Advertisement

ದೇಶದಲ್ಲಿ ಗೂಗಲ್ ನಿಂದ 75 ಸಾವಿರ ಕೋಟಿ ರೂ. ಹೂಡಿಕೆ;ಸುಂದರ್ ಪಿಚೈ ಬಿಚ್ಚಿಟ್ಟ ಡಿಜಿಟಲ್ ಕನಸು

04:24 PM Jul 13, 2020 | Nagendra Trasi |

ನವದೆಹಲಿ:ಅಂತರ್ಜಾಲ ಜಗತ್ತಿನ ದೈತ್ಯ ಕಂಪನಿ ಎಂದೇ ಗುರುತಿಸಿಕೊಂಡಿರುವ ಗೂಗಲ್, ಭಾರತದಲ್ಲಿ ಮುಂದಿನ 5-7 ವರ್ಷಗಳಲ್ಲಿ ಬರೋಬ್ಬರಿ 75 ಸಾವಿರ ಕೋಟಿ ಹಣವನ್ನು ಕಂಪನಿ ಹೂಡಿಕೆ(ಅಂದಾಜು 10 ಬಿಲಿಯನ್ ಡಾಲರ್) ಮಾಡಲಿದೆ ಎಂದು ಸೋಮವಾರ ಘೋಷಿಸಿದೆ.

Advertisement

ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ (ಡಿಜಿಟಲ್ ಕ್ರಾಂತಿಗೆ ಬೆಂಬಲ) ಫಂಡ್ ಅನ್ನು ಘೋಷಿಸಿಲು ತುಂಬಾ ಉತ್ಸುಕನಾಗಿದ್ದೇನೆ ಎಂದಿರುವ ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ, ನಾವು ಭಾರತದಲ್ಲಿ 75 ಸಾವಿರ ಕೋಟಿ ರೂಪಾಯಿ ಹಣವನ್ನು ಶೇರು ಹೂಡಿಕೆ, ಸಹಭಾಗಿತ್ವ, ಕಾರ್ಯಾಚರಣೆ, ಮೂಲಭೂತ ಮತ್ತು ಪರಿಸರ ಸ್ನೇಹಿ ಯೋಜನೆ ಮೂಲಕ ಹೂಡಿಕೆ ಮಾಡುವುದಾಗಿ ವಿವರಿಸಿದ್ದಾರೆ.

ಇದು ಭಾರತದ ಭವಿಷ್ಯ ಮತ್ತು ಅದರ ಡಿಜಿಟಲ್ ಆರ್ಥಿಕತೆಯ ಬಗೆಗಿನ ನಮ್ಮ ವಿಶ್ವಾಸದ ಪ್ರತೀಕವಾಗಿದೆ ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಗೂಗಲ್ ಫಾರ್ ಇಂಡಿಯಾದ ವರ್ಚುವಲ್ ಕಾರ್ಯಕ್ರಮದಲ್ಲಿ ಘೋಷಿಸಿದರು.

ನಾವು ಪ್ರಮುಖವಾಗಿ ನಾಲ್ಕು ಮುಖ್ಯವಾದ ಅಂಶಗಳನ್ನು ಕೇಂದ್ರೀಕರಿಸಿಕೊಂಡು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಸಮರ್ಪಕ ಮಾಹಿತಿಯನ್ನೊಳಗೊಂಡ ಡಿಜಿಟಲೈಸೇಶನ್ ಅನ್ನು ಹಿಂದಿ, ತಮಿಳು, ಪಂಜಾಬಿ ಸೇರಿದಂತೆ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಪಿಚೈ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next