Advertisement
ಚಳಿಗಾಲ ಮತ್ತು ಮಳೆಗಾಲದಲ್ಲಿ ಮಕ್ಕಳನ್ನು ಬೆಚ್ಚಗಿಡಲು ಸ್ವೆಟರುಗಳು, ಟೋಪಿಗಳನ್ನು ಹೇಗೆ ಬಳಸುತ್ತೇವೆಯೋ ಹಾಗೆಯೇ ಬೇಸಿಗೆಯಲ್ಲಿ ಬಳಸುವ ಮಕ್ಕಳ ದಿರಿಸುಗಳು ಮಕ್ಕಳನ್ನು ಆರಾಮದಾಯಕವಾಗಿರಿಸುವಲ್ಲಿ ಸಹಾಯಕವಾಗುವಂತಿರಬೇಕು. ತಾಯಂದಿರು ಮಕ್ಕಳ ಬಟ್ಟೆಗಳ ಬಗೆಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ.
ಫ್ರಾಕುಗಳು: ಪುಟಾಣಿ ಹೆಣ್ಣುಮಕ್ಕಳಿಗೆ ಬೇಸಿಗೆಗೆ ಸೂಕ್ತವೆನಿಸುವ ದಿರಿಸುಗಳಲ್ಲಿ ಫ್ರಾಕುಗಳು ಅದರಲ್ಲಿಯೂ ಕಾಟನ್ ಫ್ರಾಕುಗಳು ಮೊದಲನೆಯದು. ಕಾಟನ್ ಬಟ್ಟೆಗಳು ಸೆಕೆಯೆನಿಸುವುದಿಲ್ಲವಾದ್ದರಿಂದ ಕಾಟನ್ ಫ್ರಾಕುಗಳಲ್ಲಿ ಮಕ್ಕಳು ಆರಾಮದಾಯಕ ಅನುಭವವನ್ನು ಪಡೆಯುತ್ತಾರೆ. ಚಿಕ್ಕ ತೋಳುಗಳುಳ್ಳ ಅಥವಾ ಸ್ಲಿವ್ಲ್ ಸ್ ಫ್ರಾಕುಗಳು ಹೆಚ್ಚು ಸೂಕ್ತವೆನಿಸುತ್ತವೆ. ಟೀಶರ್ಟುಗಳು: ಬೇರೆ ಬಗೆಯ ಶರ್ಟುಗಳಿಗಿಂತ ಮಕ್ಕಳಿಗೆ ಟೀಶರ್ಟುಗಳು ಬೇಸಿಗೆಗೆ ಸೂಕ್ತವಾದುದು. ಗಾಢ ಬಣ್ಣಗಳನ್ನು ಆಯ್ದುಕೊಳ್ಳದಿರುವುದು ಹೆಚ್ಚು ಸೂಕ್ತವಾದುದು. ಟೀಶರ್ಟುಗಳು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳೂ ಕೂಡ ಧರಿಸಬಹುದಾದ್ದರಿಂದ ಬಗೆ ಬಗೆಯ ಬಾಟಮ…ವೇರುಗಳೊಂದಿಗೆ ಧರಿಸಿಕೊಳ್ಳಬಹುದು. ಸ್ಲಿವ್ಲ್ ಸ್ ಟೀಶರ್ಟುಗಳು ಬೇಸಿಗೆಗೆ ಹೆಚ್ಚು ಸೂಕ್ತವಾದುದು.
Related Articles
Advertisement
ಶಿಶುಗಳಿಗಾದರೆ ಕಾಟನ್ ಬಟ್ಟೆಗಳಿಂದ ತಯಾರಿಸಲಾದ ತೆಳುವಾದ ಜಬಲಾಗಳು ಸೂಕ್ತವಾದುದು. ಬೇಸಿಗೆಯಲ್ಲಿ ನಿತ್ಯ ಬಳಕೆಯಲ್ಲಿ ಆದಷ್ಟು ನ್ಯಾಪಿಗಳ ಬಳಕೆಯನ್ನು ನಿಯಮಿತಗೊಳಿಸಿದರೆ ಒಳಿತು. ಬೆವರುವಿಕೆಯಿಂದ ಶಿಶುಗಳ ಕಾಲಿನ ಸಂದಿಗಳಲ್ಲಿ ರಾಷಸ್ ಆಗುವ ಸಾಧ್ಯತೆಯಿರುತ್ತದೆ. ಶಿಶುಗಳಿಗೆ ಸ್ನಾನವಾದ ನಂತರ ಚೆನ್ನಾಗಿ ಪೌಡರನ್ನು ಹಾಕುವುದು ಒಳಿತಾಗಿದೆ. ಚಿಕ್ಕ ಶಾಟ್ಸುìಗಳನ್ನು ಬಳಸಬಹುದು. ಬೇಬಿ ಸೂಟುಗಳನ್ನು ಬಳಸಿದಾಗ ಶಿಶುಗಳು ಆರಾಮದಾಯಕ ಅನುಭವವನ್ನು ಅನುಭವಿಸುತ್ತವೆ.
ಇನ್ನು ಬೇಸಿಗೆಯಲ್ಲಿ ಹೊರಗೆ ಹೋಗುವಾಗ ಹಗುರವಾದ ಬಟ್ಟೆಗಳಿಂದ ತಯಾರಿ ಸಲಾದ ಜಂಪ್ ಸೂಟ…ಗಳನ್ನೇ ಆಯ್ಕೆ ಮಾಡಿ ಮಕ್ಕಳಿಗೆ ಹಾಕುವುದು ಒಳ್ಳೆಯದು. ಅವುಗಳಲ್ಲೂ ಆದಷ್ಟು ಶಾರ್ಟ್ ಜಂಪ್ ಸೂಟುಗಳು ಸೂಕ್ತವೆನಿಸುತ್ತವೆ. ಮಾರುಕಟ್ಟೆಯಲ್ಲಿ ಬಹಳ ವಿಧಗಳ ಫ್ಯಾಷನೇಬಲ… ಫ್ರಾಕುಗಳು ಲಭ್ಯವಿದೆ. ಬಗೆಬಗೆಯ ಬಣ್ಣಗಳಲ್ಲೂ ಸಿಗುತ್ತವಾದ್ದರಿಂದಲೂ ಆಯ್ಕೆಗೆ ವಿಪುಲ ಅವಕಾಶವಿರುವುದರಿಂ ದಲೂ ಹೆಣ್ಣುಮಕ್ಕಳಿಗೆ ಒಪ್ಪುವಂತಹ ಬಣ್ಣದ ಫ್ರಾಕುಗಳನ್ನು ಖರೀದಿಸಿ ತೊಡಿಸಬಹುದಾಗಿದೆ. ಪ್ಯಾಂಟ…-ಶರ್ಟುಗಳಿಗಿಂತ ಹೆಣ್ಣುಮಕ್ಕಳಿಗೆ ಸಡಿಲವಾಗಿರುವ ಮ್ಯಾಕ್ಸಿ ಮತ್ತು ಮಿನಿ ಸ್ಕರ್ಟುಗಳನ್ನು ಬಳಸಬಹುದು. ಗಂಡುಮಕ್ಕಳಿಗಾದರೆ ಶರ್ಟುಗಳು ಮತ್ತು ಸ್ಲಿವ್ಲ್ ಸ್ ಶರ್ಟುಗಳು ಆರಾಮದಾಯಕವೆನಿಸುತ್ತವೆ. ಇವುಗಳೂ ಸಹ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹಾಗೂ ಬಣ್ಣಗಳಲ್ಲಿ ದೊರೆಯುತ್ತವೆ.
ಬೇಸಿಗೆಯಲ್ಲಿ ನಿಮ್ಮ ಮಕ್ಕಳನ್ನು ತಯಾರುಗೊಳಿಸುವಲ್ಲಿ ಸಹಾಯಕವಾಗಬಲ್ಲ ಅಂಶಗಳು:. ಆದಷ್ಟು ಸಡಿಲವಾದ ದಿರಿಸುಗಳನ್ನೇ ಮಕ್ಕಳಿಗೆ ಹಾಕುವುದು. . ಹೆಣ್ಣುಮಕ್ಕಳಿಗೆ ಭಾರವಾದ ಆಭರಣಗಳನ್ನು ಮತ್ತು ಅಗತ್ಯಕ್ಕಿಂತ ಹೆಚ್ಚು ಆಭರಣಗಳನ್ನು ತೊಡಿಸದಿರುವುದು. . ಸರಳವಾದ ಮೇಕಪ್ ಮಾಡುವುದು. . ಜರ್ಕಿನ್, ಕೋಟುಗಳು, ಶ್ರಗ್ಗುಗಳ ಬಳಕೆಯನ್ನು ಆದಷ್ಟು ಕಡಿತಗೊಳಿಸುವುದು. . ಗಾಢಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡದೆ ತೆಳುವಾದ ಬಣ್ಣಗಳ ಬಟ್ಟೆಗಳನ್ನು ಆಯ್ದುಕೊಂಡು ಬಳಸುವುದು. . ಹೆಣ್ಣುಮಕ್ಕಳಿಗಾದರೆ ತಲೆಕೂದಲನ್ನು ಪೋನಿ ಕಟ್ಟುವುದು ಅಥವಾ ತುರುಬುಗಳನ್ನು ಹಾಕುವುದರಿಂದ ಹೆಚ್ಚು ಸೆಕೆಯೆನಿಸುವುದಿಲ್ಲ. .ಗಂಡುಮಕ್ಕಳಿಗಾದರೆ ಬೇಸಿಗೆಯಲ್ಲಿ ಕೂದಲುಗಳನ್ನು ಕಾಲಕಾಲಕ್ಕೆ ಆದಷ್ಟು ಚಿಕ್ಕದಾಗಿ ಕತ್ತರಿಸುವುದರ ಮೂಲಕ ಕೂದಲುಗಳ ಸೂಕ್ತ ನಿರ್ವಹಣೆ ಮಾಡುವುದು. .ಆದಷ್ಟು ಕಾಟನ್, ಮಲ…, ಸ್ಪನ್‌ಗಳಂತಹ ಮೆತ್ತಗಿನ ಬಟ್ಟೆಗಳಿಂದ ತಯಾರಿಸಿದ ಬಟ್ಟೆಗಳನ್ನೇ ಬಳಸುವುದು. .ಟೈಟ್ ಜೀನ್ಸ್ ಅಥವ ಜೆಗ್ಗಿಂಗ್ಸ್ಗಳನ್ನು ಬಳಸುವುದರ ಬದಲು ಕಾಟನ್ ಲೆಗ್ಗಿಂಗ್ಸ್ ಅಥವ ಪೈಜಾಮ ಪ್ಯಾಂಟುಗಳಿಗೆ ಆದ್ಯತೆಯನ್ನು ನೀಡುವುದು. .ಹೆಣ್ಣುಮಕ್ಕಳಿಗಾದರೆ ಕೂದಲುಗಳು ಮುಖಕ್ಕೆ ಬಾರದಂತೆ ಹೇರ್‌ಬ್ಯಾಂಡುಗಳನ್ನು ಹಾಕುವುದು. .ಬೇಸಿಗೆಗೆ ಸೂಕ್ತವೆನಿಸುವ ಚಪ್ಪಲಿಗಳನ್ನೇ ಬಳಸುವುದು. ಶೂಗಳು ಮತ್ತು ಸಾಕ್ಸುಗಳ ಬಳಕೆಯನ್ನು ದೂರವಿರಿಸುವುದು. .ಬೇಕೆನಿಸಿದಲ್ಲಿ ಕ್ಯಾನ್ವಾಸ್ ಅಥವಾ ಡೆನಿಮ… ಶೂಗಳನ್ನು ಬಳಸಬಹುದು. . ಕಾಲರುಗಳಿಲ್ಲದ ಮತ್ತು ಹೈ-ನೆಕ್ ಇಲ್ಲದೇ ಇರುವಂಥ ಬಟ್ಟೆಗಳನ್ನು ಬಳಸದಿರುವುದು. ತೀರಪ್ರದೇಶಗಳಲ್ಲಿ ಅತಿ ಹೆಚ್ಚಿನ ಸೆಕೆ ಇರುವುದರಿಂದ ಮಕ್ಕಳ ದಿರಿಸುಗಳ ಬಗೆಗೆ ವಿಶೇಷ ಕಾಳಜಿ ಮತ್ತು ಆಸಕ್ತಿಯನ್ನು ತೆಗೆದುಕೊಳ್ಳುವುದು ಅತ್ಯಂತ ಆವಶ್ಯಕವಾದುದಾಗಿದೆ. ಬೇಸಿಗೆ ದಿರಿಸುಗಳು ಮಾರುಕಟ್ಟೆಯಲ್ಲಿ ವಿವಿಧ ಬಗೆಗಳಲ್ಲಿ ದೊರೆಯುವುದರಿಂದ ನೀವೂ ಕೂಡ ಬರುತ್ತಿರುವ ಸಮ್ಮರ್‌ಗೆ ಉತ್ತಮ ರೀತಿಯ ತಯಾರಿಯನ್ನು ಮಾಡಿಕೊಳ್ಳಿ. ಪ್ರಭಾ ಭಟ್