Advertisement

ತುಳು ನಾಡಿನ ಅತಿ ಕಿರಿಯ ನಾಗದರ್ಶನ ಪಾತ್ರಿ “ಸಂಪ್ರೀತ”

07:11 PM Feb 19, 2021 | Team Udayavani |

ಈಗೀಗ ಜನರು ತಮ್ಮ ಮೂಲ ಸಂಸ್ಕೃತಿಯನ್ನು ದೂರಕ್ಕೆ ಸರಿಸಿ ಪಾಶ್ಚಿಮಾತ್ಯ ಸಂಸ್ಕೃತಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ, ಕಕ್ಕುಂಜೆಯ ಈ ಹುಡುಗ ತನ್ನ ತಂದೆಯ ನಾಗಾರಾಧನಾ ಪರಂಪರೆಯನ್ನು ಅನುಸರಿಸುತ್ತಿದ್ದಾನೆ.

Advertisement

ಹೌದು,  ಫೆಬ್ರವರಿ 18, 2006 ರಂದು ಜನಿಸಿದ ಸಂಪ್ರೀತ್ ಆಚಾರ್ಯರು ತಮ್ಮ ತಂದೆ ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ಅವರೊಂದಿಗೆ ನಾಗಮಂಡಲ ಮತ್ತು ನಾಗದರ್ಶನಗಳಲ್ಲಿ ನಾಗಪಾತ್ರಿಗಳಾಗಿ ಪ್ರದರ್ಶನ ನೀಡುವುದರ ಮೂಲಕ ತುಳುನಾಡಿನ ಅತ್ಯಂತ ಕಿರಿಯ  ನಾಗ ಪಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

“ಕೆಲವರು ನೃತ್ಯ ಅಥವಾ ಹಾಡನ್ನು ಇಷ್ಟಪಡುವಂತೆಯೇ ಇದು ಒಂದು ನನ್ನ ಹವ್ಯಾಸ” ಎಂದು ಹೇಳುತ್ತಾರೆ ಸಂಪ್ರೀತ್.

ನಾಗರಾಧಾನೆ, ನಾಗ ಮಂಡಲ, ನಾಗ ದರ್ಶನಗಳು ಕರಾವಳಿ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುವ ಆಚರಣೆಯಾಗಿವೆ. ಕರಾವಳಿ ಕರ್ನಾಟಕದಲ್ಲಿ ನಾಗರ ಹಾವುಗಳನ್ನು ಪೂಜಿಸುವ ಸಂಸ್ಕೃತಿಯಿದೆ. ನಾಗರ ಹಾವನ್ನು ಹಿಂದೂ ಧರ್ಮದಲ್ಲಿ ಸತ್ಯ ದೇವತೆ ಎಂದು ಕೂಡ ಕರೆಯುವ ವಾಡಿಕೆ ಇದೆ. ನಾಗ ದೇವರಿಗೆ ಸಿಂಗಾರ ಅಥವಾ ಹಿಂಗಾರ ಹೂವು ಇಷ್ಟದ ಹೂವು. ದರ್ಶನದ ಸಂದರ್ಭದಲ್ಲಿ ನಾಗಪತ್ರಿ ಸಂಭಾವ್ಯವಾಗಿ ಸಿಂಗಾರ ಅಥವಾ ಹಿಂಗಾರ ಹೂವನ್ನು ಕೈಯಲ್ಲಿ ಹಿಡಿದುಕೊಳ್ಳುವುದರ ಮೂಲಕ  ನಾಗ ದೇವರನ್ನು ಆಹ್ವಾನಿಸಿಕೊಳ್ಳುತ್ತಾರೆ. ತದನಂತರ ಸಾನಿಧ್ಯದಲ್ಲಿ ಭಕ್ತರ ಸಮಸ್ಯೆಗಳಿಗೆ ಪರಿಹಾರಾರ್ಥದಲ್ಲಿ ನುಡಿ ನೀಡುವುದು ನಾಗ ದರ್ಶನದ ಪ್ರಮುಖ ಪದ್ಧತಿ.

Advertisement

ನಾಗಾರಾಧನೆಯಲ್ಲಿ ಹಲವು ವಿಧಗಳಿವೆ ಏಕ ಪವಿತ್ರ ನಾಗ ಮಂಡಲೋತ್ಸವ, ಅಷ್ಟ ಪವಿತ್ರ ನಾಗಮಂಡಲೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವ, ಢಕ್ಕೆಬಲಿ ಮತ್ತು ಇನ್ನೂ ಬಗೆ ಇರುತ್ತದೆ, ನಾಗ ಮಂಡಲಗಳು ಸುಮಾರು ಮೂರು ಗಂಟೆಗಳ ಕಾಲ ನಡೆಯುತ್ತವೆ ಮತ್ತು ಕೆಲವೊಮ್ಮೆ ಎಂಟು ಗಂಟೆಗಳವರೆಗೆ ಹೋಗುತ್ತವೆ” ಎನ್ನುತ್ತಾರೆ ವಾಸುದೇವ ಆಚಾರ್ಯರು.

“ನನ್ನ ಹೆತ್ತವರು ಬಾಲ್ಯದಿಂದಲೂ ಇದರಲ್ಲಿ ಆಸಕ್ತಿಯನ್ನು ಬೆಳೆಸಿದರು. ನಾಗಮಂಡಲದಲ್ಲಿ ನನ್ನ ತಂದೆ ಪ್ರದರ್ಶನವನ್ನು ನೋಡುವುದರಿಂದ, ಹಾಗೂ ಅವರು ಜನರಿಂದ ಪಡೆದ ಗೌರವವೇ ನನಗೆ ಪ್ರೇರಣೆ ನೀಡಿತು,” ಎಂದು ಸುಂಪ್ರೀತ್ ಹೇಳುತ್ತಾರೆ.

“ಮೊದಲು ನಾನು ನಾಗಮಂಡಲದಲ್ಲಿ ನನ್ನ ತಂದೆಗೆ ದರ್ಶನ ಆಹ್ವಾನ ಸಂದರ್ಭದಲ್ಲಿ ಸಿಂಗಾರ ಹೂವನ್ನು ನೀಡುತ್ತಿದ್ದೆ. ಒಂದೊಮ್ಮೆ ನಾಗ ದೇವರು ನನ್ನನ್ನು ತನ್ನ ಆಕರ್ಷಣೆ ಮಾಡಿಕೊಂಡರು. ಇದು ಏಕೆ ಸಂಭವಿಸಿತು ಎಂದು ಕೇಳಿದಾಗ, ನಾನು ದೇವರಿಗೆ ಹೂವುಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತವಲ್ಲ. ದರ್ಶನವೂ ನೀಡಬೇಕಾಗಿದೆ ಎಂದು ದೇವರ ಸೂಚನೆ ಸಿಕ್ಕಿತು.”

ದರ್ಶನದಲ್ಲಿ ಕಿರಿಯ ವ್ಯಕ್ತಿಯನ್ನು ದೇವರು ಆಕರ್ಷಿಸಿಕೊಂಡಿರುವುದು ಇದೇ ಮೊದಲಲ್ಲ. ಮತ್ತು ಈ ಹಿಂದೆ ಹದಿನೆಂಟು ವರ್ಷದ ಒಬ್ಬರು ನಾಗದರ್ಶನ ಪ್ರದರ್ಶನ ನೀಡಿದ ಉದಾಹರಣೆಗಳಿವೆ ಎಂದು ವಾಸುದೇವ ಆಚಾರ್ಯರು ಹೇಳುತ್ತಾರೆ.  1990ರಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ವಾಸುದೇವ ಆಚಾರ್ಯರಿಗೆ “ನಾಗಸಂಪ್ರೀತ” ಪ್ರಶಸ್ತಿ ನೀಡಲಾಯಿತು ಮತ್ತು ಅಲ್ಲಿಯೇ ಸಂಪ್ರೀತ್ ಅವರ ಹೆಸರನ್ನು ನಿಶ್ಚಯಿಸಿಕೊಳ್ಳಲಾಯಿತು.

ಇನ್ನು, ತನ್ನ ವಯಸ್ಸಿನ ಇತರ ಮಕ್ಕಳಂತೆ, ಸಂಪ್ರೀತ್ ಶಾಲೆಗೆ ಹೋಗುತ್ತಾರೆ. ಒಂಬತ್ತನೇ ತರಗತಿ ವಿದ್ಯಾರ್ಥಿ, ಸಂಪ್ರೀತ್ ಉಡುಪಿಯ ನಿತ್ತೂರಿನಲ್ಲಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.    ಉದ್ದನೆಯ ಕೂದಲನ್ನು ಹೊಂದಿದ್ದಕ್ಕಾಗಿ ಶಾಲೆಯಲ್ಲಿ ಹೇಗೆ ಕೀಟಲೆ ಮಾಡುತ್ತಿದ್ದರು ಎಂದು ಸಂಪ್ರೀತ್ ವಿವರಿಸುತ್ತಾರೆ. “ಮಕ್ಕಳು ನನ್ನನ್ನು ಗೇಲಿ ಮಾಡುತ್ತಾರೆ, ಹುಡುಗಿಯರ ವಾಶ್ ರೂಮ್ ಅನ್ನು ಬಳಸಲು ನನಗೆ ಹೇಳಿ ತಮಾಷೆ ಮಾಡುತ್ತಾರೆ. ಆದರೆ ಅದನ್ನು ನನಗೆ ತಡೆಯಲು ಸಾಧ್ಯವಾಗುವುದಿಲ್ಲ. ನಾನು ಪರಂಪರೆಯನ್ನು ಅನುಸರಿಸಯತ್ತೇನೆ” ಎಂದು ಸಂಪ್ರೀತ್ ತಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ.

“ನಾಗ ದರ್ಶನವು ಸ್ವಾಧೀನ ಪಡಿಸಿಕೊಂಡ ಕೌಶಲ್ಯವಲ್ಲ, ದೇವರ ಅನುಗ್ರಹದಿಂದ ಮಾತ್ರ ನಾಗ ದರ್ಶನವನ್ನು ನಿರ್ವಹಿಸಬಹುದು”, ಸುಂಪ್ರೀತ್ ಇದುವರೆಗೆ 200 ಕ್ಕೂ ಹೆಚ್ಚು ನಾಗ ದರ್ಶನಗಳಲ್ಲಿ ಮತ್ತು ಸುಮಾರು ನಾಲ್ಕು ನಾಗ ಮಂಡಲದಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಪ್ರದರ್ಶನ ನೀಡಿದ್ದಾರೆ ಎಂದು ವಾಸುದೇವ ಆಚಾರ್ಯ ಅಭಿಪ್ರಾಯ ಪಡುತ್ತಾರೆ.

“ನನ್ನಲ್ಲಿ ಹಲವು ಬದಲಾವಣೆಗಳಾಗಿವೆ. ದೇವರ ಅನುಗ್ರಹದಿಂದ  ಸಮಾಜದಲ್ಲಿ ನಾನು ಸಾಕಷ್ಟು ಗೌರವವನ್ನು ಪಡೆದಿದ್ದೇನೆ.. ಹಾಗೂ ಶಾಲೆಯಲ್ಲಿ ಸಹಪಾಠಿಗಳು ಮತ್ತು ಶಿಕ್ಷಕರು ಬಹಳ ಸಹಕಾರಿಯಾಗಿದ್ದಾರೆ. ದರ್ಶನಕ್ಕಾಗಿ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ವಾರಾಂತ್ಯದಲ್ಲಿ ಮಾತ್ರ ದರ್ಶನಗಳಲ್ಲಿ ಭಾಗವಹಿಸುತ್ತೇನೆ ಅಂತಾರೆ ಸಂಪ್ರೀತ್.

“ನನ್ನ ಮಗನ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆ ಇದೆ. ನಾನು ಅವನನ್ನು ಕೇಳುವ ಏಕೈಕ ವಿಷಯವೆಂದರೆ ಹೇಗೆ ಕೊಡುವುದು ಮತ್ತು ಗೌರವಿಸುವುದು, ಸಮಾಜದಲ್ಲಿ ಗೌರವವನ್ನು ಗಳಿಸುವುದು ಮತ್ತು ನೀಡುವುದನ್ನು ಕಲಿ ಎಂದು ನಾನು ಅವನಿಗೆ ಹೇಳಲಿಚ್ಛಿಸುತ್ತೇನೆ ಎನ್ನುತ್ತಾರೆ ಸಂಪ್ರೀತ್ ತಾಯಿ ಸುಮನ ಆಚಾರ್ಯ.

ಇದಲ್ಲದೆ, ಸುಂಪ್ರೀತ್  ಯಕ್ಷಗಾನ ಕಲಾವಿದ ಕೂ ಹೌದು. ಸದ್ಯಕ್ಕೆ ಶಾಲಾ ಕಾರ್ಯಕ್ರಮಗಳಲ್ಲಿ ಮಾತ್ರ ಪ್ರದರ್ಶನ ನೀಡುತ್ತಾರೆ. ಸಂಪ್ರೀತ್ ಗೆ ಆಧ್ಯಾತ್ಮಿಕ ಒಲವು ಹೆಚ್ಚಿದ್ದು, ತನ್ನ ತಂದೆಯಿಂದ ಜ್ಯೋತಿಷ್ಯವನ್ನು ಕಲಿಯಬೇಕೆಂಬ ಆಸೆ ಹೊಂದಿದ್ದಾರೆ ಮತ್ತು ವೃತ್ತಿಯಲ್ಲಿ ಆಯುರ್ವೇದ ವೈದ್ಯನಾಗಬೇಕೆಂದು ಸಂಪ್ರೀತ್ ಕನಸು ಕಂಡಿದ್ದಾರೆ.

ಈ ಎಳೆಯ ವಯಸ್ಸಿನಲ್ಲೇ ಇಷ್ಟು ಅಪಾರ ಪ್ರತಿಭೆಯನ್ನು ಹೊಂದಿದ ಸಂಪ್ರೀತ್, ನಾಳೆಗಳಲ್ಲಿ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ನಾವು ಹರಸೋಣ.

 

Advertisement

Udayavani is now on Telegram. Click here to join our channel and stay updated with the latest news.

Next