ಕಾರ್ಯಗಳಲ್ಲಿ ಏಕಾಗ್ರತೆಗೆ ಆದ್ಯತೆ ನೀಡಿದರೆ ಉಲ್ಲಾಸ.

ಸಿಂಹ: ಸ್ಥಿರ ಬುದ್ಧಿ ಸ್ಪಷ್ಟತೆಗಳಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯದಲ್ಲಿ ಸುದಾರಣೆ. ಆರ್ಥಿಕ ವಿಚಾರದಲ್ಲಿ ನಿರೀಕ್ಷಿಸಿದಷ್ಟು ಸಿಗಲಾರದು. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ ,ಅಡಚಣೆ ತೋರೀತು. ಸಾಂಸಾರಿಕ ಸುಖಕ್ಕೆ ಹೆಚ್ಚಿದ ಶ್ರಮ.

Advertisement

ಕನ್ಯಾ: ಆರೋಗ್ಯ ಗಮನಿಸಿ. ಸ್ವತ್ಛತೆಗೆ ಆದ್ಯತೆ ನೀಡಿ. ಅನಗತ್ಯ ಗೊಂದಲಗಳಿಗೆ ಒಳಗಾಗದಂತೆ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಮಕ್ಕಳಿಂದ ಸಂತೋಷ ವೃದ್ಧಿ.

ತುಲಾ: ಸಣ್ಣ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಪರಾಕ್ರಮ ದೈರ್ಯ ಶೌರ್ಯ ಪ್ರದರ್ಶನ. ಸಂಪತ್ತು ವೃದ್ಧಿ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ. ಗೌರವ ಸುಖಾದಿ ಲಭ್ಯ. ದೂರದ ಮಿತ್ರರಿಂದ ಸಹಕಾರ ಲಭಿಸೀತು.

ವೃಶ್ಚಿಕ: ಮಕ್ಕಳಿಂದ ಸಂತೋಷ ವೃದ್ಧಿ. ವಿದ್ಯೆ ಜ್ಞಾನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಲಭ್ಯ. ಮೇಲಧಿಕಾರಿಗಳಿಂದ ಪ್ರೋತ್ಸಾಹ. ದಾನಧರ್ಮ ಮಾಡಿದ ತೃಪ್ತಿ ಇತ್ಯಾದಿ ಶುಭ ಫ‌ಲ.

ಧನು: ನಿರೀಕ್ಷಿತ ಧನ ಸಂಚಯನ ವೃದ್ಧಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುದಾರಣೆ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅನಗತ್ಯ ಚರ್ಚೆಗೆ ಅವಕಾಶ ಸಲ್ಲಿಸದಿರಿ. ಅಧ್ಯಯನಕ್ಕೆ ಆದ್ಯತೆ. ನೂತನ ಮಿತ್ರರ ಭೇಟಿಯಿಂದ ಸಂತೋಷ.

ಮಕರ: ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರಿಗೆ ಸಂಭ್ರಮದ ವಾತಾವರಣ. ದೂರದ ಮಿತ್ರರೊಂದಿಗೆ ಸಮಾಲೋಚನೆ. ದಂಪತಿಗಳಲ್ಲಿ ಪರಸ್ಪರ ಸಹಕಾರ. ಉತ್ತಮ ಧನ ಸಂಪಾದನೆ.

ಕುಂಭ: ಆರೋಗ್ಯ ಗಮನಿಸಿ. ದೈಹಿಕ ಶ್ರಮ. ಅಧಿಕ ಬುದ್ಧಿವಂತಿಕೆ ಚುರುಕುತನದ ಪ್ರದರ್ಶನ. ಜನಾನುರಾಗಿ ವರ್ತನೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಪರಿಶ್ರಮಕ್ಕೆ ತಕ್ಕ ಉತ್ತಮ ಪ್ರತಿಫ‌ಲ ಕೆಲಸ ಕಾರ್ಯಗಳಲ್ಲಿ ಸ್ಪಷ್ಟತೆ.

ಮೀನ: ನಿರೀಕ್ಷಿತ ಸ್ಥಾನ ಗೌರವ ದೊರಕಿದ ಸಂತೋಷ.ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಮಕ್ಕಳಿಂದ ಸಂತೋಷ ವೃದ್ಧಿ. ಉತ್ತಮ ಗುಣ ನಡತೆಯಿಂದ ಜನಾದಾರ ಗೌರವ ಪ್ರಾಪ್ತಿ. ಆರೋಗ್ಯದ ಬಗ್ಗೆ ಗಮನಿಸಿ. ಹಿರಿಯರ ಆಶೀರ್ವಾದದಿಂದ ಶ್ರೇಯಸ್ಸು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next