Advertisement

ದಿಢೀರನೆ ಸಚಿವ ಮುರುಗೇಶ್ ನಿರಾಣಿಯನ್ನು ಭೇಟಿಯಾದ ಸಂಸದೆ ಸುಮಲತಾ ಅಂಬರೀಶ್

05:14 PM Jul 12, 2021 | Girisha |

ಬೆಂಗಳೂರು: ಮಂಡ್ಯ ಲೋಕಸಭಾ ಸದಸ್ಯರಾಗಿರುವ  ಸುಮಲತಾ ಅಂಬರೀಶ್ ಇಂದು ( ಸೋಮವಾರ) ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿರುವ  ಮುರುಗೇಶ್ ನಿರಾಣಿ ಅವರನ್ನು ಸಚಿವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

Advertisement

ಇದೇ ವೇಳೆ ಸಚಿವರಿಗೆ ಮನವಿ ಸಲ್ಲಿಸಿರುವ ಸುಮಲತಾ ಅಂಬರೀಶ್, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಲವು ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಗೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ, ಪರಿಸರಕ್ಕೆ ಹಾಗೂ ಕೆಆರ್ ಎಸ್ ಅಣೆಕಟ್ಟೆಗೆ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿದೆ. ಈ ಗಣಿಗಾರಿಗೆಯನ್ನು ಕೂಡಲೇ ತಡೆಯಬೇಕೆಂದು ಸಚಿವರಿಗೆ ಸುಮಲತಾ ಪತ್ರ ಬರೆದಿದ್ದಾರೆ.

ಗಣಿಗಾರಿಗೆ ಕುರಿತಂತೆ ಈ ಹಿಂದೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ಅಲ್ಲದೆ ರಾಜಧನ 1200 ಕೋಟಿ ಮತ್ತು ದಂಡವನ್ನು ವಸೂಲಾತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಒಪ್ಪಿಸಬೇಕೆಂದು ಸುಮಲತಾ ಅಂಬರೀಶ್ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಇನ್ನು ಕಳೆದ ಹಲವು ದಿನಗಳಿಂದ ಕೆಆರ್ ಎಸ್ ಬಿರುಕು ವಿಚಾರವಾಗಿ ಮತ್ತು ಅಕ್ರಮ ಗಣಿಗಾರಿಗೆ ಕುರಿತಂತೆ ಸುಮಲತಾ ಅಂಬರೀಶ್  ಮತ್ತು ಕುಮಾರಸ್ವಾಮಿ ನಡುವೆ ವಾಗ್ವಾದ ನಡೆದಿದ್ದವು. ಇದೀಗ ಮನವಿ ಪತ್ರ ಸಲ್ಲಿಕೆ ಮಾಡಿರುವುದು ಕೂಡ ಎಲ್ಲರ ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next