Advertisement

ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸುನಂದಾ ಅವಿರೋಧ ಆಯ್ಕೆ

05:43 PM May 19, 2022 | Team Udayavani |

ಕೊರಟಗೆರೆ:  ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಲಹೆ ಮತ್ತು ಸೂಚನೆಯಂತೆ ಕ್ಯಾಮೇನಹಳ್ಳಿ ಗ್ರಾಮ ಪಂಚಾಯತ್ ಗೆ ಕಾಂಗ್ರೆಸ್ ಬೆಂಬಲಿತ ನೂತನ ಅಧ್ಯಕ್ಷೆಯಾಗಿ ಸುನಂದಾ ಶಶಿಧರ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಕೊರಟಗೆರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ್ ತಿಳಿಸಿದರು.

Advertisement

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಮೇನಹಳ್ಳಿ ಗ್ರಾಪಂಯಲ್ಲಿ ಗುರುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕ್ಯಾಮೇನಹಳ್ಳಿ ಗ್ರಾ. ಪಂ. ಸಮಗ್ರ ಅಭಿವೃದ್ದಿಗೆ ನಮ್ಮ ಶಾಸಕರಾದ ಡಾ.ಜಿ.ಪರಮೇಶ್ವರ್ ಆರ್ಶಿವಾದ ಸದಾ ಇರಲಿದೆ. ಕ್ಯಾಮೇನಹಳ್ಳಿ ಗ್ರಾಪಂಗೆ ನೂತವಾಗಿ ಆಯ್ಕೆಯಾದ ಅಧ್ಯಕ್ಷರು ತಮ್ಮ ಸದಸ್ಯರ ಜೊತೆಗೂಡಿ ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಸಹಕಾರ ನೀಡಬೇಕಿದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷೆ ಸುನಂಧಶಶಿಧರ್ ಮಾತನಾಡಿ ಕ್ಯಾಮೇನಹಳ್ಳಿ ಗ್ರಾಪಂಗೆ ನಾನು ಪ್ರಥಮವಾಗಿ ಅವಿರೋಧ ಆಯ್ಕೆ ಆಗಿದ್ದೇನೆ. ನಮ್ಮ ಶಾಸಕರು ಮತ್ತು ಗ್ರಾಪಂ ಸರ್ವಸದಸ್ಯರ ಜೊತೆ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ ನೀಡುತ್ತೇನೆ. ನನಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲ ನೀಡಿದ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಇದನ್ನೂ ಓದಿ : ಗಾಳಿ ಮಳೆ : ಕಿಷ್ಕಿಂದಾ ಅಂಜನಾದ್ರಿ ಬಳಿ ನಿರ್ಮಾಣ ಹಂತದ ಮೊಬೈಲ್ ಟವರ್ ಬಿದ್ದು 7 ಮಂದಿಗೆ ಗಾಯ

Advertisement

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ವೆಂಕಟ ಲಕ್ಷ್ಮಮ್ಮ, ಉಪಾಧ್ಯಕ್ಷೆ ಲಕ್ಷ್ಮೀ ಬಾಯಿ, ಸದಸ್ಯರಾದ ವೀರಯ್ಯ, ಹನುಮಂತರಾಜು, ಸಿದ್ದಗಂಗಮ್ಮ, ಪುಟ್ಟರಾಜು, ಹರೀಶ್, ಸೌಮ್ಯ, ಶಿವಕುಮಾರ್, ರತ್ನಮ್ಮ, ನಾಗಮಣಿ, ರಾಮಕ್ಕ, ಲಕ್ಷ್ಮೀ ನರಸಿಂಹಮೂರ್ತಿ, ಅನುರಾಧ,,ಗ್ರಾಪಂ ಪಿಡಿಓ ಯಶೋಧ, ಮುಖಂಡರಾದ ಉಮಾಶಂಕರ್, ಶಿವಣ್ಣ, ದೇವರಾಜು, ಚೆಲುವರಾಜು, ರವಿಕುಮಾರ್ ಸೇರಿದಂತೆ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next