Advertisement
ಈ ಅವಧಿಯಲ್ಲಿ ತೆರೆದ ಪ್ರದೇಶಗಳಲ್ಲಿ ಮಕ್ಕಳು ಸ್ನಾನ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಮಳೆ ನೋಡಲು, ಒಗೆದು ಒಣಗಿಸಲು ಹಾಕಲಾದ ಬಟ್ಟೆ ತೆರವುಗೊಳಿಸುವ ಇತ್ಯಾದಿ ಕಾರಣಕ್ಕೆ ಈ ಅವಧಿಯಲ್ಲಿ ಮನೆ ತಾರಸಿಗೆ ತೆರಳಕೂಡದು. ಮಳೆ ತಾಗುವ ಪ್ರದೇಶದಲ್ಲಿರುವ ಸಾಕು ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು.
ಬಿರುಸಿನ ಸಿಡಿಲು ವ್ಯಕ್ತಿಗೆ ಬಡಿದರೆ ಜೀವಹಾನಿ ಯಾ ದೃಷ್ಟಿ ಕಳೆದು ಕೊಳ್ಳಬಹುದು. ಹೃದಯಾಘಾತ ಸಂಭವಿಸಬಹುದು. ಈ ಬಗ್ಗೆ ಎಚ್ಚರಿಕೆ ಬೇಕು. ಸಿಡಿಲ ಆಘಾತ ಸಂಭವಿಸಿದಾಗ ವ್ಯಕ್ತಿಯ ಶರೀರದಲ್ಲಿ ವಿದ್ಯುತ್ ಪ್ರವಾಹ ಇರುವುದಿಲ್ಲ. ಆದಕಾರಣ ಪ್ರಥಮ ಶುಶ್ರೂಷೆ ನಡೆಸುವಲ್ಲಿ ಉಳಿದವರು ಹಿಂದೆ-ಮುಂದೆ ನೋಡಬಾರದು. ಸಿಡಿಲು ಬಡಿತ ಸಂಭವಿಸಿ 30 ಸೆಕೆಂಡ್ ವರೆಗೆ ವ್ಯಕ್ತಿಯನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು.