Advertisement

ಸುಳ್ಯ: ವರ್ಲಿ ವೈಭವದಲ್ಲಿ ಕಂಗೊಳಿಸುವ ಸಿಪಿಐ ಕಚೇರಿ

10:26 PM Nov 04, 2020 | mahesh |

ಸುಳ್ಯ: ಸುಂದರವಾಗಿ ಅಲಂಕ ರಿಸಿದ ಆರ್ಟ್‌ ಗ್ಯಾಲರಿಯಂತೆ ಸುಳ್ಯ ವೃತ್ತ ನಿರೀಕ್ಷಕರ ಕಚೇರಿ ನವೀಕರಣಗೊಂಡು ನಳ ನಳಿಸುತ್ತಿದೆ.

Advertisement

ಕಚೇರಿ ಸುತ್ತಲೂ ಹಸುರು ಹೊದಿಕೆ, ನೆರಳು ಕೊಡುವ ಮರ ಗಿಡಗಳು, ಮರದಲ್ಲಿ ಹಕ್ಕಿಗಳ ಚಿಲಿ-ಪಿಲಿ ನಾದ, ಸುವಾಸನೆ ಬೀರುವ ಔಷಧದ ಗಿಡಗಳು, ಕಚೇರಿ ಆವರಣಕ್ಕೆ ಬಂದರೆ ಮನ ಸೆಳೆಯುವ ವರ್ಲಿ ವರ್ಣ ವೈಭವ… ಇದು ಸುಳ್ಯ ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿಯ ಹೊಸ ನೋಟ.

ಸುಳ್ಯದ ವಿವೇಕಾನಂದ ವೃತ್ತದ ಬಳಿಯ ಲ್ಲಿರುವ ವೃತ್ತ ನಿರೀಕ್ಷಕರ ಕಚೇರಿ 2003ರಲ್ಲಿ ನಿರ್ಮಾಣಗೊಂಡಿತ್ತು. ಇದೀಗ ನವೀಕರಣಗೊಂಡು ಮನ ಸೆಳೆಯು ತ್ತಿದೆ. ಕಚೇರಿ ಕಟ್ಟಡಕ್ಕೆ ಬಣ್ಣ ಬಳಿದು ಸುಂದರ ಗೊಳಿಸಲಾಗಿದೆ. ಗೋಡೆಯಲ್ಲಿ ಮತ್ತು ಕಂಬಗಳಲ್ಲಿ ಆಕರ್ಷಕ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಕಚೇರಿಯ ಆವರಣದ ಗೋಡೆಗೆ ಬಣ್ಣ ಬಳಿಯಲಾಗಿದ್ದು ಅದರ ಮೇಲೆ ಬಿಳಿ ಬಣ್ಣದ ವರ್ಲಿ ಚಿತ್ರಗಳು ಅರಳಿ ನಿಂತಿವೆ. ವರ್ಲಿ ಚಿತ್ರದ ಮಧ್ಯೆ “ಕಾನೂನನ್ನು ಗೌರವಿಸೋಣ’, “ಕೊರೊನಾ ಭಯ ಬೇಡ ಎಚ್ಚರವಿರಲಿ’ ಇತ್ಯಾದಿ ಸಂದೇಶಗಳನ್ನೂ ಬರೆಯಲಾಗಿದೆ. ಎಲ್ಲೆಡೆ ಬಣ್ಣ ಬಳಿದು ಕಚೇರಿ ವರ್ಣಮಯವಾಗಿದೆ.

ಕಚೇರಿ ಮುಂಭಾಗದಲ್ಲಿ ಇಂಟರ್‌ಲಾಕ್‌ ಅಳವಡಿಸಿ ಇಕ್ಕೆಡೆಗಳಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಹಸುರು ಹುಲ್ಲು ಹಾಸಲಾಗಿದೆ. ಅಲ್ಲಲ್ಲಿ ಮರಗಳಿಗೆ ಸುತ್ತಲೂ ಕಟ್ಟೆ ನಿರ್ಮಿಸಿ ಬಣ್ಣ ಬಳಿಯಲಾಗಿದೆ. ಮಾವು, ಹಲಸು, ಸೇರಿದಂತೆ ಹಲವು ಹಣ್ಣಿನ ಮರಗಳನ್ನು ಬೆಳೆಸಲಾಗಿದೆ. ಈ ಮರಗಳಲ್ಲಿ ಹಲವು ಪಕ್ಷಿಗಳು ಮನೆ ಮಾಡಿದ್ದು ಚಿಲಿ ಪಿಲಿಗುಟ್ಟುತ್ತಿವೆ. ಅಂಗಳದಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌ ಹಾಕಲಾಗಿದೆ. ಕಚೇರಿಯ ಒಳಭಾಗವನ್ನು ಆಕರ್ಷಕವಾಗಿ ವಿನ್ಯಾಸ ಗೊಳಿಸಲಾಗಿದೆ. ನೆಲಕ್ಕೆ ಟೈಲ್ಸ್‌ ಅಳವಡಿಸಿ ಹೊಸ ಪೀಠೊಪಕರಣ ಜೋಡಿಸಲಾಗಿದೆ. ಒಟ್ಟಿನಲ್ಲಿ ಕಚೇರಿಯ ಒಳಭಾಗ ಮತ್ತು ಹೊರ ಭಾಗವನ್ನು ನವೀಕರಿಸಿ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಕಚೇರಿಯನ್ನು ಸುಂದರಗೊಳಿಸುವುದರ ಜತೆಗೆ ಪೊಲೀಸ್‌ ಇಲಾಖೆ ಕಚೇರಿಯನ್ನು ಜನಸ್ನೇಹಿಯಾಗಿ ಮಾಡಲು ಹೊರಟಂತಿದೆ.

ಸೇವೆ ನೀಡಲು ಸದಾ ಸಿದ್ಧ
ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿಯು ಜನಸ್ನೇಹಿ ಆಗಿರಬೇಕು ಮತ್ತು ಇಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು ಎಂಬ ಕಲ್ಪನೆಯಲ್ಲಿ ಕಚೇರಿಯನ್ನು ನವೀಕರಣ ಮಾಡಿ ವರ್ಲಿ ಚಿತ್ರದ ಮೂಲಕ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಕಚೇರಿ ಮತ್ತು ಪರಿಸರವನ್ನು ಸುಂದರಗೊಳಿಸಲಾಗಿದೆ. ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪೊಲೀಸ್‌ ಇಲಾಖೆ ಸದಾ ಸಿದ್ಧವಾಗಿದೆ.
-ನವೀನ್‌ಚಂದ್ರ ಜೋಗಿ ವೃತ್ತ ನಿರೀಕ್ಷಕರು, ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next