Advertisement

ಸುಳ್ಯ ನಗರ: ವಾಹನ ನಿಲುಗಡೆ ಸಮಸ್ಯೆ…ಪರಿಹಾರಕ್ಕೆ ಒಂದು ಬದಿ ನಿಲುಗಡೆ ಪದ್ಧತಿ ಜಾರಿ

09:39 PM Jan 09, 2023 | Team Udayavani |

ಸುಳ್ಯ : ಅಭಿವೃದ್ಧಿ ಹೊಂದುತ್ತಿರುವ ಸುಳ್ಯ ನಗರದಲ್ಲಿ ಪೊಲೀಸ್‌ ಇಲಾಖೆ, ಸ್ಥಳೀಯಾಡಳಿತ ಕೈಗೊಂಡ ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆಯು ನಗರದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಪರಿಹಾರಕ್ಕೆ ಪೂರಕವಾಗಿದೆ.

Advertisement

ಸುಳ್ಯ ನಗರದಲ್ಲಿ ಮಾಣಿ-ಮೈಸೂರು ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿ ವಾಹನ ಸವಾರರು ರಸ್ತೆಯ ಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿರುವುದು ಇನ್ನೂ ಸಮಸ್ಯೆಯಾಗಿತ್ತು.

ಸುಳ್ಯ ನಗರದಲ್ಲಿ ಈ ಹಿಂದೆ ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆ ಮಾಡಿದ್ದರೂ ಅದು ಬಳಿಕ ಮುಂದುವರಿಯಲಿಲ್ಲ. ಇದೀಗ ಆ ವ್ಯವಸ್ಥೆಯನ್ನು ಮರುಜಾರಿಗೆ ಸ್ಥಳೀಯಾಡಳಿತ, ಪೊಲೀಸ್‌ ಇಲಾಖೆ, ವರ್ತಕರು, ಸರ್ವಿಸ್‌ ವಾಹನ ಚಾಲಕ-ಮಾಲಕರು ಸಭೆ ನಡೆಸಿ ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ.

ಪ್ರತೀ ದಿನ ಬದಲಾವಣೆ
ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ರಸ್ತೆಯ ಒಂದು ಬದಿ ವಾಹನ ನಿಲುಗಡೆ ಮಾಡಲು ಅವಕಾಶ ಹಾಗೂ ಇನ್ನೊಂದು ಬದಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಒಂದು ದಿನ ಬಲ ಬದಿ ವಾಹನ ನಿಲುಗಡೆಗೆ ಅವಕಾಶ ಇದ್ದರೆ, ಇನ್ನೊಂದು ದಿನ ಎಡ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿರಲಿದೆ. ಇದಕ್ಕೆ ಪೂರಕ ಎಂಬಂತೆ ವರ್ತಕರು ಸಹಕರಿ ಸುತ್ತಿದ್ದು, ವಾಹನ ನಿಲುಗಡೆ ಮಾಡಲು ಇಲ್ಲದ ರಸ್ತೆ ಬದಿಯ ವರ್ತಕರು ರಸ್ತೆ ಬದಿ ವಾಹನ ನಿಲುಗಡೆಗೆ ಅವಕಾಶವಿಲ್ಲ ಎನ್ನುವ ಸೂಚನ ಫ‌ಲಕ ಅಳವಡಿಸಿ ಸೂಚನೆ ನೀಡುತ್ತಾರೆ. ನಗರದ ಪ್ರಮುಖ ಜಂಕ್ಷನ್‌ಗಳ ಸಮೀಪ ಎರಡೂ ಬದಿಯಲ್ಲೂ ವಾಹನ ನಿಲುಗಡೆ ಮಾಡಲು ಅವಕಾಶ ನಿಷೇಧಿಸಲಾಗಿದೆ.

ಇಷ್ಟೆಲ್ಲ ವ್ಯವಸ್ಥೆ ಕಲ್ಪಿಸಿದ್ದರೂ ಕೆಲವೊಮ್ಮೆ ಬೃಹತ್‌ ವಾಹನಗಳ ಸಂಚಾರ, ಬಸ್‌ಗಳು ತಿರುಗುವ ಸಂದರ್ಭದಲ್ಲಿ ನಗರದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಜಂಕ್ಷನ್‌ಗಳಲ್ಲಿ ಒಂದೊಮ್ಮೆ ವಾಹನ ದಟ್ಟಣೆ ಆಗುವ ವೇಳೆಯೂ ಸಂಚಾರ ವ್ಯತ್ಯಯವಾಗುತ್ತದೆ. ನಗರದ ರಸ್ತೆಯನ್ನು ಅಗಲಗೊಳಿಸಿದರೆ ಇವೆಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬುದು ಜನತೆಯ ಮಾತು.

Advertisement

ಯಶಸ್ವಿ ಹಂತದಲ್ಲಿದೆ
ಒಂದು ಬದಿ ವಾಹನ ನಿಲುಗಡೆ ಯಿಂದಾಗಿ ನಗರದಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಕಡಿಮೆಯಾಗಿದೆ. ಜನರು, ವಾಹನ ಸವಾರರು, ವರ್ತಕರು, ಸೇರಿದಂತೆ ಎಲ್ಲರೂ ಸೂಚನೆಗಳನ್ನು ಪಾಲಿಸುತ್ತಿರುವುದರಿಂದ ಕ್ರಮ ಯಶಸ್ವಿ ಹಂತದಲ್ಲಿದೆ.
– ಸುಧಾಕರ್‌ ಎಂ.ಎಚ್‌., ಮುಖ್ಯಾಧಿಕಾರಿ ನ.ಪಂ. ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next