Advertisement

ಜೂನ್‌- ಜುಲೈನಲ್ಲಿ ಇಸ್ರೋದಿಂದ ಸೂರ್ಯನ ಅಧ್ಯಯನ? ಪೇ ಲೋಡ್‌ ಸ್ವೀಕರಿಸಿದ ಬಾಹ್ಯಾಕಾಶ ಸಂಸ್ಥೆ

09:22 PM Jan 26, 2023 | Team Udayavani |

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಸೂರ್ಯನ ಅಧ್ಯಯನ, ದೇಶದ ಮೊದಲ ಸೌರ ಮಿಷನ್‌ ಆದಿತ್ಯ ಎಲ್‌-1 ಜುಲೈನಲ್ಲಿ ನಡೆಯುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ದೇಶದ ಬಾಹ್ಯಾಕಾಶ ಸಂಸ್ಥೆ ಪೇಲೋಡ್‌ ವಿಎಲ್‌ಇಸಿ ಅನ್ನು ಗುರುವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವೀಕರಿಸಿದೆ.

Advertisement

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಆಸ್ಟ್ರೋಫಿಸಿಕ್ಸ್‌ (ಐಐಎ) ಜ.26ರ ಗಣರಾಜ್ಯೋತ್ಸವದಂದು ವಿಸಿಬಲ್‌ ಲೈನ್‌ ಎಮಿಷನ್‌ ಕ್ರೋನೋಗ್ರಾಫ್ (ವಿಇಎಲ್‌ಸಿ) ಪೇಲೋಡ್‌ ಅನ್ನು ಇಸ್ರೋಗೆ ಹಸ್ತಾಂತರಿಸಿದೆ.

ಆದಿತ್ಯ ಒಟ್ಟು 7 ಪೇಲೋಡ್‌ಗಳನ್ನು ಹೊತ್ತು ಸಾಗಲಿದ್ದು, ಈ ಪೈಕಿ ವಿಇಎಲ್‌ಸಿ ಕೂಡ ಒಂದಾಗಿದೆ. ಆದರೆ, ಈ 7 ಪೇಲೋಡ್‌ಗಳ ಪೈಕಿ ಅತ್ಯಂತ ದೊಡ್ಡದು ಹಾಗೂ ತಾಂತ್ರಿಕ ಸವಾಲುಗಳಿದ್ದ ಪೇಲೋಡ್‌ ಎಂದರೆ ಅದು ವಿಇಎಲ್‌ಸಿ. ಐದು ವರ್ಷಗಳಿಂದ ಅಭಿವೃದ್ಧಿ ಹಂತದಲ್ಲಿದ್ದ ಪೇಲೋಡ್‌ ಅನ್ನು ಸ್ವೀಕರಿಸಿಸಲಾಗಿದೆ. ಇನ್ನು ಅದರ ಜೋಡಣೆ, ಪರೀಕ್ಷೆ ಎಲ್ಲವನ್ನೂ ಯಶಸ್ವಿಯಾಗಿ ನೆರವೇರಿಸಿರುವುದಾಗಿ ಇಸ್ರೋ ಹೇಳಿದೆ.

ಇಸ್ರೋ ಅಧ್ಯಕ್ಷರಾದ ಎಸ್‌. ಸೋಮನಾಥ್‌ ಅವರ ಸಮ್ಮುಖದಲ್ಲಿ ಐಐಎ ವಿಇಎಲ್‌ಸಿಯನ್ನು ಹಸ್ತಾಂತರಿಸಿದ್ದು, ಐಐಎನ ಅತಿದೊಡ್ಡ ಕಾರ್ಯಾಚಟುವಟಿಕೆಯಲ್ಲಿ ಪೇಲೋಡ್‌ ನಿರ್ಮಾಣವೂ ಒಂದು ಎಂದು ಸಂಸ್ಥೆ ತಿಳಿಸಿದೆ. ಮಿಷನ್‌ ಆದಿತ್ಯ ಸೂರ್ಯ ಗ್ರಹದ ಅಧ್ಯಯನದ ಮೇಲೆ ಬೆಳಕು ಚೆಲ್ಲುವ ಭಾರತ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next