Advertisement

“ತೋತಾಪುರಿ”ಮೇಲೆ ಸುಮನ ಗಮನ!

02:57 PM Sep 28, 2022 | Team Udayavani |

ಸುಮನ್‌ ರಂಗನಾಥ್‌- ಕನ್ನಡ ಚಿತ್ರರಂಗದ ಚಿರಯೌವ್ವನೆ. ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರ ಮನಸ್ಸು ಗೆದ್ದಿರುವ ಸುಮನ್‌ ಈಗ ಚಿತ್ರವೊಂದರ ಮೇಲೆ ಬಹುನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ.

Advertisement

ಅದು “ತೋತಾಪುರಿ’. ಜಗ್ಗೇಶ್‌ ನಾಯಕರಾಗಿರುವ “ತೋತಾಪುರಿ’ ಚಿತ್ರ ಸೆ.30ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರದ ಮೂಲಕ ಎಲ್ಲರ ಗಮನ ಸೆಳೆದಿರುವ “ತೋತಾಪುರಿ’ ಚಿತ್ರದ ಮೇಲೆ ಸುಮನ್‌ ರಂಗನಾಥ್‌ ನಿರೀಕ್ಷೆ ಇಟ್ಟಿದ್ದಾರೆ. ವಿಜಯ್‌ ಪ್ರಸಾದ್‌ ಸಿನಿಮಾಗಳ ಖಾಯಂ ಕಲಾವಿದೆ ಯಾಗಿರುವ ಸುಮನ್‌ಗೆ “ತೋತಾಪುರಿ’ಯಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ.  ಈಗಾಗಲೇ ಟ್ರೇಲರ್‌ನಲ್ಲಿ ಅವರ ಪಾತ್ರ ಗಮನ ಸೆಳೆದಿದ್ದು, ನಿರೀಕ್ಷೆಯೂ ಇದೆ.

ಚಿತ್ರದ ಬಗ್ಗೆ ಮಾತನಾಡುವ ಸುಮನ್‌, “ಈ ಚಿತ್ರದಲ್ಲಿ ನಾನು ಸಿಸ್ಟರ್‌ ವಿಕ್ಟೋರಿಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅದೂ ಒಂದು. ಸಾಕಷ್ಟು ಏರಿಳಿತಗಳೊಂದಿಗೆ ಸಾಗುವ ಈ ಪಾತ್ರ ಪ್ರೇಕ್ಷಕರಿಗೆ ಮಜಾ ಕೊಡುವುದರಲ್ಲಿ ಸಂದೇಹವಿಲ್ಲ. ಧನಂಜಯ್‌ ಹಾಗೂ ನನ್ನ ಪಾತ್ರ ಜೊತೆ ಜೊತೆಯಾಗಿ ಸಾಗುತ್ತದೆ. ವಿಜಯ ಪ್ರಸಾದ್‌ ಸಿನಿಮಾ ಎಂದರೆ ನನಗೆ ಅಲ್ಲೊಂದು ವಿಭಿನ್ನ ಪಾತ್ರವಿರುತ್ತದೆ. ಈ ಚಿತ್ರದಲ್ಲೂ ಅದೇ ರೀತಿಯ ಪಾತ್ರ ಸಿಕ್ಕಿದೆ. ನಾನಂತೂ ಈ ಸಿನಿಮಾದ ಮೇಲೆ ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇನೆ’ ಎನ್ನುವುದು ಸುಮನ್‌ ಮಾತು. ‌

ಇದನ್ನೂ ಓದಿ: ಮಾಲ್‌ ನಲ್ಲಿ ಸಿನಿಮಾ ಪ್ರಚಾರ: ಜನಸಂದಣಿಯಲ್ಲಿ ಖ್ಯಾತ ನಟಿಯರಿಗೆ ದೈಹಿಕ ಕಿರುಕುಳ

ಇನ್ನು, ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್‌ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್‌ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್‌ ಬಜೆಟ್‌ ಸಿನಿಮಾ ಎಂಬುದು ಗಮನಾರ್ಹ.

Advertisement

ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾಸಮೂಹವೇ ಇದೆ ಎಂಬುದು ಮತ್ತೂಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ವೀಣಾ ಸುಂದರ್‌, ದತ್ತಣ್ಣ, ಹೇಮಾದತ್‌ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ. ಕೆ.ಎ.ಸುರೇಶ್‌ ಈ ಚಿತ್ರದ ನಿರ್ಮಾಪಕರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next