Advertisement
ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ದಾಖಲಾಗುತ್ತಲೇ ಇದ್ದ ಈ ಬದಲಾವಣೆ, ಈ ಬಾರಿ ಗಂಭೀರವಾಗಿದೆ ಅನ್ನುವುದು ಅಡಿಕೆ ಕೃಷಿಕರ ಅಭಿಪ್ರಾಯ.
Related Articles
Advertisement
ಕಳೆದ ವರ್ಷದಂತೆ ಈ ವರ್ಷವೂ ಫಸಲು ಕಡಿಮೆ ಆಗಿದೆ. ಬೇಸಗೆಯಲ್ಲಿ ಎರಡು ಬಾರಿ, ಮಳೆಗಾಲದಲ್ಲಿ ಒಂದು ಬಾರಿ ಔಷಧ ಸಿಂಪಡಿಸಿದ್ದೇನೆ. ನಾಲ್ಕನೇ ಬಾರಿ ಔಷಧ ಸಿಂಪಡಣೆಗೆ ಸಿದ್ಧತೆ ನಡೆದಿದೆ. ದೊಡ್ಡ ದೊಡ್ಡ ಎಳೆ ಅಡಿಕೆ ಕಾಯಿ ಉದುರುತ್ತಿದೆ ಎನ್ನುತ್ತಾರೆ ಪುತ್ತೂರು ತಾಲೂಕಿನ ಗಿಳಿಯಾಲು ಮಹಾಬಲೇಶ್ವರ ಭಟ್.
ನನ್ನ ತೋಟದಲ್ಲಿ ಕಳೆದ ಬಾರಿಗಿಂತ ಈ ಬಾರಿ ಶೇ.30ರಷ್ಟು ಫಸಲು ನಷ್ಟ ಆಗಬಹುದು. ಬಹುತೇಕವಾಗಿ ಹಿಂಗಾರ ಒಣಗಿದ್ದು, ಎಳೆ ನಳ್ಳಿ ಕೂಡ ಬಿದ್ದಿದೆ. ಮತ್ತೂಂದೆಡೆ ಅಡಿಕೆ ಧಾರಣೆ ಸ್ಥಿರವಾಗಿಲ್ಲ. ನಿರ್ವಹಣೆ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಾರ್ಮಿಕರ ಕೊರತೆಯೂ ಇದೆ. ಹೀಗಾಗಿ ರೋಗಬಾಧೆಯಿಂದ ಕಂಗೆಟ್ಟ ವರಿಗೆ ಈ ಸಮಸ್ಯೆ ದೊಡ್ಡ ಹೊಡೆತ ಮೂಡಿಸಿದೆ ಅನ್ನುತ್ತಾರೆ ಪೆರುವಾಜೆ ಗ್ರಾಮದ ನೀರ್ಕಜೆಯ ಪ್ರಗತಿಪರ ಕೃಷಿಕ ಸುಬ್ರಾಯ ಭಟ್.
ಕೊಳರೋಗ, ಬಿಸಿಲಿನ ಬಾಧೆ ದೀರ್ಘಕಾಲಿಕ ನಷ್ಟ ಉಂಟು ಮಾಡದಿದ್ದರೂ, ಈ ಬಾರಿ ಬೀಸಿದ ಗಾಳಿ ಮಳೆಯಿಂದ ಹಲವು ತೋಟಗಳಲ್ಲಿ ಅಡಿಕೆ ಮರ ನೆಲಕ್ಕುರುಳಿ ಶಾಶ್ವತ ನಷ್ಟ ಉಂಟು ಮಾಡಿದೆ. ಹೆಚ್ಚು ಫಸಲು ತುಂಬಿರುವ ಅಡಿಕೆ ಮರಗಳೇ ಬಿದ್ದಿವೆ. ಅಡಿಕೆ ಸಸಿ ನೆಟ್ಟು ಫಸಲು ಬರಬೇಕಾದರೆ ಮತ್ತೆ ನಾಲ್ಕೈದು ವರ್ಷ ಕಾಯಬೇಕು. ಆ ನಾಲ್ಕು ವರ್ಷಗಳಲ್ಲಿ ಬೆಳೆಗಾರನಿಗೆ ಆದಾಯ ಶೂನ್ಯವಾಗಿರುತ್ತದೆ ಎನ್ನುತ್ತಾರೆ ಕೃಷಿಕ ಹಾಗೂ ಎಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು.
ವಿಪರೀತ ಬಿಸಿಲಿನ ಬೇಗೆಯಿಂದ ಅಡಿಕೆ ತೋಟಕ್ಕೆ ಹಾನಿಯಾಗಿರುವುದು ಈ ವರ್ಷದ ಹೆಚ್ಚುವರಿ ಸಮಸ್ಯೆ. ನನ್ನ ತೋಟಕ್ಕೆ ಟ್ಯಾಂಕರ್ ಮೂಲಕ ನೀರು ಹಾಯಿಸಬೇಕಾದ ಪರಿಸ್ಥಿತಿ ಬಂದದ್ದು ಇದೇ ಮೊದಲು. ಆದರೆ ಸಮಗ್ರ ಕೃಷಿ ಪದ್ಧತಿ, ಸಾವಯುವ ಗೊಬ್ಬರ ಬಳಕೆ, ನಿರ್ವಹಣೆಗೆ ಆದ್ಯತೆ ನೀಡಿದ ಕಾರಣ ನನ್ನ ತೋಟದಲ್ಲಿ ನಷ್ಟದ ಪ್ರಮಾಣ ಕಡಿಮೆ ಅನ್ನುತ್ತಾರೆ ಪ್ರತಿಪರ ಕೃಷಿಕ ಸುರೇಶ್ ಭಟ್ ಬಲ್ನಾಡು.
ಮದ್ದು ಸಿಂಪಡಣೆಗೂ ಮಳೆ ತೊಡಕು ವಿಪರೀತ ಮಳೆಯ ಪರಿಣಾಮ ಕೆಲವು ತೋಟಗಳಲ್ಲಿ ಮೊದಲನೇ ಅವಧಿಯ ಔಷಧ ಸಿಂಪಡಣೆ ಸಾಧ್ಯವಾಗಿಲ್ಲ.
ಕೆಲವೆಡೆ ಎರಡನೇ ಅವಧಿಯ ಮದ್ದು ಸಿಂಪಡಣೆ ಬಾಕಿಯಿದೆ. ಹೀಗಾಗಿ ಕೊಳೆ ನಿಯಂತ್ರಣ ವಿಪರೀತವಾಗಿ ಹಬ್ಬುವ ಸಾಧ್ಯತೆ ಇದ್ದು, ಒಮ್ಮೆ ಮಳೆ ನಿಂತರೆ ಸಾಕು ಎನ್ನುತ್ತಾರೆ ರೈತರು. ತೀವ್ರ ಬಿಸಿಲಿನಿಂದ ಕರಟಿದ್ದ ಹಿಂಗಾರದಿಂದ ಬಸವಳಿದಿದ್ದ ಅಡಿಕೆ ತೋಟದಲ್ಲಿ ಈಗ ಮಳೆ ಕಾರಣದಿಂದ ಕೊಳೆರೋಗ ಕಾಣಿಸಿಕೊಂಡಿರುವ ಬಗ್ಗೆ ಬೆಳೆಗಾರರಿಂದ ಇಲಾಖೆಗೆ ದೂರು ಬರುತ್ತಿದೆ. ನಷ್ಟದ ಅಂದಾಜು ಮಾಡಲು ರೋಗದ ತೀವ್ರತೆಯನ್ನು ಗಮನಿಸಬೇಕು. ಅದಕ್ಕಾಗಿ ಕೆಲವು ದಿನಗಳು ಬೇಕು.
ಸುಹನಾ,
ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ , ಸುಳ್ಯ ಈ ಬಾರಿಯ ಬಿಸಿಲು
42 ಡಿಗ್ರಿ ಸೆಲ್ಸಿಯಸ್
ಅಡಿಕೆ ತೋಟಗಳು 35ರಿಂದ 36 ಡಿಗ್ರಿ ಸೆಲ್ಸಿಯಸ್ ತನಕದ ಉಷ್ಣಾಂಶವನ್ನು ತಾಳಿ ಕೊಳ್ಳುವ ಸಾಮರ್ಥ್ಯ ಹೊಂದಿವೆ. ಈ ಬಾರಿಯ ಬೇಸಗೆಯ ಬಿಸಿ 42 ಡಿಗ್ರಿಸೆಲ್ಸಿಯಸ್ ದಾಟಿತ್ತು. ಇದರಿಂದ ಹಿಂಗಾರ ಕರಟಿ ಹೋಗಿತ್ತು. ಕೆಲವು ಅಡಿಕೆ ಮರಗಳ ಬುಡದಲ್ಲಿ ಎಳೆಯ ನಳ್ಳಿಗಳು ರಾಶಿ ಬಿದ್ದಿತ್ತು. ಕಾಯಿ ಅಡಿಕೆ ಈಗ ಕೊಳೆರೋಗಕ್ಕೆ ತುತ್ತಾಗು ತ್ತಿದೆ ಅನ್ನುವ ಅಭಿಪ್ರಾಯ ಬೆಳೆಗಾರರದ್ದು. -ಕಿರಣ್ ಪ್ರಸಾದ್ ಕುಂಡಡ್ಕ