Advertisement

ಸೂರ್ಯನ ಹೊರಕವಚದಲ್ಲಿ ಸ್ಫೋಟ!

09:32 AM Aug 02, 2022 | Team Udayavani |

ನವದೆಹಲಿ: ನಮ್ಮ ಸೌರಮಂಡಲದ ಪ್ರಮುಖ ನಕ್ಷತ್ರವೆನಿಸಿರುವ ಸೂರ್ಯನ ಈಶಾನ್ಯ ಪಾರ್ಶ್ವದಲ್ಲಿ ಜು. 31ರಂದು ಸ್ಫೋಟ ಸಂಭವಿಸಿದೆ.

Advertisement

“ಯೂನಿವರ್ಸಲ್‌ ಟೈಮ್‌ ಕೊಆರ್ಡಿನೇಷನ್‌’ (ಯುಟಿಸಿ) ಪ್ರಕಾರ, ಜು. 31ರ 23:09 ಗಂಟೆಗೆ (ಭಾರತೀಯ ಕಾಲಮಾನದ ಆ. 1ರ ಬೆಳಗಿನ ಜಾವ 4:30ರ ಸುಮಾರಿಗೆ) ಈ ಸ್ಫೋಟ ಸಂಭವಿಸಿದ್ದು, ಅದನ್ನು ನಾಸಾದ “ಸೋಲಾರ್‌ ಡೈನಮಿಕ್ಸ್‌ ಅಬ್ಸರ್ವೇಟರಿ’ (ಎಸ್‌ಡಿಒ) ಸೆರೆಹಿಡಿದಿದೆ.

ಆದರೆ, ಭೂಮಿಯ ಕಡೆಯಿಂದ ಸೆರೆಹಿಡಿದಿರುವ ಈ ವಿಡಿಯೋದಲ್ಲಿ ಸ್ಫೋಟದ ಕೆನ್ನಾಲಿಗೆಗಳು ಸೂರ್ಯನ ಮೇಲ್ಮೈ ನಿಂದ ಹೊರಚಾಚಿರುವ ದೃಶ್ಯಗಳಿದ್ದು, ಅವು ಅಸ್ಪಷ್ಟವಾಗಿವೆ. ಇನ್ನು, ಸ್ಫೋಟಕ್ಕೆ ಕಾರಣವೇನು ಎಂಬ ವಿಚಾರವೂ ಸ್ಪಷ್ಟವಾಗಿಲ್ಲ.

ಆದರೆ, ಸ್ಫೋಟದಿಂದ ಹೊರಬಿದ್ದ ಕಿಡಿಗಳು ಬಾಹ್ಯಾಕಾಶದಲ್ಲಿ ಹಾರಿ ಹೋಗುತ್ತಿರುವುದನ್ನು ಅಬ್ಸರ್ವೇಟರಿ ಸೆರೆಹಿಡಿದಿದೆ ಎಂದು ನಾಸಾ ಹೇಳಿದೆ.

ಇತ್ತೀಚೆಗೆ, ಸೂರ್ಯನ ಜ್ವಾಲೆಗಳು ಹೆಚ್ಚೆಚ್ಚು ಉದ್ದುದ್ದವಾಗಿ ಕಾಣಿಸಿಕೊಳ್ಳುತ್ತಿದೆ. ಕಳೆದ 11 ವರ್ಷಗಳಿಂದ ಹೀಗಾಗುತ್ತಿದ್ದು, ಈಗ ಅದರ ಮೇಲ್ಮೈ ಮೇಲೆ ಸ್ಫೋಟವಾಗಿರುವುದು ಅಧ್ಯಯನದ ಬೇರೊಂದು ಆಯಾಮವನ್ನು ವಿಜ್ಞಾನಿಗಳ ಮುಂದೆ ತೆರೆದಿಟ್ಟಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next