ನ್ಯೂಯಾರ್ಕ್: 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ ಇದೀಗ ಉನ್ನತ ಸ್ಥಾನಗಳಲ್ಲಿರುವ ಉದ್ಯೋಗಿಗಳ ವೇತನದಲ್ಲಿ ಕಡಿತಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ಮುಂದಾಗಿದ್ದಾರೆ.
Advertisement
ಗೂಗಲ್ ಉದ್ಯೋಗಿಗಳೊಂದಿಗೆ ನಡೆದ ಸಭೆಯ ವೇಳೆ ಈ ಬಗ್ಗೆ ಮಾಹಿತಿ ನೀಡಿದ ಅವರು, “ಕಂಪನಿಯ ಹಿರಿಯ ಉಪಾಧ್ಯಕ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಥಾನಗಳ ಉದ್ಯೋಗಿಗಳ ವಾರ್ಷಿಕ ಬೋನಸ್‌ನಲ್ಲಿ ಕಡಿತಗೊಳಿಸಲಾಗುವುದು.
ಕಂಪನಿಯ ಕಾರ್ಯಕ್ಷಮತೆಯ ಆಧಾರದಲ್ಲಿ ಅವರಿಗೆ ಪರಿಹಾರ ನೀಡಲಾಗುತ್ತದೆ,’ ಎಂದು ತಿಳಿಸಿದ್ದಾರೆ. ಎಷ್ಟು ಶೇಖಡವಾರು ವೇತನ ಕಡಿತವಾಗುವುದು ಎಂಬುದರ ಬಗ್ಗೆ ಪಿಚೈ ಮಾಹಿತಿ ನೀಡಿಲ್ಲ. ಅಲ್ಲದೇ ಸ್ವತಃ ಅವರ ವೇತನದಲ್ಲೂ ಕಡಿತವಾಗುವ ಸಾಧ್ಯತೆ ಇದೆ.