Advertisement
ಸುಳ್ಯ ನಗರದಲ್ಲಿ ಮಾಣಿ-ಮೈಸೂರು ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿ ವಾಹನ ಸವಾರರು ರಸ್ತೆಯ ಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿರುವುದು ಇನ್ನೂ ಸಮಸ್ಯೆಯಾಗಿತ್ತು.
ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ರಸ್ತೆಯ ಒಂದು ಬದಿ ವಾಹನ ನಿಲುಗಡೆ ಮಾಡಲು ಅವಕಾಶ ಹಾಗೂ ಇನ್ನೊಂದು ಬದಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಒಂದು ದಿನ ಬಲ ಬದಿ ವಾಹನ ನಿಲುಗಡೆಗೆ ಅವಕಾಶ ಇದ್ದರೆ, ಇನ್ನೊಂದು ದಿನ ಎಡ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿರಲಿದೆ. ಇದಕ್ಕೆ ಪೂರಕ ಎಂಬಂತೆ ವರ್ತಕರು ಸಹಕರಿ ಸುತ್ತಿದ್ದು, ವಾಹನ ನಿಲುಗಡೆ ಮಾಡಲು ಇಲ್ಲದ ರಸ್ತೆ ಬದಿಯ ವರ್ತಕರು ರಸ್ತೆ ಬದಿ ವಾಹನ ನಿಲುಗಡೆಗೆ ಅವಕಾಶವಿಲ್ಲ ಎನ್ನುವ ಸೂಚನ ಫಲಕ ಅಳವಡಿಸಿ ಸೂಚನೆ ನೀಡುತ್ತಾರೆ. ನಗರದ ಪ್ರಮುಖ ಜಂಕ್ಷನ್‌ಗಳ ಸಮೀಪ ಎರಡೂ ಬದಿಯಲ್ಲೂ ವಾಹನ ನಿಲುಗಡೆ ಮಾಡಲು ಅವಕಾಶ ನಿಷೇಧಿಸಲಾಗಿದೆ.
Related Articles
Advertisement
ಯಶಸ್ವಿ ಹಂತದಲ್ಲಿದೆಒಂದು ಬದಿ ವಾಹನ ನಿಲುಗಡೆ ಯಿಂದಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಿದೆ. ಜನರು, ವಾಹನ ಸವಾರರು, ವರ್ತಕರು, ಸೇರಿದಂತೆ ಎಲ್ಲರೂ ಸೂಚನೆಗಳನ್ನು ಪಾಲಿಸುತ್ತಿರುವುದರಿಂದ ಕ್ರಮ ಯಶಸ್ವಿ ಹಂತದಲ್ಲಿದೆ.
– ಸುಧಾಕರ್ ಎಂ.ಎಚ್., ಮುಖ್ಯಾಧಿಕಾರಿ ನ.ಪಂ. ಸುಳ್ಯ