Advertisement

ಸುನಂದಾ ಪುಷ್ಕರ್‌ ಸಾವು ಇನ್ನೂ ನಿಗೂಢ: ವೈದ್ಯಕೀಯ ಮಂಡಳಿ ವರದಿ

11:17 AM Jan 28, 2017 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ಸಾವಿನ ಕಾರಣಗಳ ನಿಖರತೆ ಇನ್ನೂ ಅಪೂರ್ಣವಾಗಿಯೇ ಉಳಿದಿದೆ ಎಂದು ಹೊಸ ವೈದ್ಯಕೀಯ ಮಂಡಳಿ ಹೇಳಿದೆ.

Advertisement

ಸುನಂದಾ ಪುಷ್ಕರ್‌ ಸಾವಿನ ಕುರಿತಾಗಿ ಅಮೆರಿಕದ ಎಫ್ ಬಿ ಐ ಮತ್ತು ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸಸ್‌ (ಏಮ್ಸ್‌) ನೀಡಿರುವ ವೈದ್ಯಕೀಯ ಸಾಕ್ಷ್ಯಗಳನ್ನು ಮತ್ತೆ ಪರಿಶೀಲಿಸಲು ಈ ವೈದ್ಯಕೀಯ ಮಂಡಳಿಯನ್ನು ರೂಪಿಸಲಾಗಿತ್ತು.

ಸುನಂದಾ ಪುಷ್ಕರ್‌ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಈಗ ಎರಡು ವಾರಗಳ ಹಿಂದೆ ಈ ಹೊಸ ವೈದ್ಯಕೀಯ ಮಂಡಳಿಯ ವರದಿಯು ಸಿಕ್ಕಿದೆ. 

51ರ ಹರೆಯದ ಸುನಂದಾ ಪುಷ್ಕರ್‌ ಅವರ ಮೃತ ದೇಹವು 2014ರ ಜನವರಿ 17ರ ರಾತ್ರಿ ದಕ್ಷಿಣ ದಿಲ್ಲಿಯ ಪಂಚತಾರಾ ಹೊಟೇಲೊಂದರ ಕೋಣೆಯಲ್ಲಿ ಪತ್ತೆಯಾಗಿತ್ತು. ಒಂದು ದಿನದ ಹಿಂದಷ್ಟೆ ಸುನಂದಾ ಪುಷ್ಕರ್‌, ತನ್ನ ಪತಿ ತರೂರ್‌ಗೆ ಪಾಕ್‌ ಪತ್ರಕತೆರ ಮೆಹರ್‌ ತರಾರ್‌ ಜತೆಗೆ ಪ್ರೇಮ ಸಂಬಂಧ ಇದೆ ಎಂದು ಟ್ವಿಟರ್‌ನಲ್ಲಿ ಆಪಾದಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next