ವಿವಿಧೆಡೆ ತಂಪೆರೆದ ಬೇಸಗೆ ಮಳೆ
Team Udayavani, Apr 13, 2020, 6:46 AM IST
ಉಡುಪಿ/ಕಾರ್ಕಳ/ಹೆಬ್ರಿ/ಪಳ್ಳಿ/ಶಿರ್ವ: ಬೇಸಗೆ ಧಗೆ ತೀವ್ರವಾಗಿರು ವಂತೆಯೇ, ಜಿಲ್ಲೆಯ ಕೆಲವು ಭಾಗಗಳಲ್ಲಿ ರವಿವಾರ ಸುರಿದ ಮಳೆ ತಂಪೆರೆದಿದೆ.
ಕಾರ್ಕಳ ತಾಲೂಕಿನಲ್ಲಿ ರವಿವಾರ ಗುಡುಗು, ಗಾಳಿ, ಮಿಂಚು ಸಹಿತ ಆಲಿಕಲ್ಲು ಮಳೆಯಾಗಿದೆ. ಮಧ್ಯಾಹ್ನ 2.45ರ ವೇಳೆ ಗುಡುಗು ಮಳೆ ಪ್ರಾರಂಭವಾಗಿ ಸುಮಾರು 3.15ರ ತನಕ ಸುರಿಯಿತು. ಕಾರ್ಕಳ ನಗರ, ಕುಕ್ಕುಂದೂರು, ಸಾಣೂರು, ಬಜಗೋಳಿ, ದುರ್ಗ, ಜೋಡುರಸ್ತೆ, ಜೋಡುಕಟ್ಟೆ, ಇರ್ವತ್ತೂರು ಭಾಗದಲ್ಲಿ ಅಧಿಕ ಮಳೆಯಾಗಿದೆ.
ಹೆಬ್ರಿ ತಾಲೂಕಿನ ಹೆಬ್ರಿ ಬೇಳಂಜೆ, ಮುದ್ರಾಡಿ, ಕುಚ್ಚಾರು, ಕಬ್ಬಿನಾಲೆ ಮುನಿಯಾಲು, ಶಿವಪುರ ಪಡುಕುಡೂರು, ಖಜಾನೆ ಎಳ್ಳಾರೆ ಸೇರಿದಂತೆ ವಿವಿಧೆಡೆ ರವಿವಾರ ಸಂಜೆ 4 ಗಂಟೆಯಿಂದ ಗುಡುಗು ಸಿಡಿಲು ಗಾಳಿ ಸಹಿತ ಮಳೆಯಾಗಿದೆ.
ಗಾಳಿಗೆ ಶಿವಪುರ ಒಳಬೈಲು ಕೃಷ್ಣ ನಾಯ್ಕ ಅವರ ಮನೆ ಮೇಲೆ ಮರವೊಂದು ಬಿದ್ದ ಪರಿಣಾಮ ಹಾನಿಯಾಗಿದೆ. ಶಿವಪುರ ಮುಳ್ಳುಗುಡ್ಡೆ ಸರಕಾರಿ ಅಂಗನವಾಡಿ ಶಾಲೆಯ ಹೆಂಚು ಹಾರಿಹೋಗಿದ್ದು ನಷ್ಟ ಸಂಭವಿಸಿದೆ. ಬೇಳಂಜೆ ಹಾಗೂ ಕಬ್ಬಿನಾಲೆ ಪರಿಸರದಲ್ಲಿ ಆಲಿಕಲ್ಲು ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 169: ಬಿಂಬವೂ ನಿತ್ಯ ಪ್ರತಿಬಿಂಬವೂ ನಿತ್ಯ
Kaup Hosa Marigudi: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ
Republic Day: ಆರ್ಥಿಕ ಸಮಾನತೆಯ ಗುರಿ ಪಾಲಿಸೋಣ: ಕಂದಾಯ ಸಚಿವ
Katapadi: ಸ್ಕೂಟಿಗೆ ಬೈಕ್ ಢಿಕ್ಕಿ; ಮಗು, ದಂಪತಿಗೆ ಗಾಯ
Udupi; ಗೀತಾರ್ಥ ಚಿಂತನೆ 168: ಮೌಲ್ಯ-ವ್ಯವಸ್ಥೆ, ಕಾಯಿದೆ-ಕಾನೂನು ಬೇರೆ ಬೇರೆ