Advertisement

ಸುಮಲತಾ ಅಂಬರೀಶ್‌ ಈಗ ಸಿಎಂ!

10:13 AM Jul 03, 2022 | Team Udayavani |

ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಸುಮಲತಾ ಅಂಬರೀಶ್‌, ನಂತರ ಬದಲಾದ ಸನ್ನಿವೇಶದಲ್ಲಿ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡವರು. ಸದ್ಯ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಪ್ರತಿನಿಧಿಸುತ್ತಿರುವ ಸುಮಲತಾ ಅಂಬರೀಶ್‌, ಶೀಘ್ರದಲ್ಲಿಯೇ ಕರ್ನಾಟಕದ ಮಹಿಳಾ ಮುಖ್ಯಮಂತ್ರಿ (ಸಿ.ಎಂ) ಆಗಿ ಕಾಣಿಸಿಕೊಳ್ಳಲಿದ್ದಾರೆ!

Advertisement

ಹೌದು, ಸುಮಲತಾ ಅಂಬರೀಶ್‌ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ (ಸಿ.ಎಂ) ಆಗಿ ಕಾಣಿಸಿಕೊಳ್ಳುತ್ತಿರುವುದು ನಿಜ. ಆದರೆ ಅದು ಸದ್ಯ ರಿಯಲ್‌ ಆಗಿ ಅಲ್ಲ, ಬದಲಾಗಿ ರೀಲ್‌ನಲ್ಲಿ. ಶ್ವೇತಾ ಶ್ರೀವಾತ್ಸವ್‌ ಅಭಿನಯದ “ಹೋಪ್‌’ ಸಿನಿಮಾ ಇದೇ ಜುಲೈ. 8 ರಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾದಲ್ಲಿ ನಟಿ ಸುಮಲತಾ ಅಂಬರೀಶ್‌ ಕರ್ನಾಟಕದ ಮೊದಲ ಮಹಿಳಾ ಸಿ. ಎಂ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಹೋಪ್‌’ ಸಿನಿಮಾದಲ್ಲಿ ಪ್ರಭಾವಿ ಮಹಿಳಾ ಸಿಎಂ ಪಾತ್ರ ಇದಾಗಿದ್ದರಿಂದ, ಈ ಪಾತ್ರಕ್ಕೆ ಸುಮಲತಾ ಅವರೇ ಸೂಕ್ತ ಎಂಬುದು ಚಿತ್ರತಂಡದ ಬಲವಾದ ನಂಬಿಕೆಯಾಗಿತ್ತು. ಅದರಂತೆ ಸುಮಲತಾ ಅವರನ್ನೇ ಈ ಪಾತ್ರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ ಚಿತ್ರತಂಡ.

ಸುಮಲತಾ ಮೊದಲ ಬಾರಿಗೆ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಮಾತನಾಡುವ “ಹೋಪ್‌’ ಚಿತ್ರದ ನಿರ್ದೇಶಕ ಅಂಬರೀಶ್‌ ಎಂ., “ನಮ್ಮ ಸಿನಿಮಾ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಪೊಲಿಟಿಕಲ್‌ ಥ್ರಿಲ್ಲರ್‌ ಡ್ರಾಮಾ ಆಗಿದ್ದರಿಂದ, ಕೆಲವು ಪಾತ್ರಗಳನ್ನು ಅಂಥದ್ದೇ ಇಮೇಜ್‌ ಇರುವ ಕಲಾವಿದರು ಮಾಡಿದರೆ ಮಾತ್ರ ಆ ಪಾತ್ರಗಳಿಗೆ ಜಸ್ಟೀಸ್‌ ಕೊಡಲು ಸಾಧ್ಯವಾಗುತ್ತಿತ್ತು. ಅಂಥದ್ದೇ ಒಂದು ಪಾತ್ರ ಸುಮಲತಾ ಅವರದ್ದು. “ಹೋಪ್‌’ ಸಿನಿಮಾದಲ್ಲಿ ಅವರು ತುಂಬ ಪವರ್‌ಫ‌ುಲ್‌ ಸಿ. ಎಂ ಆಗಿ ಕಥೆಗೆ ಟ್ವಿಸ್ಟ್‌ ನೀಡುವಂಥ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೂ ಕಾಣಿಸಿಕೊಂಡಿರದ, ನೋಡುಗರಿಗೆ ಇಷ್ಟವಾಗುವಂಥ ಪಾತ್ರ ಅವರದ್ದು’ ಎಂದು ಪಾತ್ರ ಪರಿಚಯ ಮಾಡಿಕೊಡುತ್ತಾರೆ.

ಇದನ್ನೂ ಓದಿ:30ರ ಹರೆಯದಲ್ಲೇ ಇಹಲೋಕ ತ್ಯಜಿಸಿದ ನಟ ಕಿಶೋರ್ ದಾಸ್

ಇನ್ನು “ಹೋಪ್‌’ ಸಿನಿಮಾದ ಕಥೆ ಕೇಳುತ್ತಿದ್ದಂತೆ, ಇಷ್ಟ ಪಟ್ಟಿದ್ದ ಸುಮಲತಾ ಅಂಬರೀಶ್‌ ಈ ಪಾತ್ರವನ್ನು ಮಾಡಲು ಖುಷಿಯಿಂದ ಒಪ್ಪಿಕೊಂಡರು ಎನ್ನುವುದು ಚಿತ್ರತಂಡ ಮಾತು. “ಹೋಪ್‌’ ಸಿನಿಮಾದ ಕಥೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಅದರ ಹಿಂದಿನ ರಾಜಕೀಯ ಎಲ್ಲದರ ಸುತ್ತ ನಡೆಯುತ್ತದೆ. ಅದರಲ್ಲೂ ದಕ್ಷ ಮತ್ತು ಪ್ರಾಮಾಣಿಕ ಮಹಿಳಾ ಅಧಿಕಾರಿಯೊಬ್ಬರು ವ್ಯವಸ್ಥೆಯೊಳಗಿನ ಸಂಚಿಗೆ ಹೇಗೆ ಸಿಲುಕುತ್ತಾರೆ, ಅದರ ವಿರುದ್ದ ಹೇಗೆ ಹೋರಾಡುತ್ತಾರೆ ಅನ್ನೋದು ಸಿನಿಮಾದ ಕಥೆ. “ತಮ್ಮ ರಾಜಕೀಯ ಜೀವನದಲ್ಲಿ ಕೂಡ ಸಂಸದೆಯಾಗಿ ಸುಮಲತಾ ಅಂಬರೀಶ್‌

Advertisement

ನಾವು  ಸಿನಿಮಾದಲ್ಲಿ ಹೇಳಲು ಹೊರಟಿರುವ ವಿಷಯವನ್ನು ತೀರಾ ಹತ್ತಿರದಿಂದ ನೋಡಿರುವುದರಿಂದ, ಈ ಸಿನಿಮಾದ ಕಥೆ ಕೇಳುತ್ತಿದ್ದಂತೆ, ಇದರಲ್ಲಿ ಒಂದು ಒಳ್ಳೆಯ ಸಂದೇಶವಿದೆ. ಹಾಗಾಗಿ ಈ ಸಿನಿಮಾವನ್ನು ಮಾಡುತ್ತೇನೆ. ಎಂದು ಒಪ್ಪಿಕೊಂಡರು’ ಎನ್ನುತ್ತದೆ ಚಿತ್ರತಂಡ.

“ಗೋಲ್ಡಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ವರ್ಷಾ ಸಂಜೀವ್‌ ನಿರ್ಮಾಣದಲ್ಲಿ ಮೂಡಿಬಂದಿರುವ “ಹೋಪ್‌’ ಚಿತ್ರಕ್ಕೆ  ಅಂಬರೀಶ್‌ ಎಂ. ನಿರ್ದೇಶನವಿದೆ.

ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್‌ ಮತ್ತು ಸುಮಲತಾ ಅಂಬರೀಶ್‌ ಅವರೊಂದಿಗೆ ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ಬೆಳವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಅಶ್ವಿ‌ನ್‌ ಹಾಸನ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next