Advertisement

ಆಡಿಯೋ ಅಲ್ಲ ಬೇಕಾದರೆ ಮಿಸೈಲ್ ನ್ನೇ ಹೊರ ಬಿಡಲಿ, ಹೆಚ್ ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

12:26 PM Jul 07, 2021 | Team Udayavani |

ಬೆಂಗಳೂರು:  ಕುಮಾರಸ್ವಾಮಿ ಅವರು  ಹುಚ್ಚುಚ್ಚರಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಅಕ್ರಮ ಪರ ಹೋರಾಟ ಮಾಡಿದರೆ ನನ್ನ ವಿರೋಧಿಸುತ್ತೇನೆ ಎಂದು ಸಂಸದೆ ಸುಮಲತಾ ಗುಡುಗಿದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಡ್ಯಾಂ ಬಿರುಕು ವಿಚಾರವನ್ನು ನನಗಿರುವ ಮಾಹಿತಿಯ ಆಧಾರದಲ್ಲಿ ಹೇಳಿದ್ದೇನೆ. ಇದು ನನ್ನ ಅಭಿಪ್ರಾಯ ಬೇರೆಯವರು ಏನು ಹೇಳಿದ್ದಾರೋ ಗೊತ್ತಿಲ್ಲ. ಜನರಿಗೆ ಒಳ್ಳೆಯದಾಗಬೇಕೆಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇನೆ ಇದರಿಂದ ಏನು ಪ್ರತಿಫಲವನ್ನೂ ಬಯಸದೆ ಹೋರಾಟ ಮಾಡುತ್ತೇನೆ ಈ ಹೋರಾಟದಲ್ಲಿ ಮಂಡ್ಯ ಜಿಲ್ಲೆಯ ಜನ ನನ್ನ ಜೊತೆ ಇದ್ದಾರೆ ಎನ್ನುವ ವಿಶ್ವಾಸ ಇದೆ ಎಂದರು.

ಮಂಡ್ಯ ಜಿಲ್ಲೆಯ ಶಾಸಕರು ಅವರ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ.ಅದರ ಬದಲಿಗೆ ಎಂಪಿ ಕೆಲಸ ಮಾಡುತ್ತಿಲ್ಲ ಎಂದು ತಿರುಚುವುದು ಯಾಕೆ ? ಎಂಪಿ ಕೆಲಸ ಯಾವುದು, ಎಂಎಲ್‌ಎ ಕೆಲಸ ಯಾವುದು ಅಂತಾ ಇವರಿಗೆ ಗೊತ್ತಿಲ್ಲವಾ ? ಎಂದು ಗುಡುಗಿದರು.

ಇದನ್ನೂ ಓದಿ: ದೆಹಲಿಗೆ ದಿಢೀರ್ ಭೇಟಿ: ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದ ಸಚಿವ ಮುರುಗೇಶ್ ನಿರಾಣಿ

ಜಲಾಶಯ, ನದಿಗಳು ರಾಷ್ಟ್ರೀಯ ಸಂಪತ್ತು ಅದನ್ನು ರಕ್ಷಿಸುವ ಜವಾಬ್ದಾರಿ ನನ್ನದೂ ಕೂಡ ಆಗಿರುತ್ತದೆ. ನನ್ನದು ಏಕಾಂಗಿ ಹೋರಾಟವಲ್ಲ ಜನರು ನನ್ನ ಜೊತೆ ಇದ್ದಾರೆ. ಜಿಲ್ಲೆಯ ಶಾಸಕರು ನನ್ನ ಪರವಾಗಿ ಎಂದೂ ಇಲ್ಲ. ನನಗೆ ಅವರು ಬೇಕಾಗಿಯೂ ಇಲ್ಲ.ಅವರು ನನ್ನ ಜೊತೆ ಬಂದರೆ ಒಳ್ಳೆಯದು ಸ್ವಾಗತಿಸುತ್ತೇನೆ. ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಡೆಯುತ್ತಿದೆ ಎಂದು ಹೇಳಿದರು.

Advertisement

ಪ್ರಜ್ವಲ್ ಅವನ್ನು ಕುಮಾರಸ್ವಾಮಿ ನೋಡಿ ಕಲಿಯಲಿ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ಒಂದೇ ಫ್ಯಾಮಿಲಿ, ಒಂದೇ ಪಕ್ಷದಲ್ಲಿ ಇರುವವರು. ಹಾಗಾಗಿ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರನ್ನು ಹೋಲಿಕೆ ಮಾಡಿದೆ. ಇವರು ಪಾರ್ಟಿ ನಡೆಸುತ್ತಿದ್ದಾರಾ ಇಲ್ಲವೇ ಟೆರರಿಸಂ ನಡೆಸುತ್ತಿದ್ದಾರಾ ಎಂಬ ಅನುಮಾನ ಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಾಂಬುಗಳು, ಅಸ್ತ್ರಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಆಡಿಯೋ ಏನು ಬೇಕಾದರೂ ಹೊರ ಬಿಡಲಿ ಬೇಕಾದರೆ ಮಿಸೈಲ್ ನ್ನೇ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next