Advertisement

ಮರ್ಕಂಜ: ಪನ್ನೆಬೈಲು ಗದ್ದೆಯಲ್ಲಿ ಕಂಡಡೊಂಜಿ ದಿನ

01:03 PM Jul 20, 2018 | |

ಸುಳ್ಯ : ರೋಟರಿ ಪ.ಪೂ.ಕಾಲೇಜು ಹಾಗೂ ಅಮರ ಕ್ರೀಡಾ ಸಂಘಟನಾ ಸಮಿತಿ ಜಂಟಿ ಆಶ್ರಯದಲ್ಲಿ ಮರ್ಕಂಜ ಪನ್ನೆಬೈಲು ಗದ್ದೆಯಲ್ಲಿ ಕಂಡಡೊಂಜಿ ದಿನ ನಡೆಯಿತು. ಪನ್ನೆಬೈಲು ಮಂಜುನಾಥ ಆಚಾರ್ಯ ಅವರು ಕಳಸಕ್ಕೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿದರು. ಅರಂತೋಡು ಜಿ.ಪಂ.ಸದಸ್ಯ ಹರೀಶ್‌ ಕಂಜಿಪಿಲಿ ಅವರು ಸಭಾಧ್ಯಕ್ಷತೆ ವಹಿಸಿ, ಕೆಸರುಗದ್ದೆ ಕ್ರೀಡೆಯ ಮಹತ್ವದ ಕುರಿತು ವಿವರಿಸಿದರು.

Advertisement

ಈ ಸಂದರ್ಭದಲ್ಲಿ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಜಿತೇಂದ್ರ ಎನ್‌.ಎ., ರೋಟರಿ ಕ್ಲಬ್‌ ಕೋಶಾಧಿಕಾರಿ ಗಿರಿಜಾ ಶಂಕರ ತುದಿಯಡ್ಕ, ಮರ್ಕಂಜ ಸಿ.ಎ. ಬ್ಯಾಂಕ್‌ ಅಧುಕ್ಷ ರುಕ್ಮಯ ಗೌಡ, ಗ್ರಾ.ಪಂ.ಸದಸ್ಯೆ ಶಕುಂತಳಾ, ರೋಟರಿ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಶೋಭಾ, ಅಮರ ಕ್ರೀಡಾ ಸಂಘಟನೆ ಸಮಿತಿ ಅಧ್ಯಕ್ಷ ಪ್ರದೀಪ್‌ ಬೊಳ್ಳೂರು ಉಪಸ್ಥಿತರಿದ್ದರು. ಕ್ರೀಡಾಕೂಟಕ್ಕೆ ಮರ್ಕಂಜ ಗುಳಿಗ ಮತ್ತು ನಾಗ ಸಾನಿಧ್ಯದ ಅಧ್ಯಕ್ಷ ಅಮೃತ್‌ ಕುಮಾರ್‌ ರೈ, ನಯನ್‌ ಕುಮಾರ್‌ ಜೈನ್‌, ವೆಂಕಟರಮಣ ಗೌಡ ಅಂಗಡಿಮಜಲು, ಊರವರು ಸಹಕರಿಸಿದರು. ವಿದ್ಯಾರ್ಥಿನಿ ಸೀಮಿತಾ ಸ್ವಾಗತಿಸಿ, ಸುರಕ್ಷಾ ವಂದಿಸಿದರು. ಪ್ರತೀಕ್ಷಾ ಕೆ.ಪಿ. ನಿರೂ ಪಿಸಿದರು. ಕಕೆಸರುಗದ್ದೆ ಹಗ್ಗಜಗ್ಗಾಟ, ಹ್ಯಾಂಡ್‌ಬಾಲ್‌, ಕೆಸರಿನಲ್ಲಿ ಓಟ,ರಿಲೇ, ಬಲೂನ್‌ ಆಟ, ಡ್ಯಾನ್ಸ್‌, ಸೋಗೆ ಆಯ್ಕೆ ಓಟ, ರಗ್ಬಿ  ಸ್ಪರ್ಧೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next