Advertisement

ರವಿವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ

07:21 AM Sep 18, 2022 | Team Udayavani |

ಮೇಷ: ದೈಹಿಕ ಹಾಗೂ ಮಾನಸಿಕ ಸುಖಕ್ಕೆ ಹೆಚ್ಚಿದ ಪರಿಶ್ರಮ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉತ್ತಮ ಅಭಿವೃದ್ಧಿದಾಯಕ ಧನಾರ್ಜನೆ. ವಾಕ್‌ಚತುರತೆಯಿಂದ ಜನಮನ್ನಣೆ. ದಾಂಪತ್ಯ ಸುಖದಲ್ಲಿ ಪರಸ್ಪರ ಸಹಕಾರ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

Advertisement

ವೃಷಭ: ಆರೋಗ್ಯ ವೃದ್ಧಿœ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಸ್ಥಾನಮಾನ ಗೌರವ. ಅಧಿಕ ಧನಾರ್ಜನೆ. ಗೃಹದಲ್ಲಿ ಸಣ್ಣ ಬದಲಾವಣೆಗಳು ತೋರಿಬಂದಾವು. ಸಹೋದರಾದಿ ವರ್ಗದವರಿಂದ ನೆಮ್ಮದಿ ಸಂತೋಷ. ಗುರುಹಿರಿಯರ ಉತ್ತಮ ಮಾರ್ಗದರ್ಶನ.

ಮಿಥುನ: ಸುದೃಢ ಆರೋಗ್ಯ. ಮಾನಸಿಕ ನೆಮ್ಮದಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಧಿಕಾರ ಗೌರವಾದಿ ಪ್ರಾಪ್ತಿ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಗೃಹದಲ್ಲಿ ಸಂತಸದ ವಾತಾವರಣ. ಗುರುಹಿರಿಯರ ಅನುಭವದ ಲಾಭ.

ಕರ್ಕ: ಹಲವು ಚಟುವಟಿಕೆಗಳಿಂದ ಕೂಡಿದ ದಿನ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಸಂದರ್ಭಕ್ಕೆ ಸರಿಯಾದ ಆಲೋಚನೆ ನಿರ್ಣಯದಿಂದ ನಿರàಕ್ಷಿತ ಸ್ಥಾನ ಲಾಭ. ಆಸ್ತಿ ವಿಚಾರದಲ್ಲಿ ಎಚ್ಚರಿಕೆ.

ಸಿಂಹ: ದೈಹಿಕ ಆರೋಗ್ಯ ವೃದ್ಧಿ ಹಾಗೂ ಮಾನಸಿಕ ಸಂತುಷ್ಟತೆ. ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಬಂಧುಗಳಿಂದ ಸಹಕಾರ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ, ಮಾತಿನಲ್ಲಿ ತಾಳ್ಮೆ ಎಚ್ಚರಿಕೆಯಿಂದ ಯಶಸ್ಸು. ದಾಂಪತ್ಯ ಸುಖ ವೃದ್ಧಿ.

Advertisement

ಕನ್ಯಾ: ಆರೋಗ್ಯವು ಸುದಾರಣೆಯ ಹಾದಿಯಲ್ಲಿ. ಸರಿಯಾದ ಶಿಸ್ತು ಪಾಲನೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ಮಾನಸಿಕ ನೆಮ್ಮದಿ ವೃದ್ಧಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ನಿರ್ವಹಿಸುವ ಚಟುವಟಿಕೆಗಳಲ್ಲಿ ಪ್ರಗತಿ. ಮಿತ್ರರಿಂದ ಹೆಚ್ಚಿದ ಸಹಕಾರ.

ತುಲಾ: ಸ್ವಂತ ಪರಿಶ್ರಮ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿಯಲ್ಲಿ ಸಫ‌ಲತೆ. ಗಣ್ಯರಿಂದ ಮನ್ನಣೆ. ಆತ್ಮೀಯರಿಗೆ ಪ್ರೀತಿಪಾತ್ರರಾಗು ಸಂದರ್ಭ. ಸಾಂಸಾರಿಕ ಸುಖ ವೃದ್ಧಿ. ಭೂಮ್ಯಾದಿ ವಿಚಾರಗಳಲ್ಲಿ ವಿಳಂಬ. ವಿದ್ಯಾರ್ಥಿಗಳಿಗೆ ಹೆಚ್ಚಿನ ಗೌರವ.

ವೃಶ್ಚಿಕ: ದೈರ್ಯ ಪರಾಕ್ರಮ ಶೌರ್ಯ ಆತ್ಮಸ್ಥೈರ್ಯದಿಂದ ಕೂಡಿದ ಚಟುವಟಿಕೆ. ಸ್ವಾಭಿಮಾನ ಗುಣದಿಂದ ಗೌರವ ಆದರಾದಿ ಸುಖ ವೃದ್ಧಿ. ಸಣ್ಣ ಸಂಚಾರ ಸಂಭವ. ಗೃಹದಲ್ಲಿ ಸಂತಸದ ವಾತಾವರಣ. ಗುರುಹಿರಿಯರ ಮಾರ್ಗದರ್ಶನ.

ಧನು: ಪ್ರಯಾಣದಿಂದ ದೇಹಾಯಾಸ ಸಂಭವ. ದೂರದ ವ್ಯವಹಾರಗಳಿಂದ ಧನಾರ್ಜನೆ ವೃದ್ಧಿ. ದಾಂಪತ್ಯ ಸnುಖ ತೃಪ್ತಿದಾಯಕ. ಅಧ್ಯಯನ ಪ್ರವೃತ್ತರಿಗೆ ಉತ್ತಮ ವಾತಾವರಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಮಕರ: ನಾಯಕತ್ವ ಗುಣ ವೃದ್ಧಿ. ಸಹೋದರ ಸಮಾನರಿಂದ ಸಂದಭೋìಚಿತ ಸಹಾಯ ಸಹಕಾರ. ಪ್ರಯಾಣದಿಂದ ಲಾಭ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಸಮಯ.

ಕುಂಭ: ಅಧ್ಯಯನಶೀಲತೆ. ಉದ್ಯೋಗ ವ್ಯವಹಾರಗಳಲ್ಲಿ ಅಧಕ ಧನಾರ್ಜನೆ ಆದರೂ ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ನಿರ್ಣಯಿಸಿ. ಗೃಹೋಪಕರಣ ವಸ್ತು ಸಂಗ್ರಹ. ಗುರುಹಿರಿಯರ ಆರೋಗ್ಯ ವೃದ್ಧಿ.

ಮೀನ: ಮಾನಸಿಕ ಸಂತುಷ್ಠತೆಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಿ. ಅನಗತ್ಯ ವಿಚಾರಗಳಿಗೆ ಒಲವು ತೋರದಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಸ್ಥಳ ಸಂದರ್ಶನ. ಸಹೋದರಾದಿ ವರ್ಗದವರಿಂದ ಸಹಾಯ. ದಾಂಪತ್ಯ ಸುಖ ವೃದ್ಧಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next